ಮಂಡ್ಯದ ಚುನಾವಣಾ ಕ್ಷೇತ್ರ ದಿನದಿಂದ ದಿನಕ್ಕೆ ಕೆಂಡವಾಗುತ್ತಿದ್ದು. ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಪರ ಪ್ರಚಾರ ಅಬ್ಬರದಿಂದ ಸಾಗಿದ್ದು ಮಂಡ್ಯದ ಎಲ್ಲ ಕಡೆಗಳಲ್ಲೂ ಸುಮಲತಾ ಹವಾ ಎಂದು ಕಾಣುತ್ತಿದೆ. ಅದೇ ರೀತಿ ಮುಖ್ಯಮಂತ್ರಿಗಳ ಪುತ್ರನ ಪ್ರಚಾರವು ಜೋರಾಗಿದೆ. ಅದರಂತೆ ನಟ ದರ್ಶನ್ ಯಶ್ ಅವರ ಪ್ರಚಾರ ದಿನದಿಂದ ದಿನಕ್ಕೆ ಹೆಸರು ಮಾಡುತ್ತಿದ್ದು ಇವರ ವಿರುದ್ದ ಕುಮಾರಸ್ವಾಮಿಯವರು ದಿನಕೊಂದು ವ್ಯಂಗ್ಯವಾಡುತ್ತಿದ್ದಾರೆ. ಮೊನ್ನೆ ತಾನೇ ಇವರು ಜೋಡೆತ್ತುಗಳು ಅಲ್ಲ ಕಳ್ಳೆತ್ತುಗಳು ಎಂದು ಹೇಳಿದ ಸಿಎಂ ಮತ್ತೆ ವ್ಯಂಗ್ಯ ವಾಡಿದ್ದು ಛತ್ರಿಯಿಂದ ಈಗ ಕೆಳಗಿಳಿದ ನಟರಿಗೆ ರೈತರ ಕಷ್ಟ ತಿಳಿಯಲಿ ಎಂದು ವ್ಯಂಗ್ಯ ವಾಡಿದ್ದಾರೆ, ಇದಕ್ಕೆ ನಟ ಯಶ್ ನೇರವಾಗಿ ಉತ್ತರ ನೀಡಿದ್ದಾರೆ.
ಹೌದು ಸುಮಲತಾ ಅಂಬರೀಷ್ ಪರ ಪ್ರಚಾರ ನಡೆಸುತ್ತಿರುವ ನಟರಾದ ದರ್ಶನ್ ಮತ್ತು ಯಶ್ ವಿರುದ್ಧ ಸಿಎಂ ಕುಮಾರಸ್ವಾಮಿ ಮತ್ತೆ ಹರಿಹಾಯ್ದಿದ್ದಾರೆ. ಇಂದು ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಇಷ್ಟು ದಿನ ಛತ್ರಿ ಅಡಿಯಲ್ಲಿ ನೆರಳಲ್ಲಿ ನಿಂತು ಸಿನಿಮಾ ಶೂಟಿಂಗ್ ನಲ್ಲಿ ಇರುತ್ತಿದ್ದರು. ಈಗ ಛತ್ರಿ ಬಿಟ್ಟು ಬಿಸಿಲಿಗೆ ಬಂದಿದ್ದಾರೆ, ಬಿಸಿಲಲ್ಲಿ ಸ್ವಲ್ಪ ಓಡಾಡಿ ಹಳ್ಳಿ ಕಡೆ ರೈತರ ಕಷ್ಟ ಏನೆಂದು ತಿಳಿದುಕೊಳ್ಳಲಿ, ಅರ್ಥವಾಗುತ್ತದೆ ಎಂದು ಯಶ್ ಮತ್ತು ದರ್ಶನ್ ಬಗ್ಗೆ ವ್ಯಂಗ್ಯವಾಡಿದರು. ಇದೇ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಮೀಡಿಯಾಗಳ ವಿರುದ್ಧವೂ ಸಿಎಂ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಮಂಡ್ಯ ಬಿಟ್ಟರೆ ಬೇರೆ ಯಾವುದೇ ಕ್ಷೇತ್ರವಿಲ್ಲದ ರೀತಿಯಲ್ಲಿ ದಿನಪೂರ್ತಿ ಅಲ್ಲಿಯ ಸುದ್ದಿಯನ್ನೇ ತೋರಿಸ್ತಾರೆ. ಎಂದು ಆಕ್ರೋಶ ವ್ಯಕ್ತಪಡಿಸಿ.
