ಸಾವಿಗೂ ಮುನ್ನ ಐ ಲವ್ ಮುಸ್ಲಿಮ್ಸ್ ಅಂತ ಮೆಸೇಜ್ ಮಾಡಿದ್ದ ಈ ಯುವತಿಯ ಸಾವು ಇಡೀ ಮಲೆನಾಡನ್ನೇ ಬೆಚ್ಚಿ ಬೀಳಿಸಿದೆ

0
924

ಚಿಕ್ಕಮಗಳೂರು ಜಿಲ್ಲೆ‌ಮೂಡಿಗೆರೆಯ ಯುವತಿ ಧನ್ಯ ಆತ್ಮಹತ್ಯೆ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆ ತಂದೆ ಮೊಬೈಲ್ ಕಸಿದು ಕೊಂಡ ಪರಿಣಾಮ ಮನನೊಂದು ಆತ್ಮಹತ್ಯೆ ಧನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇಂದು ಸಾವಿಗೆ ವಾಟ್ಸಾಪ್ನಲ್ಲಿ ಧನ್ಯಶ್ರೀ ಮಾನಹಾನಿ ಮಾಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ದೂರು ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಓರ್ವನನ್ನು‌ ಬಂಧಿಸಿದ್ದು, ಇನ್ನುಳಿದ ಆರೋಪಿಗಳು ನಾಪತ್ತೆಯಾಗಿದ್ದಾರೆ.

ಹೌದು.. ಎರಡು ದಿನದ ಹಿಂದೆ ನಗರದ ಡಿಎಸ್ಬಿಜಿ ಸರ್ಕಾರಿ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಧನ್ಯಶ್ರೀ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಳು. ಈ ಸಂಬಂಧ ಮೊದಲಿಗೆ ಪ್ರಕರಣ ದಾಖಲಿಸಿಕೊಂಡ ಮೂಡಿಗೆರೆ ಪೊಲೀಸರು ತಂದೆ ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರು ದಾಖಲಿಸಿ ಕೈ ತೊಳೆದುಕೊಂಡಿದ್ದರು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಬದಲಾಗಿ ಧನ್ಯಶ್ರೀ ಸಾವಿಗೆ ಹಿಂದೂ ಸಂಘಟನೆಗಳ ನೈತಿಕ ಪೊಲೀಸ್ ಗಿರಿ ಕಾರಣ ಎಂಬ ಅನುಮಾನ ವ್ಯಕ್ತವಾಗಿತ್ತು.

ಧನ್ಯಶ್ರೀ ಕಾಲೇಜಿನಲ್ಲಿ ಮುಸ್ಲಿಂ ಯುವಕನೊಂದಿಗೆ ಸ್ನೇಹ ಬೆಳಸಿಕೊಂಡಿದ್ದಕ್ಕೆ ಇನ್ನೊಬ್ಬ ಸ್ನೇಹಿತ ಆತನ ಜೊತೆ ಸ್ನೇಹ ಬಳಸದಂತೆ ವಾಟ್ಸಾಪ್ನಲ್ಲಿ ಬೆದರಿಕೆ ಹಾಕಿದ್ದ. ಇದಕ್ಕೆ ಧನ್ಯಶ್ರೀ ವಿರೋಧ ವ್ಯಕ್ತಪಡಿಸಿದ್ದಳು. ಆತ ಈ ಬಗ್ಗೆ ಬಜರಂಗದಳ ಮುಖಂಡರಿಗೆ ತಿಳಿಸುವುದಾಗಿ ಹೆದರಿಸಿದ್ದ. ಇದಕ್ಕೂ ಧನ್ಯಶ್ರೀ ಸೊಪ್ಪು ಹಾಕದಿದ್ದಾಗ ಆಕೆಯ ಜೊತೆ ಮಾತುಕತೆ ನಡೆಸಿದ್ದ ವಾಟ್ಸಾಪ್ ಸಂದೇಶಗಳನ್ನು ಎಲ್ಲಾ ಜಿಂದೂ ಪರ ಸಂಘಟನೆಗಳ ಗ್ರೂಪ್ನಲ್ಲಿ ಹಾಕಿದ್ದ. ಈ ಸಂದೇಶಗಳಲ್ಲಿ ‘ಐ ಲವ್ ಮುಸ್ಲಿಮ್ಸ್ ಎಂದು ಧನ್ಯಶ್ರೀ ಮೆಸೇಜ್ ಮಾಡಿದ್ದಳು. ಮನನೊಂದ ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರತೊಡಗಿತ್ತು. ಈ ಬಗ್ಗೆ ಜಿಲ್ಲಾ ವರಿಷ್ಟಾಧಿಕಾರಿ ಅನಾಮದೇಯ ಸಂದೇಶವನ್ನು ನೀಡಿದ್ರು. ಇದನ್ನು ಪರಿಶೀಲಿಸಿದ ಎಸ್ಪಿ ಅಣ್ಣಾಮಲೈ ಮತ್ತೊಂದು ದೂರು ದಾಖಲು ಮಾಡಿಕೊಂಡು ಅನಿಲ್ ಎಂಬಾತನನ್ನು ಬಂಧಿಸಿ‌ ಪೊಲೀಸರು ವಿಚಾರಣೆ ನಡೆಸಿದ್ರು. ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅಸಮಧಾನ ವ್ಯಕ್ತವಾಗಿತ್ತು.

ಇನ್ನು ಆತ್ಮಹತ್ಯೆಗೂ ಮೊದಲು ಧನ್ಯಶ್ರೀ ಡೆತ್ನೋಟ್ ಬರೆದಿಟ್ಟಿದ್ದಾಳೆ. ನಮ್ಮ ಮನೆಯ ಮುಂದೆ ಐವರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಂದು ನಮ್ಮ ತಾಯಿಯ ಎದುರು ನಿಮ್ಮ ಮಗಳು‌ ಮುಸ್ಲಿಂ ಹುಡುಗನ ಜೊತೆ ಓಡಾಡುತ್ತಿದ್ದಾಳೆ. ನೀವು ಲವ್ ಜಿಹಾದ್ಗೆ ಅವಕಾಶ ಮಾಡಿಕೊಟ್ಟಿದ್ದೀರಿ ಎಂದು ಧನ್ಯ ತಾಯಿಗೆ ಧಮ್ಕಿ ಹಾಕಿದ್ದಾರೆ ಎಂದು ಡೆತ್ನೋಟ್ನಲ್ಲಿ ಬರೆಯಲಾಗಿದೆ. ಇದ್ರಿಂದ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅನಿಲ್ ಎಂಬಾತನನ್ನು ಬಂಧಿಸಿದ್ದು ಉಳಿದವರು ನಾಪತ್ತೆಯಾಗಿದ್ದಾರೆ. ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ನಾಪತ್ತೆಯಾದವರಿಗೆ ಹುಡುಕಾಟ ನಡೆಸಿದ್ದಾರೆ.