ಈ ನವರಾತ್ರಿ ಹಬ್ಬದಲ್ಲಿ ನಿಮ್ಮ ರಾಶಿಗನುಗುಣವಾಗಿ ದುರ್ಗಾದೇವಿಯ ಈ ಮಂತ್ರಗಳನ್ನು ಪಠಿಸಿ, ನಿಮ್ಮ ಕಷ್ಟಗಳೆಲ್ಲಾ ಪರಿಹಾರವಾಗುವುದು!!

0
732

Astrology in kannada

ನವರಾತ್ರಿ ಹಬ್ಬವು ಬಹಳಷ್ಟು ವಿಶೇಷತೆಯನ್ನು ಹೊಂದಿದ್ದು. ಬ್ರಹ್ಮ, ವಿಷ್ಣು, ಮಹೇಶ್ವರರಿಂದ ಸ್ತೋತ್ರ ಮಾಡಿಸಿಕೊಂಡಂಥ ದೇವಿಯನ್ನು ಈ ಲೋಕದಲ್ಲಿ ಜನರು ದುರ್ಗಾ, ಪಾರ್ವತಿ, ಲಕ್ಷ್ಮೀ, ಶಾರದಾ, ಅಂಬಿಕಾ, ಚಂಡಿಕಾ, ಶಂಕರಿ, ಪರಮೇಶ್ವರಿ, ನಾರಾಯಣಿ, ಭದ್ರಕಾಳಿ, ಚಾಮುಂಡೇಶ್ವರಿ ಮೊದಲಾದ ನಾಮಗಳಿಂದ ಅರಾಧನೆ ಮಾಡುವರು. ಹಿರಿಯರ ಕಾಲದಿಂದ ನವರಾತ್ರಿಯಲ್ಲಿ ಕೆಲವು ಪದ್ದತಿಗಳು ಬೆಳೆದುಕೊಂಡು ಬಂದಿವೆ, ಅವುಗಳಲ್ಲಿ ಮನೆಗೆ ಒಳ್ಳೆದಾಗುವ ಮತ್ತು ಸಂಪತ್ತು ವೃದ್ಧಿಯಾಗುವ ಮಹತ್ವದ ವಿಚಾರಗಳು ಇದರಲ್ಲಿರುತ್ತೇವೆ. ನವರಾತ್ರಿ ವೇಳೆ ಪೂಜೆ, ಧ್ಯಾನ ಎಷ್ಟು ಮುಖ್ಯವೋ ಅದನ್ನು ನೆರವೇರಿಸುವ ಪ್ರಕಾರಗಳೂ ಅಷ್ಟೇ ಮುಖ್ಯವಾಗುತ್ತದೆ. ದೇವತಾಶಾಸ್ತ್ರ ವು ಅದನ್ನು ಸುಲಭವಾಗಿಸಿದೆ. ಈ ಕ್ರಮಗಳನ್ನು ಅನುಸರಿಸಿದರೆ ದೇವಿ ಒಲಿಯುತ್ತಾಳೆ ಎಂದು ದೇವತಾಶಾಸ್ತ್ರ ಹೇಳುತ್ತದೆ. ಹಾಗಾದ್ರೆ ಈ ನವರಾತ್ರಿ ಪೂಜೆಯ ಸಂಪೂರ್ಣ ಫಲ ನೀವು ಪಡೆಯಬೇಕಾದಲ್ಲಿ ಕೆಲವು ದುರ್ಗೆಯ ಮಂತ್ರವನ್ನು ಪಠಿಸಬೇಕು. ರಾಶಿಗನುಗುಣವಾಗಿ ನಾವು ನವರಾತ್ರಿಯಂದು ಈ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಸಂತೋಷ ಮತ್ತು ಉಳಿತಾಯದ ಮಾರ್ಗವನ್ನು ಕಂಡುಕೊಳ್ಳಬಹುದು.

