ರಾಜ್ಯಕ್ಕೆ ಉಚಿತವಾಗಿ ಬರುವ ಅಕ್ಕಿಯನ್ನು ತಮಿಳುನಾಡಿಗೆ ಮಾರಿದ ಸಾಕ್ಷಿಯನ್ನು ಬಿಡುಗಡೆ ಮಾಡಿ ಬಿಎಸ್ ವೈ ಗೆ ವಾರ್ನಿಂಗ್ ಮಾಡಿದ ಡಿ.ಕೆ. ಶಿವಕುಮಾರ್.!

0
368

ಲಾಕ್ ಡೌನ್ ಜಾರಿ ಆದಾಗಿನಿಂದ ರಾಜ್ಯ ಸರ್ಕಾರ ವಿರುದ್ಧ ಆರೋಪಗಳು ಕೇಳಿ ಬರುತಲ್ಲೇ ಇವೇ, ಏಕೆಂದರೆ ಜನರಿಗೆ ನೀಡಬೇಕಾದ ಪಡಿತರ ಮತ್ತು ಔಷಧಿ ವಿತರಣೆಯಲ್ಲಿ ಸರಿಯಾದ ಕ್ರಮ ಕೈಗೊಂಡಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಿದ್ದವು, ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ವಿರೋಧ ವ್ಯಕ್ತಪಡಿಸಿದ್ದು, ಕೊರೊನಾ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಉಚಿತವಾಗಿ ಬರುವ ಅಕ್ಕಿಯನ್ನು ತಮಿಳುನಾಡು ಪಾಲಾಗುತ್ತಿದ್ದು, ಹರಿಯಾಣದಿಂದ ಬಂದ ಅಕ್ಕಿಯನ್ನು‌ ಕಾಳಸಂತೆಯಲ್ಲಿ ಮಾರಿಕೊಳ್ಳಲಾಗಿದೆ. ಈ ಗೋಲ್ ಮಾಲ್ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ಬಂದಿದೆ ಇಲ್ಲೋ ಎಂದು ಡಿ.ಕೆ. ಶಿವಕುಮಾರ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು ಕೇಂದ್ರದಿಂದ ರಾಜ್ಯಕ್ಕೆ ಉಚಿತವಾಗಿ ಬರುವ ಅಕ್ಕಿಯನ್ನು ತಮಿಳುನಾಡಿಗೆ ಪಾಲಾಗುತ್ತಿದ್ದು, ಹರಿಯಾಣದಿಂದ ಬಂದ ಅಕ್ಕಿಯನ್ನು‌ ಕಾಳಸಂತೆಯಲ್ಲಿ ಮಾರಿಕೊಳ್ಳಲಾಗಿದೆ. 1829 ಕ್ವಿಂಟಾಲ್ ಅಕ್ಕಿ ಅಕ್ರಮವಾಗಿ ಮಾರಾಟವಾಗಿದೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಕಿ ಗೋಲ್‌ಮಾಲ್ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿದೆಯೇ ಇಲ್ಲವೋ ಎಂಬುದು ತಿಳಿದಿಲ್ಲ. ಆದರೂ ಮುಖ್ಯಮಂತ್ರಿಗಳ ಗಮನಕ್ಕೆ ನಾವು ಇದನ್ನು ತರಬೇಕಿದೆ. ಆಹಾರ ನಿರೀಕ್ಷಕರಿಗೆ ಒಂದು ಲೋಡ್ ಅಕ್ಕಿ ಕಳಿಸಲಾಗಿದೆ. ಅಕ್ಕಿಯ ಭ್ರಷ್ಟಾಚಾರದ ಬಗ್ಗೆ ಆಗಲೇ ಸುಳಿವು ಕೊಟ್ಟಿದ್ದೆ. ತಮಿಳುನಾಡು ಗಡಿಗೆ ಸಾಗಿಸಲಾಗಿದೆ. ಇದನ್ನು ಬಿಜೆಪಿಯ ಸಕ್ರಿಯ ನಾಯಕರೇ ವ್ಯಾಪಾರ ಮಾಡಿದ್ದಾರೆ. ತಮಿಳುನಾಡಿನ ಹೊಸೂರು ವ್ಯಾಪಾರಿಗೆ ಮಾರಿದ್ದಾರೆ.

