ಜೈಲೂಟ, ಸಹ ಕೈದಿಗಳ ಸ್ನೇಹಕ್ಕೋಸ್ಕರ, ಬಿಡುಗಡೆಯಾದರು ಪುನಃ ಅಪರಾಧ ಮಾಡಿ ಜೈಲು ಸೇರಿತ್ತಿರುವ ವಿಚಿತ್ರ ವ್ಯಕ್ತಿಗೆ ಜೈಲೇ ಸ್ವರ್ಗವಂತೆ!!

0
345

ಜೀವನದಲ್ಲಿ ಜೈಲು ಸೇರುವಂತ ಪರಿಸ್ಥಿತಿ ಯಾರಿಗೂ ಬರಬಾರದು ಎನ್ನುವುದು ಎಲ್ಲರ ಬೇಡಿಕೆಯಾದರೆ, ಇಲ್ಲೊಬ್ಬ ವ್ಯಕ್ತಿ ಜೈಲಿನಲ್ಲಿರುವ ಸೌಲಭ್ಯವನ್ನು ಪಡೆಯಲು ಆರಾಮದಾಯಕ ಜೀವನ ನಡೆಸಲು ಸ್ನೇಹಿತರ ಜೊತೆಯಲ್ಲಿ ಕಾಲ ಕಳೆಯಲು ಮತ್ತೆ ಮತ್ತೆ ಜೈಲು ಸೇರುತ್ತಿದ್ದಾನೆ, ಬಿಡುಗಡೆ ಮಾಡಿದರು ಪುನಃ ಅಪರಾದ ಮಾಡಿ ಜೈಲು ಸೇರುತ್ತಿದ್ದಾನೆ. ಕೇಳಿದರೆ ಜೈಲಿನಲ್ಲಿ ಸಿಗುವ ಸಮಯಕ್ಕೆ ಸರಿಯಾದ ಊಟ, ಮಲಗಲು ಹಾಸಿಗೆ, ಕಾಲ ಕಳೆಯಲು ಸ್ನೇಹಿತರು ಇರುವ ಈ ಸ್ಥಳವು ನನಗೆ ಸ್ವರ್ಗವೆಂದು ಹೇಳಿಕೊಳ್ಳುತ್ತಿದ್ದಾನೆ. ಇದು ವಿಚಿತ್ರವೆಂದರು ಈ ಭೂಪ ಜೀವನ ನಡೆಸಲು ಮಾಡಿಕೊಂಡಿರುವ ಒಂದು ಉಪಾಯವೆಂದು ಪೊಲೀಸ್ ಅಧಿಕಾರಿಗಳೇ ಹೇಳಿದ್ದಾರೆ.

Also read: ಕಾಗೆ’ಗಳಿಗೂ ಬಂತು ಡಿಮ್ಯಾಂಡ್; ಉತ್ತರಕ್ರಿಯೆ ಕಾಗೆ ನೀಡುವ ಬ್ಯುಸಿನೆಸ್-ಗೆ ಭಾರಿ ಬೇಡಿಕೆ..

ಹೌದು ಅಪರಾಧ ಮಾಡಿ ಜೈಲು ಸೇರುವುದು ಸಮಾನ್ಯವಾದರೆ, ಕೆಲವೊಬ್ಬರು ಜೈಲು ಸೇರಬೇಕಂತ್ತಾನೆ, ಅಪರಾಧ ಮಾಡುತ್ತಿದ್ದಾರೆ. ಇದು ಕಾನೂನಿನ ಚೌಕಟ್ಟನ್ನು ದುರುಪಯೋಗ ಮಾಡಿಕೊಂಡತ್ತೆ ಆದರು ಈ ವ್ಯಕ್ತಿ ನಿಯಮ ಬದ್ದವಾಗಿ ಅಪರಾಧ ಮಾಡುತ್ತಾನೆ, ಅದಕ್ಕೆ ಶಿಕ್ಷೆಯಾಗಿ ಮತ್ತೆ ಜೈಲು ಸೇರುತ್ತಿದ್ದಾನೆ. ದುಡಿಯಲು ಆಗದೆ ಸೋಮಾರಿ ಆಗಿ ಈ ಉಪಾಯವನ್ನು ಹುಡಿಕಿಕೊಂಡ ವ್ಯಕ್ತಿ, 52 ವರ್ಷದ ಗಣಪ್ರಕಾಶಂ ಇಂತಹ ಸಾಹಸ ಮಾಡುತ್ತಿದ್ದಾನೆ. ಇದರ ಬಗ್ಗೆ ಪೊಲೀಸ್ ಅಧಿಕಾರಿಗಳೇ ಮಾಹಿತಿ ನೀಡಿದ್ದು ಹೀಗಿದೆ.

