ಮನೆಯಲ್ಲಿ ಗಡಿಯಾರದಿಂದ ಎಂತೆತಾ ಗಂಡಾಂತರ ಬರಬಹುದು ಗೊತ್ತಾ!!!

0
10883

ನಿಂತ ಗಡಿಯಾರದಿಂದ ಏನ್ ಅನಿಷ್ಟ?

ಮನೆಯಲ್ಲಿರುವ ಹಲವು ವಸ್ತುಗಳು ನಮ್ಮ ಜೀವನದಲ್ಲಿ ಬಹಳಷ್ಟು ಮಹತ್ವವನ್ನು ಹೊಂದಿರುತ್ತವೆ. ಅಂತಹುಗಳಲ್ಲಿ ಗಡಿಯಾರವೂ ಒಂದು. ಮನೆಯಲ್ಲಿರಲಿ ಅಥವಾ ಹೊರಗಿರಲಿ ನಾವು ಗಂಟೆ ಎಷ್ಟಾಯಿತೆಂದು ತಿಳಿಯಲು ಗಡಿಯಾರವನ್ನು ಬಳಸುತ್ತೇವೆ. ಗಡಿಯಾರ ಸಮಯದ ಸರಿಯಾದ ಮಾಹಿತಿಯನ್ನು ನೀಡುವುದಲ್ಲದೆ ಪರಿವಾರದ ಆರೋಗ್ಯ ಹಾಗೂ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಮನೆಯಲ್ಲಿ ಗೋಡೆಯಲ್ಲಿ ಗಡಿಯಾರವನ್ನು ತೂಗು ಹಾಕುವಾಗ ಈ ಅಂಶಗಳನ್ನ ಗಮನದಲ್ಲಿಟ್ಟುಕೊಳ್ಳಿ.

ಪೂರ್ವ ಅಥವಾ ಉತ್ತರದ ದಿಕ್ಕಿನ ಗೋಡೆಯಲ್ಲಿ ಗಡಿಯಾರ ಇರಿಸಬೇಡಿ

ಗಡಿಯಾರವನ್ನು ಪೂರ್ವ ಅಥವಾ ಉತ್ತರ ದಿಕ್ಕಿನ ಗೋಡೆಯಲ್ಲಿ ಅಳವಡಿಸಬೇಕು. ದಕ್ಷಿಣ ದಿಕ್ಕಿನಲ್ಲಿ ಅಳವಡಿಸಬಾರದು. ಒಂದು ವೇಳೆ ದಕ್ಷಿಣ ದಿಕ್ಕಿಗೆ ಅಳವಡಿಸಿದರೆ ದಿನದಲ್ಲಿ ಬಹಳ ಬಾರಿ ನೀವು ದಕ್ಷಿಣ ದಿಕ್ಕಿನೆಡೆಗೆ ನೋಡುತ್ತೀರಾ. ಇದರಿಂದ ದಕ್ಷಿಣ ದಿಕ್ಕಿನಿಂದ ಬರುವ ನಕಾರಾತ್ಮಕ ಶಕ್ತಿ ಬರುತ್ತದೆ. ಅದು ಮನೆಗೆ ಒಳ್ಳೆಯದಲ್ಲ.

ತಲೆ ಬಳಿ ಗಡಿಯಾರ ಇಡಬೇಡಿ

ಯಾವತ್ತೂ ನಿಮ್ಮ ತಲೆ ಮೇಲೆ ಗಡಿಯಾರ ಇಡಬೇಡಿ. ರಾತ್ರಿ ಮಲಗುವಾಗ ನಿಮ್ಮ ತಲೆಗಿಂತಲೂ ಸ್ವಲ್ಪ ದೂರದಲ್ಲೇ ಗಡಿಯಾರ ಇಡಿ. ಗಡಿಯಾರದಿಂದ ಹೊರಬರುವ ಇಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಶನ್ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನೀವು ಅನಾರೋಗ್ಯಕ್ಕೀಡಾಗುತ್ತೀರಿ.

ನಿಂತ ಗಡಿಯಾರ ಇಡಬೇಡಿ

ಮನೆಯಲ್ಲಿರುವ ಪ್ರತಿ ಗಡಿಯಾರವು ಚಲಿಸುತ್ತಾ ಇರಬೇಕು. ನಿಂತಿರುವ ಗಡಿಯಾರವನ್ನು ಯಾವತ್ತೂ ಮನೆಯಲ್ಲಿಡಬೇಡಿ. ನಿಂತಿರುವ ಗಡಿಯಾದ ನಕಾರಾತ್ಮಕತೆಯನ್ನು ಬೀರುವುದರಿಂದ ಸಕಾರಾತ್ಮಕ ಗುಣಗಳು ಕಡಿಮೆಯಾಗುತ್ತದೆ.

ಮ್ಯೂಸಿಕ್ ಗಡಿಯಾರ

ಕೆಲವೊಂದು ಗಡಿಯಾರಗಳಲ್ಲಿ ಪ್ರತಿಗಂಟೆಗೊಮ್ಮೆ ಮ್ಯೂಸಿಕ್ ಬರುತ್ತದೆ. ಇಂತಹ ಗಡಿಯಾರವನ್ನು ಮನೆಯ ಹಾಲ್‍ನಲ್ಲಿಡಿ. ಇದರಿಂದ ಸಕಾರತ್ಮಕ ಶಕ್ತಿ ಹೆಚ್ಚುತ್ತದೆ.

ಬಾಗಿಲ ಮೇಲೆ ಗಡಿಯಾರ ಇಡಬೇಡಿ

ಯಾವುದೇ ಬಾಗಿಲ ಮೇಲೆ ಗಡಿಯಾರ ಇಡಬೇಡಿ. ನೀವು ಒಳ ಹೊರ ಹೋಗುವಾಗ ನಿಮ್ಮ ತಲೆ ಮೇಲೆ ಗಡಿಯಾರವಿರುತ್ತದೆ. ಇದರ ಕಾರಣದಿಂದ ನೀವು ಒತ್ತಡಕ್ಕೊಳಗಾಗುತ್ತೀರಿ.

Also read: ಜ್ಯೋತಿಷ್ಯದ ಪ್ರಕಾರ ಓದುವ ಮಕ್ಕಳಿಗೆ ಈ ವರ್ಷದ ಪರೀಕ್ಷೆಯಲ್ಲಿ ಅವರು ಕಷ್ಟ ಪಟ್ಟಿದಕ್ಕೆ ಪ್ರತಿಫಲ ಸಿಗ ಬೇಕಾದರೆ ಈ ರೀತಿ ಮಾಡಿ!!