ಕಳ್ಳರ ಸಹಾಯಕ್ಕೆ ಸಿಎಂ ನಿಲ್ಲಬಾರದು:

ರಾಜ್ಯದಲ್ಲಿ ಇಷ್ಟೊಂದು ಅಕ್ರಮ ನಡೆಯುತ್ತಿದೆ. ಅಕ್ಕಿ ದಾಸ್ತಾನು ಮಾಡಿದವರ ರಕ್ಷಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೋಗಬಾರದು. ಒಂದು ವೇಳೆ ಹೋಗಿದ್ದೇ ಆದಲ್ಲಿ ಅದು ಮುಖ್ಯಮಂತ್ರಿಗಳು ಪಜೀತಿಗೆ ಸಿಲುಕುತ್ತಾರೆ, ಆಹಾರ ಕಾಯಿದೆಗೆ ಒಂದು ನಿಯಮ ಇದೆ. ಕಾನೂನು ಬಾಹಿರವಾಗಿ ಅಕ್ಕಿ ದಾಸ್ತಾನು ಮಾಡಿದವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಮಂತ್ರಿಯೋರ್ವರ ಕೈವಾಡ ಇದೆ ಎಂದು ಆರೋಪಿಸಿದರಾದರೂ ಮಂತ್ರಿಯ ಹೆಸರನ್ನು ಅವರು ಬಹಿರಂಗಪಡಿಸದೇ ಈಗ ರಾಜಕೀಯ ಬೇಡ ಎಂದು ಸೂಚ್ಯವಾಗಿ ಹೇಳಿದರು. ಸರ್ಕಾರಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಿದೆ. ಕೊರೊನಾ ಸೋಂಕು ತಡೆಗೆ ಬೆಂಬಲ ನೀಡುತ್ತೇವೆ. ಸರ್ಕಾರಗಳ ಪಾರದರ್ಶಕ ಎಲ್ಲಾ ಕೆಲಸಕ್ಕೆ ಸಹಕಾರವಿದೆ.

ಅದರಂತೆ ಮುಖ್ಯಮಂತ್ರಿಗಳು ತಮ್ಮ ಇತಿಮಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಕಾರ್ಯಕ್ರಮಗಳ ಅನುಷ್ಠಾನ ಮಾಡುವ ವೇಳೆ ಭ್ರಷ್ಟಾಚಾರ ನಡೆಯುತ್ತಿದೆ. ತಹಶೀಲ್ದಾರ್ ಕೂಡ ಅಕ್ಕಿ ಭ್ರಷ್ಟಾಚಾರದ ಬಗ್ಗೆ ತಮಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ. ಗೋಡೌನ್ ನಲ್ಲಿಟ್ಟಿರುವ ಅಕ್ಕಿ ಗೊತ್ತಿಲ್ಲ ಎನ್ನುತ್ತಿದ್ದಾರೆ. ಗೋಡೌನ್ ನಲ್ಲಿ ಶೇಖರಿಸಿಟ್ಟು ಅಕ್ಕಿ ಮಾರಿದ್ದಾರೆ ಎಂದು ಅಕ್ಕಿ ಅಕ್ರಮ ವ್ಯಾಪಾರದ ಚಿತ್ರವನ್ನು ಶಿವಕುಮಾರ್ ಬಿಡುಗಡೆ ಮಾಡಿದರು, ಹರ್ಯಾಣದ ಅಕ್ಕಿಯನ್ನು ನಾವು ಸೀಜ್ ಮಾಡಿಸಿದ್ದೇವೆ. ಸರ್ಜಾಪುರದ ಗೋಡೌನ್ ನಲ್ಲಿ ಅಕ್ಕಿ ಸಂಗ್ರಹಿಸಿದ್ದಾರೆ. ಸಂಗ್ರಹ ಮಾಡಬೇಕಾದರೆ ತಹಸೀಲ್ದಾರ್ ಅನುಮತಿ ಬೇಕು. ಆದರೆ ಯಾವುದೇ ಅನುಮತಿಯಿಲ್ಲದೆ ಸಂಗ್ರಹಿಸಿದ್ದಾರೆ. ಈಗ ತಹಸೀಲ್ದಾರ್ ಗೆ ಧಮ್ಕಿ ಹಾಕ್ತಿದ್ದಾರೆ. ಬಿಜೆಪಿ ಮುಖಂಡ ಬುಲೆಟ್ ಬಾಬು ಎನ್ನುವವರ ಗೋಡೌನ್ ನಲ್ಲಿ ಅಕ್ಕಿ ಸಂಗ್ರಹವಾಗಿದೆ. ನಮ್ಮ ಕಾರ್ಯಕರ್ತರು ಇದನ್ನ ಪತ್ತೆ ಹಚ್ಚಿದ್ದಾರೆ. ಇದು ಸರ್ಕಾರದ ಸ್ವತ್ತಾಗಿದ್ದರೆ ಘೋಷಣೆ ಮಾಡಿಕೊಳ್ಳಬೇಕು ಎಂದು ಅಕ್ರೋಶವ್ಯಕ್ತಡಿಸಿದ್ದಾರೆ.

Also read: ಜೀವನದಲ್ಲಿ ಅತಿದೊಡ್ಡ ಪಾಠ ಕಲಿಸಿದ ಕೊರೊನಾ ನಿಯಂತ್ರಣಕ್ಕೆ ಗ್ರಾಮಗಳು ತೆಗೆದುಕೊಂಡ ಕ್ರಮಗಳು ಅನೇಕರಿಗೆ ಮಾದರಿಯಾಗಿವೆ; ಪ್ರಧಾನಿ ಮೋದಿ.!