ಹೆಚ್ಐವಿ ಪೀಡಿತ ಮಕ್ಕಳ ತಂದೆ ಎಂದು ಹೆಸರುವಾಸಿಯಾದ ಈ ವ್ಯಕ್ತಿ, 47 ಏಡ್ಸ್ ಪೀಡಿತ ಮಕ್ಕಳನ್ನು ದತ್ತು ಪಡೆದು ಸಾಕುತ್ತಿರುವ ರಿಯಲ್ ಹೀರೋ ಯಾರು ಗೊತ್ತಾ??

0
1273

ಪ್ರಪಂಚದಲ್ಲಿ ಹೆಚ್ಐವಿ ಎನ್ನುವುದು ಭಯಾನಕ ಕಾಯಿಲೆಯಾಗಿ ಜನರಲ್ಲಿ ಭಯಹುಟ್ಟಿಸಿದೆ, ಈ ಖಾಯಿಲೆಗೆ ಸರಿಯಾದ ಚಿಕಿತ್ಸೆ ಇಲ್ಲದಿರುವುದು ಒಂದು ವಿಷಾಧನೀಯವಾದರೆ, ಇನ್ನೂ ಏಡ್ಸ್ ಪೀಡಿತ ಎಂದು ಸಮಾಜದಲ್ಲಿ ನಡೆಯಿವ ತೆಗಳಿಕೆ, ಮತ್ತು ಮಾನಸಿಕ ಹಿಂಸೆಗೆ ಒಳಗಾಗಿ ಬದುಕುವಷ್ಟು ದಿನ ಸರಿಯಾಗಿ ಬಿಡದ ಜನರ ಮನಸ್ಥಿತಿಯೊಂದು ವಿಷಾಧನೀಯವಾಗಿದೆ. ಇದಕ್ಕೆ ಒಳಗಾದ ಲಕ್ಷಾಂತರ ಮಕ್ಕಳು ಯಾರೋ ಮಾಡಿದ ತಪ್ಪಿಗೆ ತಾವು ಪಾಪದ ಹೊರೆಯನ್ನು ಹೊತ್ತು ಜೀವನ ಪೂರ್ತಿ ಕೊರಗುವ ಪರಿಸ್ಥಿತಿಯಲ್ಲಿರುವ ಮಕ್ಕಳನು ತಂದೆ ತಾಯಿಗಳೇ ರಸ್ತೆಯಲ್ಲಿ ಬಿಟ್ಟು ಹೋಗುತ್ತಾರೆ. ಇಂತಹ ಮಕ್ಕಳಿಗೆ ತಂದೆಯಾಗಿ ಸಾಕುತ್ತಿರುವ ಈ ವ್ಯಕ್ತಿಗೆ ಎಷ್ಟೇ ಹೊಗಳಿದರು ಕಡಿಮೆಯಾಗಿದೆ.

Also read: ಕಾಮಾಲೆ ರೋಗದಿಂದ ಸಾಯುವ ಸ್ಥಿತಿಯಲ್ಲಿದ ಬಾಲಕನನ್ನು 8 ಕಿಮೀ ಹೊತ್ತೊಯ್ದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ CRPF ಯೋಧರು..

ಏಡ್ಸ್ ಪೀಡಿತ ಮಕ್ಕಳ ತಂದೆ?

ಹೌದು ಯಾರೋ ಮಾಡಿದ ತಪ್ಪಿಗೆ ಇಂದು ಭಾರತದಲ್ಲಿ ಸುಮಾರು 140,000 ಮಕ್ಕಳು ಎಚ್ಐವಿ ಪೀಡಿತರಾಗಿದ್ದಾರೆ. ಇಂತಹ ಮಕ್ಕಳು ತಂದೆತಾಯಿ ಸಂಬಂಧಿಕರಿಂದಲೇ ದೂರವಾಗಿ ಜೀವನ ನಡೆಸುತ್ತಾರೆ. ಎಚ್ಐವಿ ಪೀಡಿತ ಎಂದು ಗೊತ್ತಾದರೆ ಆ ಮಗುವನ್ನು ನಡುರಸ್ತೆಯಲ್ಲೇ ಬಿಟ್ಟು ಹೋಗುತ್ತಾರೆ. ಈ ಸಮಯದಲ್ಲಿ ಮಕ್ಕಳು ಪಡುವ ಕಷ್ಟಗಳು ಆ ದೇವರಿಗೂ ಮುಟ್ಟುತ್ತಿರುತ್ತದೆ. ಹೆತ್ತವರಂತು ಎಷ್ಟೇ ಕನಿಕರ ತೋರಿದರೂ ಅವರನ್ನು ದೂರ ಇಡಲು ಬಯಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಇಂತಹ ಹೆಚ್ಐವಿ ಪೀಡಿತ 47 ಮಕ್ಕಳನ್ನು ದತ್ತು ಪಡೆದು ಅವರಿಗೆ ಸ್ವಂತ ತಂದೆಯ ಪ್ರೀತಿಯನ್ನು ಕೊಟ್ಟು ಸಾಕುತ್ತಿದ್ದಾರೆ.