ಈ ಕಳ್ಳನಿಗೆ ಜೈಲೂಟ ಮತ್ತು ಜೈಲಿನ ಸಹ ಕೈದಿಗಳ ಗೆಳೆತನವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದೆನಿಸಿ, ಬೈಕ್ ಕದ್ದು ಮತ್ತೆ ಜೈಲಿಗೆ ಕೈದಿಯಾಗಿ ಬಂದಿದ್ದಾನೆ. ಇವನಿಗೆ ಈಗಾಗಲೇ 52 ವರ್ಷವಾಗಿದ್ದು, ಕಳ್ಳತನ ಮಾಡಿ ಹಲವು ಬಾರಿ ಜೈಲು ಸೇರಿದ್ದಾನೆ. ಗಣಪ್ರಕಾಶಂ ಗೆ ಜೈಲೂಟ ಮತ್ತು ಅಲ್ಲಿನ ಸಹ ಕೈದಿಗಳ ಗೆಳೆತನ ಅತ್ಯಂತ ಪ್ರೀಯವಾದದ್ದು. ಆದರೆ ಕಳೆದ ಮಾರ್ಚ್’ನಲ್ಲಿ ಗಣಪ್ರಕಾಶಂ ಶಿಕ್ಷೆ ಅವಧಿ ಪೂರ್ಣಗೊಂಡ ಪರಿಣಾಮ ಜೈಲಿನಿಂದ ಬಿಡುಗಡೆಗೊಂಡಿದ್ದ. ಆದರೆ ಎಲ್ಲ ಅಪರಾಧಿಗಳೂ ಜೈಲಿನಿಂದ ಹೊರ ಬರುವುದನ್ನು ಕಾಯುತ್ತಿದ್ದರೆ, ಗಣಪ್ರಕಾಶಂ ಮಾತ್ರ ತಾನು ಮತ್ತೆ ಯಾವಾಗ ಜೈಲಿಗೆ ಹೋಗುತ್ತೇನೆ ಎಂದು ಕಾಯುತ್ತಿದ್ದ. ಅದರಂತೆ ಮತ್ತೆ ಪಾರ್ಕಿಂಗ್’ನಲ್ಲಿ ನಿಲ್ಲಿಸಿದ್ದ ಬೈಕ್ ಕದ್ದು ಉದ್ದೇಶಪೂರ್ವಕವಾಗಿ ತನ್ನ ಮುಖ ಸಿಸಿಟಿವಿಯಲ್ಲಿ ತೋರಿಸಿದ್ದಾನೆ.

Also read: ಬರೋಬರಿ 30 ವರ್ಷದ ಹಿಂದೆ ತಾನು ವಿದ್ಯಾರ್ಥಿ ಇದ್ದಾಗೆ ಪಡೆದ ಬರಿ 200 ರೂ. ಸಾಲ ತೀರಿಸಲು ಭಾರತಕ್ಕೆ ಬಂದ ಕೀನ್ಯಾ ಸಂಸದ..

ಬೈಕ್ ಕದ್ದ ಆರೋಪದ ಮೇಲೆ ಮತ್ತೆ ಗಣಪ್ರಕಾಶಂನನ್ನು ಮತ್ತೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ, ಜೈಲಿನ ಊಟ ಮತ್ತು ಸಹ ಕೈದಿಗಳ ಗೆಳೆತನ ಬಯಸಿ ಉದ್ದೇಶಪೂರ್ವಕವಾಗಿ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಇದರ ಕುದ್ದಾಗಿ ಕಲ್ಲನಿಂದಲೇ ಮಾಹಿತಿ ಕೇಳಿದರೆ ನನಗೆ ಜೈಲಿನಲ್ಲಿರುವ ಜೈಲೂಟ ಮತ್ತು ಅಲ್ಲಿನ ಸಹ ಕೈದಿಗಳ ಗೆಳೆತನ ಅತ್ಯಂತ ಪ್ರೀಯವಾದದ್ದು, ಅದರನ್ನು ಮಿಸ್ ಮಾಡಿಕೊಳ್ಳಲು ಆಗುವುದಿಲ್ಲ ಅದಕ್ಕಾಗಿ ನಾನು ಮತ್ತೆ ಜೈಲು ಸೇರಲು ಬಯಸ್ಸಿದ್ದೇನೆ. ನನ್ನ ಮನೆಯಲ್ಲಿವೂ ನನಗೆ ಸರಿಯಾದ ಕಾಳಜಿ ಇಲ್ಲ, ಇಲ್ಲಿರುವ ಸ್ನೇಹಿತರು ನನಗೆ ಪ್ರೀತಿ ತೋರಿಸಿ ಕುಟುಂಬದವರ ರೀತಿ ನೋಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಬಿಡುಗಡೆಯಾದರು ಮತ್ತೆ ಮತ್ತೆ ಯಾವುದಾದರು ಅಪರಾಧ ಮಾಡಿ ಜೈಲು ಸೇರುತ್ತೇನೆ ಎಂದು ಹೇಳಿಕೊಂಡಿದ್ದಾನೆ. ಇವನನ್ನು ಜಗ್ಗತ್ತಿನ 8 ನೇ ಅದ್ಬುತ ಎಂದರು ಸಾಲದು ಎಂದು ಹಲವು ಮಾತನಾಡತ್ತಿದ್ದಾರೆ. ಒಟ್ಟಾರೆಯಾಗಿ ದುಡಿಯಲು ಆಗದೆ ಈ ತರಹದ ಕೆಲಸ ಮಾಡುವುದು ಮಾನವ ಕುಲಕ್ಕೆ ಅಗೌರವ ತೋರುತ್ತದೆ.