ಸಿಲಿಕಾನ್ ಸಿಟಿ ಜನರಿಗೆ ಬಂಪರ್ ಆಫರ್; ಬಡವರಿಗೆ ಅವರದ್ದೇ ಮನೆ ಕಟ್ಟಿಕೊಳ್ಳುವ ಕನಸು ಸಾಕಾರವಾಗುತ್ತೆ…

0
2065

ನೀವು ಸಿಲಿಕಾನ್ ಸಿಟಿಯಲ್ಲಿ 5 ವರ್ಷದಿಂದ ವಾಸವಾಗಿದ್ದೀರಾ..? ಇನ್ನು ಬಾ,ಡಿಗೆ ಮನೆಯಲ್ಲೇ ವಾಸಿಸ್ತಿದ್ದೀರಾ..? ನಿಮ್ಗೆ ಈ ಉದ್ಯಾನ ನಗರಿಯಲ್ಲಿ ಮನೆ ಕಟ್ಟೋ ಆಸ್ ಇದೀಯಾ..? ಹಾಗಾದ್ರೆ ಇನ್ಯಾಕ್ ತಡ ಬೇಗ ಆನ್ ಲೈನ್ ನಲ್ಲಿ ಅರ್ಜಿ ಹಾಕಿ.

ಕನ್ಫ್ಯೂಸ್ ಆಗ್ಬೇಡಿ. ಸಾಮಾಜಿಕ ಹಾಗೂ ಆರ್ಥಿಕ ದುರ್ಬಲರಿಗೆ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ‘ಮುಖ್ಯಮಂತ್ರಿ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ ಗೆ ಅರ್ಜಿ ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.

ನಗರದಲ್ಲಿ 1,100 ಎಕರೆ ಸರಕಾರಿ ಭೂಮಿಯಲ್ಲಿ ಸರ್ಕಾರ ಮನೆ ನಿರ್ಮಿಸಲಿದೆ. ಮುಂದಿನ 24 ತಿಂಗಳ ಕಾಲಮಿತಿಯೊಳಗೆ ನಿರ್ಮಿಸುವ ಗುರಿ ಹೊಂದಲಾಗಿದೆ.

ಯಾರು ಯಾರು ಅರ್ಜಿ ಸಲ್ಲಿಸಬಹುದು..?

 • ಬೆಂಗಳೂರಿನಲ್ಲಿ ಸ್ವಂತ ಮನೆ ಅಥವಾ ನಿವೇಶನ ಇಲ್ಲದವರು.
 • ಬಿಪಿಎಲ್‌ ಕುಟುಂಬವಾಗಿರಬೇಕು.
 • ನಗರದಲ್ಲಿ ಕನಿಷ್ಠ 5 ವರ್ಷಗಳಿಂದ ವಾಸಿಸುತ್ತಿರಬೇಕು.
 • ಮಾಸಿಕ 7000 ರೂ. ವೇತನ ಪಡೆಯುವವರು, ಅಂದರೆ ವಾರ್ಷಿಕ ಆದಾಯದ ಮಿತಿ 87000 ರೂ. ದಾಟದವರು ಈ ಯೋಜನೆಯ ಫಲಾನುಭವಿಗಳಾಗಬಹುದು.

ಅರ್ಜಿ ಸಲ್ಲಿಕೆ ಎಲ್ಲಿ..? ಹೇಗೆ..?

 • ಬೆಂಗಳೂರು ಒನ್‌ ಕೇಂದ್ರ, ಬಿಬಿಎಂಪಿಯ ಎಲ್ಲ ವಾರ್ಡ್‌ ಕಚೇರಿ ಮತ್ತು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.
 • http://ashraya.kar.nic.in/cmonelakh ಗೆ ಲಾಗಿನ್ ಆಗಿ ಅರ್ಜಿ ತುಂಬಬೇಕು.
 • ಅರ್ಜಿ ಜತೆಗೆ ಜಾತಿ, ಆದಾಯ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರಗಳ ಆರ್‌ಡಿ ಸಂಖ್ಯೆ, ಪಡಿತರ, ಆಧಾರ್‌ ಕಾರ್ಡ್‌ ಸಂಖ್ಯೆ ಸಲ್ಲಿಸಿದರೆ ಸಾಕು.
 • ಅರ್ಜಿಯೊಂದಕ್ಕೆ 100 ರೂಪಾಯಿ ಹಣ ನಿಗದಿ ಮಾಡಲಾಗಿದೆ.
 • ಜನವರಿ 5ರೊಳಗೆ ಅರ್ಜಿ ಸಲ್ಲಿಸುವುದಕ್ಕೆ ಕಾಲಾವಕಾಶ
 • ಹೆಚ್ಚಿನ ಮಾಹಿತಿಗೆ 080-23118888 ಗೆ ಸಂಪರ್ಕಿಸಬಹುದು.
 • ಗಣಕೀಕೃತ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತದೆ.

ಈ ಯೋಜನೆಯಡಿ ನೆಲಮಹಡಿ ಸೇರಿ ಒಟ್ಟು ನಾಲ್ಕು ಅಂತಸ್ತುಗಳು ನಿರ್ಮಾಣವಾಗಲಿವೆ. ಪ್ರತಿ ಮನೆಯು ಮಲಗುವ ಕೊಠಡಿ, ಹಾಲ್‌, ಅಡುಗೆ ಮನೆ, ಸ್ನಾನದ ಕೋಣೆಯನ್ನು ಹೊಂದಿರಲಿದೆ. ಪ್ರತಿ ಮನೆ ನಿರ್ಮಾಣ ವೆಚ್ಚವನ್ನು 5.5 ಲಕ್ಷ ರೂ.ಗೆ ನಿಗದಿ ಮಾಡಲಾಗಿದೆ.

ಫಲಾನುಭವಿಗಳು ಅರ್ಜಿ ಸಲ್ಲಿಸುವಾಗ ಪರಿಶಿಷ್ಟರಾಗಿದ್ದರೆ 50 ಸಾವಿರ ರೂ. ಹಾಗೂ ಸಾಮಾನ್ಯ ವರ್ಗದವರು 1 ಲಕ್ಷ ರೂ. ಆರಂಭಿಕ ಠೇವಣಿ ಪಾವತಿಸಬೇಕು. ಫಲಾನುಭವಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರೆ ಒಟ್ಟು 3.80 ಲಕ್ಷ ರೂಪಾಯಿ ಹಾಗೂ ಸಾಮಾನ್ಯ ವರ್ಗದವರಿಗೆ 2.70 ಲಕ್ಷ ರೂ. ಸಬ್ಸಿಡಿ ಸಿಗಲಿದೆ. ಉಳಿದ ಮೊತ್ತವನ್ನು ಫಲಾನುಭವಿಗಳು ಭರಿಸಬೇಕಿದ್ದು, ಈ ಉದ್ದೇಶಕ್ಕೆ ಬ್ಯಾಂಕ್‌ ಸಾಲ ಸೌಲಭ್ಯ ಸಿಗಲಿದೆ.