ಮಂತ್ರಗಳು ತಮ್ಮ ಒಂದು ಶಕ್ತಿಯಿಂದ ಮನುಷ್ಯನನ್ನು ಅರೋಗ್ಯ ಮತ್ತು ಮನಸ್ಸು ಶಾಂತಿಯಿಂದ ಇರಲು ಮಂತ್ರಗಳು ಸಹಕರಿಸುತ್ತವೆ. ಹಾಗೆಯೇ ಪ್ರತಿಯೊಂದು ಗುರಿ ಉದ್ದೇಶಗಳು ಸಾಕಾರಗೊಳ್ಳುವುದಕ್ಕೆ ಪ್ರತ್ಯೇಕ ಮಂತ್ರಗಳನ್ನು ಆಧ್ಯಾತ್ಮಿಕ ಚಿಂತಕರು ನೀಡಿದ್ದಾರೆ. ಇಂದಿನ ಲೇಖನದಲ್ಲಿ ನವರಾತ್ರಿಯಂದು ಯಾವ ರಾಶಿಯವರು ಯಾವ ಸಮಯದಲ್ಲಿ ಯಾವ ಮಂತ್ರವನ್ನು ಪಠಿಸುವುದರ ಮೂಲಕ ನಿಮಗೆ ಖಿನ್ನತೆಯಿಂದ ಹೊರಬರಬಹುದಾಗಿದೆ ಎಂದು ಹೇಳುತ್ತೇವೆ. ಆ ಮಂತ್ರಗಳು ಹೀಗಿವೆ…

ದಿನ ಭವಿಷ್ಯ: 19 ಅಕ್ಟೋಬರ್, 2020!!

ಮೇಷ:

ದಿನ ಭವಿಷ್ಯ

ಮೇಷ:- ಕೌಟುಂಬಿಕ ಜೀವನದಲ್ಲಿಯ ನೆಮ್ಮದಿಗಾಗಿ ದೇವಿಯ ಆಶೀರ್ವಾದ ಪಡೆಯಲು ಈ ಎರಡು ಮಂತ್ರ ಸ್ತೋತ್ರ ಪಠಿಸಿರಿ. “ಓಂ ಹ್ರೀಂ ಉಮಾ ದೇವ್ಯೈ ನಮಃ” ಅಥವಾ “ಓಂ ಏಂ ಸರಸ್ವತ್ಯೈ ನಮಃ”.

ವೃಷಭ:

ದಿನ ಭವಿಷ್ಯ

ವೃಷಭ:- ವೃಷಭ ರಾಶಿಯವರ ಆರ್ಥಿಕ ಜೀವನಕ್ಕೆ ಅಥವಾ ಉತ್ತಮ ಸ್ಥಿತಿಗೆ ಸಹಾಯ ಹಾಗೂ ಅದೃಷ ವಲಿದು ಬರಲು ಈ ಮಂತ್ರವನ್ನು “ಓಂ ಕ್ರಾಂ ಕ್ರೀಂ ಕ್ರೂಂ ಕಾಳಿಕಾ ದೇವ್ಯೈ ನಮಃ” ಪಠಿಸಿ.

ಮಿಥುನ:

ದಿನ ಭವಿಷ್ಯ

ಮಿಥುನ:- ನಿಮಗೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಗೊಂಡು ನೆಮ್ಮದಿ ಮತ್ತು ಸಂತಸವನ್ನು ಪಡೆಯಲು ಈ ಮಂತ್ರವನ್ನು ಪಠಿಸಿ. “ಓಂ ದುರ್ಗಾಯೈ ನಮಃ” ಎಂದು ಪಠಿಸುವುದರಿಂದ ನಿಮ್ಮ ಜೀವನದಲ್ಲಿ ಬೆಳೆದು ಅಂದುಕೊಂಡಿದ್ದನ್ನೆಲ್ಲ ಯಸಸ್ವಿಯಾಗಿ ಸಾಧಿಸಬಹುದು ಇದರ ಜೊತೆಗೆ ಹಲವು ಅವಕಾಶಗಳು ನಿಮ್ಮನ್ನು ಅರಸಿ ಬರುತ್ತವೆ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಈ ರಾಶಿಯ ಅಧಿಪತಿ ಚಂದ್ರ ಗ್ರಹ. ಇದು ಜಲ ತತ್ವರಾಶಿ. ನೀವು “ಓಂ ಲಲಿತಾ ದೇವ್ಯೈ ನಮಃ” ಮಂತ್ರವನ್ನು ಪಠಿಸುವುದರಿಂದ ನಿಮ್ಮಗೆ ಇರುವ ಆರೋಗ್ಯದಲ್ಲಿನ ಸಮಸ್ಯೆಗಳಿಂದ ಮುಕ್ತಿ ಕಾಣುವಿರಿ. ಇದರಿಂದ ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ವ್ಯಾಪಾರಿಗಳಿಗೆ ಸಕಾರಾತ್ಮಕ ಬದಲಾವಣೆಯಿಂದ ಲಾಭವಿದೆ. ಸಾಮಾಜಿಕ ಕಾರ್ಯಗಳಿಂದ ಪ್ರಶಂಸೆ ಹೆಚ್ಚುತ್ತದೆ.