Also read: ರಸ್ತೆ ಗುಂಡಿಯಿಂದ ಆದ ಆಕ್ಸಿಡೆಂಟ್-ನಲ್ಲಿ ಮಗನನ್ನು ಕಳೆದುಕೊಂಡ ಮೇಲೆ ಇವರು ಇನ್ಯಾರಿಗೂ ಆ ಪರಿಸ್ಥಿತಿ ಬರಬಾರದೆಂದು ಮಾಡುತ್ತಿರುವ ಕೆಲಸ ನಿಜಕ್ಕೂ ಪ್ರಶಂಸನೀಯ!!

ಇಂತಹ ಮಾದರಿ ಕೆಲಸ ಮಾಡುತ್ತಿರುವ ಚೆನ್ನೈ ಮೂಲದ ಸೋಲಮನ್ ಎಂಬ ವ್ಯಕ್ತಿಗೆ ಒಬ್ಬ ಬಾಲಕನ ಬಗ್ಗೆ ಮಾಹಿತಿ ಸಿಗುತ್ತೆ, ಹುಡುಗನ ಇಡೀ ಕುಟುಂಬ ಹೆಚ್ಐವಿ ಪೀಡಿತವಾಗಿ ಮರಣ ಹೊಂದಿದಾಗ ಅವರ ಕುಟುಂಬದವರು ಅವನನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ತಿಳಿದಾಗ ಸೋಲಮನ್ ಆ ಬಾಲಕನನ್ನು ಮನೆಗೆ ತಂದು ಸಾಕುತ್ತಾನೆ. ಇದಕ್ಕೆ ಸಮಾಜದಲ್ಲಿ ಹಲವು ವಿರೋಧಗಳನ್ನು ಎದುರಿಸುತ್ತಾರೆ. ಹೀಗೆ ಈ ಸುದ್ದಿ ಹರಡಿ ಇದೀಗ ಅವರು ಹೆಚ್ಐವಿ ಪೀಡಿತ ಮಕ್ಕಳ ತಂದೆ ಎಂದೇ ಚಿರ ಪರಿಚಿತರಾಗಿದ್ದಾರೆ. ಆ ಮಕ್ಕಳನ್ನು ಸ್ವಂತ ಮಕ್ಕಳಂತೆ ಸಾಕುತ್ತಿದ್ದಾರೆ. ಇದರಿಂದ ಇವರು ತಮ್ಮ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಉದ್ಯೋಗವನ್ನೂ ತ್ಯಜಿಸಬೇಕಾಯಿತು. ವೈರಸ್ ಹರಡುತ್ತದೆ ಎಂದು ಸಹೋದ್ಯೋಗಿಗಳು ದೂರವಾಗಿದ್ದಾರೆ ಆದರೆ ತಮ್ಮ ಚಲವನ್ನು ಬಿಡದ ಸೋಲಮನ್ ಈ ಮಕ್ಕಳ ಸಾಕುವಲ್ಲಿ ನಿರತರಾಗಿದ್ದಾರೆ.

ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಅವರು. ನಮಗೆ ಮದುವೆಯಾಗಿ 8 ವರ್ಷವಾಗಿದ್ದರೂ ಮಕ್ಕಳಾಗಿರಲಿಲ್ಲ. ನಾವು ಅನಾಥ ಮಕ್ಕಳನ್ನು ದತ್ತು ಪಡೆಯಲು ಯೋಚನೆಯಲ್ಲಿದ್ದಾಗ ನಮಗೆ ಮಕ್ಕಳಾದವು. ಆದ್ದರಿಂದ ದತ್ತು ಪಡೆಯುವ ಆಲೋಚನೆಯನ್ನು ಕೈ ಬಿಟ್ಟಿದ್ದೆವು. ಎಚ್‍ಐವಿ ಪೀಡಿತ ಮಕ್ಕಳನ್ನು ದತ್ತು ಪಡೆದು ಸಾಕಿ ಸಲುಹಬೇಕೆನ್ನುವ ಆಸೆ ನನಗಿತ್ತು. ಹೀಗಾಗಿ ಈ ವಿಚಾರ ನನಗೆ ಬಹಳ ದಿನದವರೆಗೆ ಕಾಡುತ್ತಿತ್ತು. ಬಳಿಕ ದೃಢ ನಿರ್ಧಾರ ಮಾಡಿ ಮೊದಲು ಒಂದು ಎಚ್‍ಐವಿ ಪೀಡಿತ ಮಗುವನ್ನು ದತ್ತು ಪಡೆದೆ. ಬಳಿಕ ಅದು ಹಾಗೆ ಮುಂದುವರಿಯಿತು. ಈಗ ನಾನು 47 ಎಚ್‍ಐವಿ ಪೀಡಿತ ಮಕ್ಕಳಿಗೆ ತಂದೆ ಆಗಿದ್ದೇನೆ. ಈ ಮಕ್ಕಳ ಬಾಯಲ್ಲಿ ಅಪ್ಪ ಎಂದು ಕರೆಸಿಕೊಳ್ಳಲು ಖುಷಿಯಾಗುತ್ತೆ.

Also read: ಅನಾರೋಗ್ಯದಿಂದ ಹಾಸಿಗೆ ಹಿಡಿದ ಹೆಂಡತಿ ಕಷ್ಟಕ್ಕೆ ರಿಮೋಟ್‌ ಕಂಟ್ರೋಲ್‌ ಟಾಯ್ಲೆಟ್‌ ಬೆಡ್‌; ಕಾರ್ಮಿಕನ ಆವಿಷ್ಕಾರಕ್ಕೆ ರಾಷ್ಟ್ರೀಯ ಅನ್ವೇಷಣಾ ಪ್ರಶಸ್ತಿ..

ಈ ಮಕ್ಕಳನ್ನು ದತ್ತು ಪಡೆದು ಸಾಕುವುದರಲ್ಲಿ ನನಗೆ ನೆಮ್ಮದಿ ಸಿಕ್ಕಿದೆ. ಈ ಮಕ್ಕಳಿಗೆ ಆಶ್ರಯ ನೀಡಿ, ಬೇಕಾದ ಸೌಲಭ್ಯವನ್ನು ನಾನು ಒದಗಿಸುತ್ತಿದ್ದೇನೆ. ಮಕ್ಕಳಿಗೆ ಶಿಕ್ಷಣ, ವೈದ್ಯಕೀಯ ವ್ಯವಸ್ಥೆ, ಡ್ಯಾನ್ಸ್, ಕಂಪ್ಯೂಟರ್ ಶಿಕ್ಷಣವನ್ನೂ ಕೂಡ ಕೊಡಿಸುತ್ತಿದ್ದೇನೆ. ಈ ಮಕ್ಕಳಲ್ಲಿ ಹಲವರು ಪ್ರೌಢಶಿಕ್ಷಣವನ್ನು ಪಡೆಯುತ್ತಿದ್ದಾರೆ. ಹಾಗೆಯೇ 7 ಮಂದಿ ಬೇರೆ ಬೇರೆ ವಿಷಯದಲ್ಲಿ ಪದವಿ ಶಿಕ್ಷಣವನ್ನೂ ಕೂಡ ಪಡೆಯುತ್ತಿದ್ದಾರೆ. ಅಲ್ಲದೆ ಈಗ ಪಿಯುಸಿ ಕಲಿಯುತ್ತಿರುವ ಒಬ್ಬಳು ಹುಡುಗಿ ಮುಂದೆ ಡಾಕ್ಟರ್ ಆಗಬೇಕೆಂದು ಆಸೆ ಪಟ್ಟಿದ್ದಾಳೆ. ತನ್ನಂತ ಇತರೆ ಮಕ್ಕಳಿಗೆ ಚಿಕಿತ್ಸೆ ನೀಡಬೇಕೆಂಬುದು ಬಯಸಿದ್ದಾಳೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.