ಕೇಂದ್ರ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಬಂಪರ್; ಜುಲೈ ಅಂತ್ಯಕ್ಕೆ ಸಿಗಲಿದೆ ನಿರೀಕ್ಷೆಗಿಂತ ಹೆಚ್ಚಿನ ವೇತನ..

0
968

ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ, ಸರ್ಕಾರೀ ನೌಕರರಿಗೆ ಹಲವು ಸೌಲಭ್ಯವನ್ನು ನೀಡುತ್ತಿದೆ. ಈಗಾಗಲೇ ಮೊದಲ ಬಜೆಟ್ ಮಂಡನೆಯಾಗಿದ್ದು, ಅದರಲ್ಲಿ ಸರ್ಕಾರಿ ನೌಕರರಿಗೆ ನಿರಾಶೆ ಉಂಟಾಗಿತ್ತು, ಅದಕ್ಕಾಗಿ ಇದೆ ಜುಲೈ ಕೊನೆಯದಂದು ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ತೀರ್ಮಾನವಾಗಿದ್ದು, ಜುಲೈ ತಿಂಗಳ ಅಂತ್ಯಕ್ಕೆ ಈ ಬಗ್ಗೆ ಅಧಿಕೃತ ಆದೇಶ ನಿರೀಕ್ಷಿಸಬಹುದಾಗಿದೆ. ಇದರಿಂದ ತುಟ್ಟಿಭತ್ಯೆ ಪ್ರಮಾಣ ಕೂಡಾ ಶೇ3ರ ಬದಲಿಗೆ ಶೇ 4ಕ್ಕಿಂತ ಅಧಿಕವಾಗುವ ನಿರೀಕ್ಷೆಯಿದೆ ಎಂದು ಅಖಿಲ ಭಾರತ ಅಕೌಂಟ್ಸ್ ಹಾಗೂ ಆಡಿಟ್ ಸಂಸ್ಥೆಯ ಸಹಾಯಕ ಕಾರ್ಯದರ್ಶಿ ಹರಿಶಂಕರ್ ತಿವಾರಿ ತಿಳಿಸಿದ್ದಾರೆ.

Also read: ವಿಭಿನ್ನ ರೀತಿಯಲ್ಲಿ ಮಹಾತ್ಮಾ ಗಾಂಧಿ ಅವರ 150ನೇ ಜನ್ಮ ದಿನಾಚರಣೆಗೆ ಮೋದಿ ತಯಾರಿ; ಕ್ಷೇತ್ರ ವ್ಯಾಪ್ತಿಯಲ್ಲಿ ಪಾದಯಾತ್ರೆ ಮಾಡುವಂತೆ ಸಂಸದರಿಗೆ ಮೋದಿ ಸೂಚನೆ..

ಹೌದು ಮೋದಿ ಸರ್ಕಾರ್ 2.0 ನ ಚೊಚ್ಚಲ ಬಜೆಟ್ ನಲ್ಲಿ ಸರ್ಕಾರಿ ನೌಕರರ ಬೇಡಿಕೆ, 7ನೇ ವೇತನ ಆಯೋಗದ ಶಿಫಾರಸು ಅನುಷ್ಠಾನ, ನಿವೃತ್ತಿ ವಯಸ್ಸು ಏರಿಕೆ, ಕನಿಷ್ಟ ವೇತನ ಮೊತ್ತ ಏರಿಕೆ ಬಗ್ಗೆ ಯಾವುದೇ ಪ್ರಸ್ತಾಪ ಕಂಡು ಬಂದಿರಲಿಲ್ಲ. ಕೇಂದ್ರ ಸರ್ಕಾರಿ ನೌಕರರು 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕನಿಷ್ಠ ವೇತನವನ್ನು 18,000ರು ನಿಂದ 26,000 ರು ಗೇರಿಸುವಂತೆ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಇನ್ನೂ ಮನ್ನಣೆ ಸಿಕ್ಕಿಲ್ಲ. ಹೀಗಾಗಿ ಸರ್ಕಾರಿ ನೌಕರರು ತಮ್ಮ ಬೇಡಿಕೆ ಈಡೇರಲು ಇನ್ನಷ್ಟು ಕಾಲ ಕಾಯುವುದು ಅನಿವಾರ್ಯ ಎನ್ನಲಾಗಿತ್ತು. ಇಂತಹ ನಿರೀಕ್ಷೆಯಲ್ಲಿ ನೌಕರರಿಗೆ ಕೇಂದ್ರ ಸರ್ಕಾರ ಬಂಪರ್ ನೀಡಲು ಸಜ್ಜಾಗಿದೆ.

ಏನೆಲ್ಲಾ ಏರಿಕೆ?

