ಯೋಗಿ ಒಬ್ಬ ಡೋಂಗಿ ವ್ಯಕ್ತಿ, ಬೂಟಾಟಿಕೆಗೆ ಗೋಸ್ಕರ ಖಾವಿ ಹಾಕಿದ್ದಾನೆ ಎಂದು ಏಕವಚನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ…!

0
661

ಬೆಂಗಳೂರಿನ ವಿಜಯನಗರದ MC ಲೇಔಟ್‍ನಲ್ಲಿ ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳಲು ಬಂದಿದ್ದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್, ಸಿಎಂ ಸಿದ್ದರಾಮಯ್ಯನವರ ಮೇಲೆ ವಾಗ್ದಾಳಿ ನಡೆಸಿದರು. ಸಿಎಂ ಸಿದ್ದರಾಮಯ್ಯನವರಿಗೆ ಹಿಂದೂಗಳ ಬಗ್ಗೆ ಇಷ್ಟು ದಿನ ಇಲ್ಲದ ಕಾಳಜಿ ಚುನಾವಣೆ ಹತ್ತಿರ ಬಂದಮೇಲೆ ಏಕಾಏಕಿ ಹೇಗೆ ಬಂತು ಎಂದು ಟೀಕಿಸಿದ್ದರು, ಅದಕ್ಕೆ ಸಿಎಂ ಸಿದ್ದರಾಮಯ್ಯ ಕಟುವಾಗಿ ಪ್ರತ್ಯುತ್ತರ ನೀಡಿದ್ದಾರೆ.

ಯೋಗಿ ಆದಿತ್ಯನಾಥ್ ಒಬ್ಬ ಡೋಂಗಿ ಮನುಷ್ಯ, ಸುಮ್ಮನೆ ಬೂಟಾಟಿಕೆಗೆ ಖಾವಿ ಹಾಕಿ ತಿರುಗುತ್ತಿದ್ದಾನೆ, ಹಿಂದುತ್ವದ ಬಗ್ಗೆ ಆತನಿಗಿಂತ ನನಗೆ ಚೆನ್ನಾಗಿ ಗೊತ್ತು, ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ಅವರ ಬಗ್ಗೆ ಏಕವಚನದಲ್ಲಿ ಟೀಕಿಸಿದ್ದಾರೆ.

ಉಡುಪಿ ಜಿಲ್ಲೆ ಕಾಪುವಿನಲ್ಲಿ ನಡೆದ ಶಂಕುಸ್ಥಾಪನೆ ಮತ್ತು ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡು, ಕಾರ್ಯಕ್ರಮದ ಭಾಷಣದಲ್ಲಿ ಮಾತನಾಡಿದ ಸಿಎಂ, ಯೋಗಿ ಯಾವತ್ತಾದರೂ ಸಗಣಿ ಹೊತ್ತಿದಾನ, ಹಸು ಸಾಕಿದ್ದಾನ ಎಂದು ಪ್ರಶ್ನಿಸಿದರು. ನಮ್ಮ ಮನೆಯಲ್ಲಿ ದನ-ಕರುಗಳಿವೆ ಹಸುಗಳಿವೆ ನಮ್ಮದು ರೈತಾಪಿ ಕುಟುಂಬ ನನ್ನ ಚಿಕ್ಕವನಾಗಿದ್ದಾಗಿನಿಂದಲೂ ಸಗಣಿ ಎತ್ತಿದ್ದೇನೆ ಸುಮ್ಮನೆ ಇವರಥರ ಡೋಂಗಿ ಮಾಡಲ್ಲ ಎಂದರು.

ಯೋಗಿ ಆದಿತ್ಯನಾಥ್ ಗೆ ಮನುಷ್ಯತ್ವ ಇಲ್ಲ, ರಾಕ್ಷಸಿ ಪ್ರವೃತ್ತಿ ವ್ಯಕ್ತಿತ್ವದ ಯೋಗಿ ಸ್ವಲ್ಪ ಸ್ವಾಮಿ ವಿವೇಕಾನಂದರ ಬಗ್ಗೆ ಓದಿಕೊಳ್ಳಲಿ. ಬೂಟಾಟಿಕೆಗೆ ಖಾವಿ ಧರಿಸಿದ್ದು, ಹಿಂದುತ್ವದ ಬಗ್ಗೆ ಆತನಿಗೆ ಏನೂ ಗೊತ್ತಿಲ್ಲ. ನಾನು ಒಮ್ಮೆ ಬೀಫ್ ತಿಂದು ಆಮೇಲೆ ತಿಂದಿಲ್ಲ, ನನಗೆ ಬೀಫ್ ಹಿಡಿಸಲ್ಲ, ಆದರೂ ಯಾರಿಗೆ ಯಾವುದು ಇಷ್ಟ ಅವರು ಅದನ್ನ ತಿನ್ಕೋತಾರೆ ಅದನ್ನೆಲ್ಲ ಹೇಳೋಕೆ ನೀವ್ಯಾರು ಎಂದು ಪರೋಕ್ಷವಾಗಿ ಬಿಜೆಪಿಯವರ ನಡೆಯನ್ನು ಟೀಕಿಸಿದರು.

ನಮ್ಮದು ಪ್ರಜಾಪ್ರಭುತ್ವ ದೇಶ ಜನರು ತಮಗೆ ಏನು ಇಷ್ಟ ಅದನ್ನೇ ಮಾಡುತ್ತಾರೆ. ಅಲ್ಲದೆ ಅವರ ತಿಂಡಿ-ತಿನಿಸುಗಳ ಬಗ್ಗೆ ಮಾತನಾಡಲು ನಿಮಗೇನು ಹಕ್ಕಿದೆ ಎಂದು ಪ್ರಶ್ನಿಸಿದರು. ಮೋದಿ ಕಮಲ ಅರಳಿಸಲು ಇದು ಗುಜುರಾತ್ ಮತ್ತು ಉತ್ತರಪ್ರದೇಶವಲ್ಲ, ಇದು ನಮ್ಮ ಕರ್ನಾಟಕ ಜನ ಏನಿದ್ದರೂ ನಮಗೆ ಮತ ನೀಡುತ್ತಾರೆ ಎಂದು ಭವಿಷ್ಯ ನುಡಿದರು.