ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರು ಸಿಎಂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗೋದಿಲ್ವಂತೆ ಯಾಕೆ ಹೇಳಿ ನೋಡಣ..!

0
978

ಹೌದು,ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರು ಸಿಎಂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗೋದಿಲ್ವಂತೆ ಯಾಕೆ ಗೊತ್ತ.

ಹೋದಲ್ಲಿ ಬಂದಲ್ಲಿ, ಈ ಬಾರಿಯೂ ಕಾಂಗ್ರೆಸ್ ಗೆಲ್ಲುತ್ತೆ, ಮತ್ತೆ ನಾನೇ ಸಿಎಂ ಆಗುತ್ತೇನೆ ಎಂದು ಹೇಳುತ್ತಿದ್ದ ಸಿಎಂ ಸಿದ್ದರಾಮಯ್ಯ ಬುಧವಾರ ಉಲ್ಟಾ ಹೊಡೆದಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಿಎಂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಆದ್ರೆ ನಾನೇ ಮುಖ್ಯಮಂತ್ರಿ ಆಗ್ತೀನಿ ಅನ್ನೋದು ಅನುಮಾನ ಎಂದಿದ್ದಾರೆ.

ಈ ಮೂಲಕ ಸಿಎಂ ರೇಸ್‍ನಿಂದ ಹಿಂದೆ ಸರಿಯುವ ಮಾತನಾಡಿದ್ದಾರೆ. ಇದಕ್ಕೆ ಕಾರಣ ಏನು ಅಂತಾ ಗೊತ್ತಾಗಿಲ್ಲ. ಸಿಎಂ ರೇಸ್‍ನಲ್ಲಿ ತಮಗಿಂತ ಪ್ರಭಾವಿಗಳು ಇದ್ದಾರೆ ಅನ್ನೋ ಲೆಕ್ಕಾಚಾರವೋ, ಅಥವಾ ಹೈಕಮಾಂಡ್ ಮತ್ತೆ ತಮ್ಮನ್ನು ಸಿಎಂ ಮಾಡಲ್ಲ ಅನ್ನೋ ಅವಿಶ್ವಾಸವೋ ಅಥವಾ ಶಾಸಕರು ತಮ್ಮನ್ನು ಬೆಂಬಲಿಸುತ್ತಾರೋ ಇಲ್ಲವೋ ಎಂಬ ಅನುಮಾನವೋ ಗೊತ್ತಿಲ್ಲ.

ಇತ್ತೀಚಿಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ ಸಾರ್ವಜನಿಕ ಸಭೆಯೊಂದರಲ್ಲಿ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನೇ ಸಿಎಂ ಆಗ್ತೀನಿ ಅಂತಾ ಹೇಳಿದ್ದರು. ಆದರೆ ಅದಾದ ಬಳಿಕ ಉಲ್ಟಾ ಹೊಡೆದ ಶಿವಕುಮಾರ ರವರು ಸಿದ್ದರಾಮಯ್ಯನವರೇ ನಮ್ಮ ಸಿಎಂ ಅಭ್ಯರ್ಥಿ ಎಂದು ಹೇಳಿಕೆ ನೀಡಿದ್ದಾರೆ.