Kannada News | kannada Useful Tips
ಕರ್ನಾಟಕದಲ್ಲಿ ಮಾರಾಟವಾಗುತ್ತಿರುವ ಮೆಣಸಿನ ಪುಡಿಯಲ್ಲಿ ವಿಷಯುಕ್ತ ರಾಸಾಯನಿಕ ಮಿಕ್ಸ್ ಮಾಡಲಾಗಿದೆ ಎಂದು ಕೇಂದ್ರದ ಸ್ಪೈಸಿ ಬೋರ್ಡ್ ತಿಳಿಸಿದೆ.. ನಾವುಗಳು ದಿನನಿತ್ಯ ಬಳಸುವ ಮೆಣಸಿನ ಪುಡಿಯಲ್ಲಿ ಡೇಂಜರಸ್ ಕೆಮಿಕಲ್ ಮಿಕ್ಸ್ ಆಗಿದ್ದೂ ಇದನ್ನು ಬಳಸುವ ಜನರ ಸ್ಥಿತಿ ಹದಗೆಡುತ್ತದೆ ಎಂದು ತಿಳಿದುಬಂದಿದೆ..
ಯಾವ ಕೆಮಿಕಲ್??
ರಾಜ್ಯದಲ್ಲಿ ಮಾರಾಟವಾಗುತ್ತಿರುವ ಮೆಣಸಿನ ಪುಡಿಯಲ್ಲಿ ಶೂ ಪಾಲೀಶ್ ಮಾಡುವ ಕಲರ್ ಹಾಗೂ ಬಟ್ಟೆಗಳ್ಳಲ್ಲಿ ಬಳಸುವ ಸುಡಾನ್ ಎಂಬ ಕೆಮಿಕಲ್ ಮಿಶ್ರಣವಾಗಿದೆ ಎಂದು ತಿಳಿದು ಬಂದಿದೆ.. ಜೊತೆಗೆ ಕ್ಯಾನ್ಸರ್ ಕಾರಕ ಅಂಶವಿರುವ ಸುಡಾನ್ ಪೋರ್ ಎಂಬ ಕೆಮಿಕಲ್ ಕೂಡ ಬಳಕೆಯಾಗಿರುವುದು ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನ ಕಾಂಪ್ರೆಸ್ ಚಿಲ್ಲಿ ಪೌಡರ್ ನಲ್ಲಿ ಪತ್ತೆಯಾಗಿದೆ.. ಇದೇ ವಿಷಯವಾಗಿ ಕೇಂದ್ರ ಸ್ಪೈಸಿ ಬೋರ್ಡ್ ಪರೀಕ್ಷೆ ಮಾಡಿದಾಗ ವಿಷಯುಕ್ತ ಕ್ಯಾನ್ಸರ್ ಕಾರಕ ಅಂಶ ವಿರುವುದು ಬಯಲಾಗಿದೆ..
ಅದಕ್ಕಾಗಿಯೇ ರಾಜ್ಯದ ಆಹಾರ ಸುರಕ್ಷತಾ ಮಂಡಳಿಗೆ ಕೇಂದ್ರ ಸ್ಪೈಸಿ ಬೋರ್ಡ್ ಪತ್ರ ಬರೆದು ಎಚ್ಚರಿಸಿದೆ ಎನ್ನಲಾಗಿದೆ.. ಕಾಂಪ್ರೆಸ್ ಕಂಪನಿಯಲ್ಲಿ ಈಗ ಇರುವ ಮೆಟ್ರಿಕ್ ಟನ್ ನಷ್ಟು ಚಿಲ್ಲಿ ಪೌಡರ್ ಅನ್ನು ವೈಜ್ಞಾನಿಕವಾಗಿ ಸುಡುವುದಕ್ಕೆ ಆಹಾರ ಸುರಕ್ಷತಾ ಇಲಾಖೆಯ ಮಂಡಳಿ ಆದೇಶಿಸಿದೆ.. ಜೊತೆಗೆ ಎಲ್ಲಾ ಬ್ರಾಂಡ್ ಮೆಣಸಿನ ಪುಡಿಯನ್ನು ಸ್ಯಾಂಪಲ್ ಟೆಸ್ಟ್ ಗೆ ಕಳುಹಿಸಲಾಗಿದೆ..
ಕರ್ನಾಟಕದ ಚಿಲ್ಲಿ ಪೌಡರ್ ಅನ್ನು ವಿದೇಶದಲ್ಲೂ ಬ್ಯಾನ್ ಮಾಡಲಾಗಿದೆ ಎಂದು ತಿಳಿದುಬಂದಿದೆ..