ಸಿಂಹ:

ದಿನ ಭವಿಷ್ಯ

ಸಿಂಹ:- ಉದ್ಯೋಗದಲ್ಲಿ ಪ್ರಗತಿ. ಮಕ್ಕಳ ವಿದ್ಯಾಭ್ಯಾಸವು ಕುಂದಿಲ್ಲದೆ ಮುಂದೆ ಸಾಗಲು ಮತ್ತು ಆರ್ಥಿಕ ವಿಚಾರದಲ್ಲಿ ಹೆಚ್ಚಿನ ಅನುಕೂಲತೆ ಕಂಡುಕೊಳ್ಳಲು ಹಾಗು ಮನೆಯ ವಾತಾವರಣದಲ್ಲಿ ನೆಮ್ಮದಿ ಕಾಣಲು ಈ ಮಂತ್ರವನ್ನು “ಓಂ ಏಂ ಮಹಾಸರಸ್ವತೀ ದೇವ್ಯೈ ನಮಃ” ಪಠಿಸಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಕನ್ಯಾ ರಾಶಿಯವರು “ಓಂ ಶೂಲ ಧಾರಿಣೀ ದೇವ್ಯೈ ನಮಃ” ಪಠಿಸುವುದರಿಂದ ಅಧಿಕ ಹಣದ ಹರಿವನ್ನು ತೋರುವುದರ ಜೊತೆಗೆ ನಿಮ್ಮ ಆರ್ಥಿಕ ಸ್ತಿತಿ ಉತ್ತಮವಾಗುತ್ತದೆ ಮತ್ತು ನಿಮ್ಮ ಕಾರ್ಯಭಾರ ದಿನದಿಂದ ದಿನಕ್ಕೆ ಹೆಚ್ಚುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ತುಲಾ ರಾಶಿಯನ್ನು ಶುಕ್ರ ಗ್ರಹ ಆಳುತ್ತಾನೆ. ಈ ನವರಾತ್ರಿಯಲ್ಲಿ ದುರ್ಗೆಯನ್ನು ಆರಾಧಿಸಿದರೆ ಸಕಲ ಸಮೃದ್ಧಿ, ಧನ ಸಂಪತ್ತು ಹೆಚ್ಚುತ್ತದೆ. ಪರಿಶ್ರಮಕ್ಕೆ ತಕ್ಕ ಫಲ ಉಂಟಾಗಲು ಈ ಮಂತ್ರವನ್ನು ತಪ್ಪದೆ ಪಠಿಸಿ. “ಓಂ ಹ್ರೀಂ ಮಹಾಲಕ್ಷ್ಮ್ಯೈ ನಮಃ”.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯಲು ಮತ್ತು ನಿಮ್ಮ ಗಳಿಕೆಯೂ ಹೆಚ್ಚಾಗಲು ಈ ನವರಾತ್ರಿಯಲ್ಲಿ ” ಓಂ ಶಕ್ತಿರೂಪಾಯೈ ನಮಃ ” ಅಥವಾ “ಓಂ ಕ್ಲೀಂ ಕಾಮಾಖ್ಯೈ ನಮಃ” ದುರ್ಗೆಯ ಮಂತ್ರವನ್ನು ಪಠಿಸಿರಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಉದ್ಯೋಗ, ಹಣಕಾಸು, ಕುಟುಂಬ, ಸಾಧನೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಪ್ರಶಂಸೆ ಪಡಲು ಈ ಮಂತ್ರವನ್ನು “ಓಂ ಏಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೇ” ಸ್ತೋತ್ರ ಪಠಿಸಿ. ಮತ್ತು ದೀನದಲಿತರಿಗೆ ಆಹಾರವನ್ನು ನೀಡಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಜೀವನದಲ್ಲಿ ಮುಂದೆ ಸಾಗಲು ಮತ್ತು ನಿಮ್ಮ ದೌರ್ಬಲ್ಯವನ್ನು ಸುಧಾರಿಸಿಕೊಳ್ಳಲು ಈ ನವರಾತ್ರಿಯಲ್ಲಿ ಈ ಮಂತ್ರವನ್ನು ಪಠಿಸಿ. “ಓಂ ಪಾಂ ಪಾರ್ವತೀ ದೇವ್ಯೈ ನಮಃ” ಇದರಿಂದ ನಿಮ್ಮ ವೈವಾಹಿಕ ಜೀವನ ಸುಧಾರಿಸುತ್ತದೆ ಮತ್ತು ನೀವು ವೈಯಕ್ತಿಕ ಜೀವನ ಸಂತೋಷವಾಗಿರುತ್ತದೆ.