Also read: ಸಿ ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಮುಂದಿದ್ದಾರೆ; ಚುನಾವಣೆ ಮುಗಿಯುವ ಒಳಗೆ ರಾಹುಲ್ ಗಾಂಧಿ ಮುಂದೆ ಬರಲು ಸಾಧ್ಯವಾ?
ಎಲೆಕ್ಟ್ರಾನಿಕ್ ಮೀಡಿಯಾಗಳ ಮಾಲೀಕರು ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಏನೇ ಅಪಪ್ರಚಾರ ಮಾಡಿದರೂ, ಏನೇ ವರದಿ ಮಾಡಿದರೂ ಕೂಡ ಮಂಡ್ಯ ಜಿಲ್ಲೆಯ ಜನತೆಯನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ, ನಾನು ಮಂಡ್ಯ ಜಿಲ್ಲೆಯ ಜನತೆ ಜೊತೆಗೆ ಹೊಂದಿರುವ ಸಂಬಂಧವನ್ನು ಬೇರ್ಪಡಿಸಲು ಸಾಧ್ಯವಿಲ್ಲ, ನನಗೆ ಯಾವುದೇ ಆತಂಕ, ಭಯವಿಲ್ಲ ಕರ್ನಾಟಕದ 28 ಲೋಕಸಭೆ ಕ್ಷೇತ್ರಗಳ ಪೈಕಿ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ -ಜೆಡಿಎಸ್ ಕಾರ್ಯಕರ್ತರ ನಡುವೆ ಭಿನ್ನಾಭಿಪ್ರಾಯಗಳು ಇವೆ. ಅದನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. 22ಕ್ಕಿಂತ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ನಮಗಿದೆ. 2014ಕ್ಕೂ 2019ಕ್ಕೂ ಬಹಳ ವ್ಯತ್ಯಾಸವಿದೆ, ನರೇಂದ್ರ ಮೋದಿಯವರಿಗೂ ಈ ಚುನಾವಣೆ ಅಷ್ಟು ಸುಲಭವಾಗಿಲ್ಲ ಎಂದು ಹೇಳಿದ್ದಾರೆ. ಇವರ ಮಾತಿಗೆ ನೇರವಾಗಿ ಉತ್ತರ ನೀಡಿದ ಯಶ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ವಿರುದ್ದ ಯಶ್ ಅಕ್ರೋಶ
ಇವು ಶೋಕಿ ಎತ್ತುಗಳು ಬಿಸಿಲಿಗೆ ಬರಲ್ಲ” ಎಂಬ ಸಿಎಂ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಯಶ್, ನಮಗೆ ಬಿಸಿಲು ಹೊಸದೇನಲ್ಲ ಎಂದಿದ್ಧಾರೆ. ಅಷ್ಟೇ ಅಲ್ಲದೇ ನಮ್ಮಪ್ಪ ಡ್ರೈವರ್, ನಾನು ಡ್ರೈವರ್ ಮಗ. ಹೀಗಾಗಿ ನಮಗೆ ಬಿಸಿಲು ಹೊಸದಲ್ಲ ಎನ್ನುವ ಮೂಲಕ ಸಿಎಂ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿ, ಬಿಸಿಲಿಗೆ ಬರಬೇಕೆಂದು ತೋರಿಸಿಕೊಡೋರು ಜನ. ನಮಗೆ ಬಿಸಿಲು ಹೊಸದೇನಲ್ಲ. ರೋಡ್ನಲ್ಲಿ ಗಲ್ಲಿ ಕ್ರಿಕೆಟ್, ಬುಗುರಿ ಆಡಿ ಬೆಳೆದವನು. ನಾನು ಡ್ರೈವರ್ ಮಗ, ನಮಗೆ ಬಿಸಿಲು ಹೊಸದಲ್ಲ. ಸರ್ಕಾರಿ ಬಸ್ಸಲ್ಲಿ ಓಡಾಡಿಯೇ ಇಲ್ಲಿಗೆ ಬಂದವರು ನಾವು. ಮತ್ತೆ ಬಿಸಿಲಿಗೆ ಬರೋಕೆ ನನಗೇನೂ ಸಮಸ್ಯೆ ಇಲ್ಲ. ಆದರೆ, ಹುಟ್ಟಿದಾಗಿನಿಂದ ನೆರಳಲ್ಲೇ ಇದ್ದವರು ಯಾರು? ಹೀಗೆ ಬೆಳೆದವರು ಮಾತ್ರ ಬಿಸಿಲು ಬಗ್ಗೆ ಯೋಚಿಸಬೇಕು ಎಂದು ಸಿಎಂ ಹೇಳಿಕೆಗೆ ನೇರವಾಗಿ ಉತ್ತರಿಸಿದ್ದಾರೆ.