ರಕ್ತಹೀನತೆಯ ಕೊರತೆಯನ್ನು ನಿವಾರಿಸುತ್ತದೆ ಈ ಚಕ್ಕೋತ ಹಣ್ಣು!!

0
3092

ಚಕ್ಕೋತ ಕೂಡ ನಿಂಬೆ, ಮೋಸಂಬಿಗಳ ಕುಟುಂಬದ ಸದಸ್ಯನೇ. ಸಿಟ್ರಸ್‌ ಮ್ಯಾಕ್ಸಿಮಾ ಎಂಬುದು ವೈಜ್ಞಾನಿಕ ಹೆಸರು. ಅದು ದೇಹಕ್ಕೆ ದ್ರಾಕ್ಷಿಯಷ್ಟೇ ಪೋಷಕವಾಗಿದೆ. ನಮ್ಮ ದೈನಂದಿನ ಅಗತ್ಯದ ಸಿ ಜೀವಸತ್ವವನ್ನು ಶೇ. 600ರಷ್ಟು ಪೂರೈಸಬಲ್ಲ ಸಮರ್ಥ ಫ‌ಲದು. ಬಿ6 ಜೀವಸತ್ವ, ನಾರು, ಪೊಟಾಯಂ ಸತ್ವಗಳಿರುವ ಅದು ದೇಹದ ಪ್ರತಿ ರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಗೆ ಸಹಕಾರಿ.

*ರಕ್ತಹಿನತೆಯ ಕೊರತೆಯನ್ನು ತುಂಬುತ್ತದೆ. ರಕ್ತದ ಒತ್ತಡ ನಿಯಂತ್ರಿಸುತ್ತದೆ.

*ಹಲ್ಲು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ.

*ಹೃದಯದ ಆರೋಗ್ಯ ರಕ್ಷಿಸುತ್ತದೆ.

*ಮುಖಕಾಂತಿ ಹೆಚ್ಚಿಸುತ್ತದೆಂದು ವೈದ್ಯಶಾಸ್ತ್ರ ಹೇಳುತ್ತದೆ.

*ಮಲಬದ್ಧತೆ, ಗ್ಯಾಸ್ಟ್ರಿಕ್‌ ಸಮಸ್ಯೆಗಳಿಗೂ ಮದ್ದಾಗುತ್ತದೆ. ಅದರಲ್ಲಿ ಕ್ಯಾನ್ಸರ್‌ ನಿರೋಧಕ ಗುಣಗಳೂ ಇವೆ ಎನ್ನಲಾಗಿದೆ.

*ಅದು ದೇಹಕ್ಕೆ ದ್ರಾಕ್ಷಿಯಷ್ಟೇ ಪೋಷಕವಾಗಿದೆ. ನಮ್ಮ ದೈನಂದಿನ ಅಗತ್ಯದ ‘ಸಿ’ ಜೀವಸತ್ವವನ್ನು ಶೇಕಡಾ 600ರಷ್ಟು ಪೂರೈಸಬಲ್ಲ ಸಮರ್ಥ ಫಲವಿದು.

*ಬಿ6 ಜೀವಸತ್ವ, ನಾರು, ಪೊಟಾಷಿಯಂ ಸತ್ವಗಳಿರುವ ಅದು ದೇಹದ ಪ್ರತಿ ರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಗೆ ಸಹಕಾರಿ. ರಕ್ತಹೀನತೆಯ ಕೊರತೆಯನ್ನು ತುಂಬುತ್ತದೆ.

ಈ ಹಣ್ಣು ಕೆಡದಂತೆ ಒಂದು ತಿಂಗಳು ಉಳಿಸಲಾಗುವ ಹಣ್ಣನ್ನು ಹಾಗೆಯೇ ತಿನ್ನಬಹುದು. ಮುರಬ್ಬ, ಜಾಮ್, ಜೆಲ್ಲಿ, ಸಿರಪ್ ತಯಾರಿಸಬಹುದು. ಉಪ್ಪು, ಸಕ್ಕರೆ, ಮೆಣಸಿನಹುಡಿ ಸೇರಿಸಿದರೆ ರುಚಿ ಹೆಚ್ಚುತ್ತದೆ.

ಬರವನ್ನು ಎದುರಿಸಿ ಬದುಕುವ ಶಕ್ತಿಯಿರುವ ಚಕೋತ ಮರಕ್ಕೆ ಕಡಿಮೆ ನೀರು, ಸಾವಯವ ಗೊಬ್ಬರ ಮಾತ್ರ ಕೊಡುಟ್ಟರೆ. ಹಸಿರು ಕಾಯಿಗಳ ಸಿಪ್ಪೆ ಹಳದಿಯಾದಾಗ ಮಾರಾಟಕ್ಕೆ ಸಿದ್ಧ. ಅಪರೂಪದ ಹಣ್ಣಿಗೆ ಹತ್ತರಿಂದ ಹದಿನೈದು ರೂಪಾಯಿ ಬೆಲೆಗೆ ಸಿಗುತ್ತದೆ. ನಗರಗಳಲ್ಲಿ 50 ರಿಂದ 60 ರೂ ಗೆ ಸಿಗುತ್ತಿದೆ. ನೀವು ಈ ಹಣ್ಣನ್ನು ಸವಿದು ನಿಮ್ಮ ಆರೋಗ್ಯವನ್ನು ಕಪಾಡಿಕೊಳ್ಳಿ.