ಕುಂಭ:

ದಿನ ಭವಿಷ್ಯ

ಕುಂಭ:- ನಿಮ್ಮ ಸಮರ್ಥ ಸಂವಹನ ಕೌಶಲ್ಯಗಳ ಮೂಲಕ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಲು “ಓಂ ಪಾಂ ಪಾರ್ವತೀ ದೇವ್ಯೈ ನಮಃ” ಸ್ತೋತ್ರ ಪಠಿಸಿ. ನವರತ್ರಿಯಂದು ನವ ದುರ್ಗೆಯನ್ನು ನೆನೆದು ಈ ಮಂತ್ರವನ್ನು ಪಠಿಸಿ. ನಿಮಗೆ ಶುಭವಾಗುವುದು.

ಮೀನ:

ದಿನ ಭವಿಷ್ಯ

ಮೀನ:- ಮೀನ ರಾಶಿಯವರು ಈ ಮಂತ್ರ “ಓಂ ಶ್ರೀಂ ಹ್ರೀಂ ಶ್ರೀಂ ದುರ್ಗಾ ದೇವ್ಯೈ ನಮಃ” ವನ್ನು ಪಠಿಸಿ ದೇವಿಯನ್ನು ಆರಾಧಿಸಿದರೆ ಒಳ್ಳೆಯದು, ಉತ್ತಮ ಫಲವನ್ನು ಪಡೆಯಬಹುದು.

ಮಂತ್ರವೆಂದರೆ ಕೆಲವರಿಂದ ಮನೋವೈಜ್ಞಾನಿಕ ಹಾಗು ಆಧ್ಯಾತ್ಮಿಕ ಶಕ್ತಿ ಹೊಂದಿರುವುದೆಂದು ನಂಬಲಾದ ಒಂದು ಪವಿತ್ರ ಹೇಳಿಕೆ. ಮೇಲೆ ತಿಳಿಸಲಾದ ಮಂತ್ರಗಳು ಮನಸ್ಸಿನ ಶಾಂತಿ ಹಾಗೂ ಆರೋಗ್ಯ ವೃದ್ಧಿಸಲು ಸಹಕಾರಿಯಾಗಿದೆ ಎಂಬ ನಂಬಿಕೆ ನಮ್ಮಲಿದೆ. ಅಷ್ಟೇ ಅಲ್ಲದೇ ಯಾವುದರ ಬಗ್ಗೆ ಏಕಾಗ್ರತೆಯಿಂದ ಅಂತರಂಗದಲ್ಲಿ ಜಪಿಸುತ್ತೇವೆಯೋ ಅದು ಈಡೇರುತ್ತದೆ, ಇದಕ್ಕೆ ಮಂತ್ರಗಳು ಪೂರಕವಾಗಿರಲಿದೆ ಎಂಬ ನಂಬಿಕೆ ಕೂಡ ನಮ್ಮಲಿದೆ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 19 ಅಕ್ಟೋಬರ್, 2020!!