ಶೇ 5ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಜುಲೈ ತಿಂಗಳಿನಲ್ಲೇ ಸರ್ಕಾರ ಘೋಷಿಸಲು ಸಜ್ಜಾಗಿದ್ದು, ಈ ವಿಷಯಕ್ಕೆ ಕುರಿತು ಬಂದ ಮಾಹಿತಿಯಂತೆ, ಶೇ12 ರಿಂದ ಶೇ 17ಕ್ಕೆ ಡಿಎ ಏರಿಕೆಯಾಗಲಿದೆ. ಗ್ರಾಹಕ ದರ ಸೂಚ್ಯಂಕ, ಸಗಟು ಹಣದುಬ್ಬರ ಗಮನಿಸಿ, ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕ(ಎಐಸಿಪಿಐ) ಏಪ್ರಿಲ್ ನಲ್ಲಿ ಏರಿಕೆಯಾಗಿದೆ. ಕೇಂದ್ರ ಸರ್ಕಾರ ತುಟ್ಟಿ ಭತ್ಯೆ(ಡಿಎ) ಹಾಗೂ ತುಟ್ಟಿ ಪರಿಹಾರ (ಡಿಆರ್) ಗಳನ್ನು ಜುಲೈ 01,2018ರಿಂದ ಅನ್ವಯವಾಗುವಂತೆ ಶೇ.2ರಷ್ಟು ಹೆಚ್ಚಳ ಮಾಡಲಾಗಿತ್ತು. ಶೇ 13.39ರಿಂದ ಶೇ 15.49ಕ್ಕೇರಿಯಾಗಿತ್ತು. ಸುಮಾರು 1.1 ಕೋಟಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ನೆರವಾಗಲಿದ್ದು, ಕೇಂದ್ರ ಸರ್ಕಾರದ ಮೇಲೆ ವಾರ್ಷಿಕವಾಗಿ 6,112.20 ಕೋಟಿ ರೂ. ಹೆಚ್ಚಿನ ಹೊರೆ ಬೀಳಲಿದೆ. 2013-14ರಲ್ಲಿ 63,000 ಕೋಟಿ ಇದ್ದ ಇಲಾಖೆಯ ಬಹೆಟ್ ಈಗ 2018-19ರಲ್ಲಿ 110 ಲಕ್ಷ ಕೋಟಿಗೆ ಏರಿಕೆಯಾಗಿದೆ.

Also read: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೊದಲ ಬಜಟ್; ಜನಪ್ರಿಯ ಯೋಜನೆಗಳ ಸಂಪೂರ್ಣ ವಿವರ ಇಲ್ಲಿದೆ..

ಒಟ್ಟಾರೆ ವೇತನ ಏರಿಕೆ?

ಕಳೆದ ಏಪ್ರಿಲ್ 1 ರಿಂದ 7 ನೇ ವೇತನ ಆಯೋಗದ ವರದಿ ಅನುಷ್ಠಾನವಾಗಲಿದ್ದು, ಆಯೋಗದ ಶಿಫಾರಸು ಮೀರಿ ಕನಿಷ್ಠ ವೇತನವನ್ನು 18,000 ರೂ.ನಿಂದ 21,000 ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇತ್ತು. ಆದರೆ, ಈ ಬಗ್ಗೆ ಯಾವುದೇ ಘೋಷಣೆಯಾಗಲಿಲ್ಲ. ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ನೀತಿ ಸಂಹಿತೆ ಜಾರಿಗೊಂಡು ಯಾವುದೇ ಘೋಷಣೆಗೆ ಅವಕಾಶ ಸಿಗಲಿಲ್ಲ. ಹೀಗಾಗಿ, ಮೂಲ ವೇತನದಲ್ಲಿ ಎಷ್ಟು ಪ್ರಮಾಣ ಏರಿಕೆ ಬೇಡಿಕೆ ಹಾಗೆ ಉಳಿದಿದೆ. ಆದರೆ, ಒಟ್ಟಾರೆ ವೇತನದಲ್ಲಿ 2 ಸಾವಿರ ರು ಏರಿಕೆ ಸಾಧ್ಯತೆ ಬಗ್ಗೆ ಸುಳಿವು ಸಿಕ್ಕಿದೆ.

2014ರಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನ

Also read: ಮೂರು ಮಕ್ಕಳನ್ನು ಹೆತ್ತ ಪಾಲಿಕೆ ಸದಸ್ಯೆಯನ್ನು ಅನರ್ಹ ಗೊಳಿಸಿದ ಕೋರ್ಟ್; ಚುನಾವಣೆ ನಿಲ್ಲುವುದಕ್ಕೆ ಅರ್ಹತೆಗಿಂತ ಫ್ಯಾಮಿಲಿ ಪ್ಲಾನಿಂಗ್ ಮುಖ್ಯವೆಂದ ಸುಪ್ರಿಂ ಕೋರ್ಟ್!!

2014ರಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಶೇಕಡಾ 14ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಸರ್ಕಾರಿ ನೌಕರರು ಇದಕ್ಕೆ ತೃಪ್ತಿ ವ್ಯಕ್ತಪಡಿಸಿರಲಿಲ್ಲ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ಮಾಡಬೇಕೆಂಬ ಬೇಡಿಕೆಯಿಟ್ಟಿದ್ದರು. ತುಟ್ಟಿಭತ್ಯೆ ಹೆಚ್ಚಳವು ಜನವರಿ 01, 2018ರಿಂದ ಜಾರಿಗೆ ಬರಬೇಕಿದ್ದು, 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 61 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ಲಾಭ ತರಲಿದೆ. ಇದರ ಜತೆಗೆ ಈಗ ನಿವೃತ್ತಿ ವಯಸ್ಸು 62ಕ್ಕೇರಿಸಿದರೆ 1.1 ಕೋಟಿ ಮಂದಿಗೆ ಲಾಭವಾಗಲಿದೆ