ಗ್ರಾಮ ವಾಸ್ತವ್ಯ ನಡೆಸಿರುವ ಸಿಎಂ ಅವರ ಒಂದು ದಿನದ ವಾಸ್ತವ್ಯಕ್ಕೆ ಖರ್ಚಾದ ಹಣ ಕೋಟಿ ರೂ ಅಂತೆ, ಇದೇನಾ ದುಂದು ವೆಚ್ಚವಿಲ್ಲದೆ ಗ್ರಾಮ ವಾಸ್ತವ್ಯ??

0
316

ಯಾವುದೇ ದುಂದು ವೆಚ್ಚವಿಲ್ಲದೆ ಗ್ರಾಮ ವಾಸ್ತವ್ಯ ಮಾಡಲು ಹೋರಟ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಗ್ರಾಮ ವಾಸ್ತವ್ಯ ಮಾಡಿ ಜನರ ಕಷ್ಟಗಳಿಗೆ ನೆರವಾಗುತ್ತಾರೋ ಇಲ್ಲ ಮುಂದಿನ ಚುನಾವಣೆಗೆ ಇಗಲೇ ತಯಾರಿ ನಡೆಸಿದ್ದಾರೋ ಎನ್ನುವ ಮಾತುಗಳು ಎಡಪಕ್ಷಗಳಲ್ಲಿ ಕೇಳಿಬರುತ್ತಿವೆ. ಏಕೆಂದರೆ ಸರ್ಕಾರಿ ಶಾಲೆಯಲ್ಲಿ ಹಾಸಿಗೆ ಇಲ್ಲದೆ ಕೇವಲ ಚಾಪೆಯಲ್ಲೇ ಮಲಗಿ ಸರಳತೆ ಮೆರೆದಿದ್ದ ಸಿಎಂ ಕುಮಾರಸ್ವಾಮಿ 24 ಘಂಟೆಗಳ ವಾಸ್ತವ್ಯಕ್ಕೆ ಚಂಡರಕಿ ಗ್ರಾಮದಲ್ಲಿ ಉಳಿದುಕೊಂಡಿದ್ದಕ್ಕೆ ಕಾರ್ಯಕ್ರಮದ ಒಟ್ಟು ವೆಚ್ಚ ಬರೋಬ್ಬರಿ 1 ಕೋಟಿ ರುಪಾಯಿ ಅಂತೆ.

Also read: ಸಿ.ಎಂ. ಒಂದು ದಿನದ ಗ್ರಾಮ ವಾಸ್ತವ್ಯದ ಐಷಾರಾಮಿ ಬಾತ್ ರೂಂಗೆ ಮಾಡುತ್ತಿರುವ ಖರ್ಚಿನಲ್ಲಿ ಗ್ರಾಮದಲ್ಲಿ 30 ಶೌಚಾಲಯ ಆಗುತ್ತಿತ್ತು: ಗ್ರಾಮಸ್ಥರು!!

ಹೌದು ರಾಜ್ಯದಲ್ಲಿ ಜನರ ಕಷ್ಟಗಳಿಗೆ ನೇರವಾಗುವ ಉದ್ದೇಶದಿಂದ ನಡೆಸಿದ ಗ್ರಾಮ ವಾಸ್ತವ್ಯಕ್ಕೆ ಯಾವುದೇ ಹೆಚ್ಚಿನ ಹಣ ವೆಚ್ಚವಾಗುವುದಿಲ್ಲ ವೆಂದ ಸಿಎಂ ಈಗ ಏನು ಮಾಡಲು ಹೊರಟಿದ್ದಾರೆ ಎನ್ನುವ ಎನ್ನುವುದಕ್ಕೆ ಅಲ್ಲಿ ಕರ್ಚದ ಹಣವೇ ಅದರ ಸತ್ಯವನ್ನು ತಿಳಿಸುತ್ತೇ. ಅದರಂತೆ ಯಾದಗಿರಿ ಜಿಲ್ಲೆಯ ಗುರುಮಠಕಲ್‌ ತಾಲ್ಲೂಕಿನ ಚಂಡರಕಿ ಗ್ರಾಮದಲ್ಲಿ ಶುಕ್ರವಾರ ನಡೆದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯಕ್ಕೆ ರೂ. 1 ಕೋಟಿಗೂ ಅಧಿಕ ವೆಚ್ಚವಾಗಿದ್ದು, ಮಳೆಯಿಂದಾಗಿ ರದ್ದಾದ ಕಲಬುರ್ಗಿ ತಾಲ್ಲೂಕಿನ ಹೇರೂರ (ಬಿ) ಗ್ರಾಮದಲ್ಲಿ ರೂ. 50 ಲಕ್ಷ ಹಣ ಕರ್ಚು ಮಾಡಲಾಗಿದೆ.

ದಿನದ ವಾಸ್ತವ್ಯಕ್ಕೆ 1 ಕೋಟಿ ರೂ?

Also read: ಬಿಹಾರದಲ್ಲಿ 200ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಲಿಚಿ ಹಣ್ಣು ಕಾರಣವಂತೆ; ಚೀನಾ ಮೂಲದ ಲಿಚಿ ಹಣ್ಣಲ್ಲಿ ಇರುವ ವಿಷಕಾರಿ ವೈರಸ್ ಯಾವುದು ಗೊತ್ತಾ??

ಮುಖ್ಯಮಂತ್ರಿ ಹಾಗೂ ಅಧಿಕಾರಿಗಳು ಯಾದಗಿರಿಯಿಂದ ಚಂಡರಕಿವರೆಗೆ ಸಾರಿಗೆ ಸಂಸ್ಥೆಯ ಎರಡು ಬಸ್‌ಗಳಲ್ಲಿ ಬಂದರು. ಇನ್ನು ಎರಡು ಬಸ್‌ಗಳನ್ನು ಸಾರ್ವಜನಿಕರಿಗಾಗಿ ಗುರುಮಠಕಲ್‌ನಿಂದ ಚಂಡರಕಿಯವರೆಗೆ ನಿರಂತರವಾಗಿ ಓಡಾಡಲು ನಿಯೋಜಿಸಲಾಗಿತ್ತು. ಅಲ್ಲದೇ, 15 ದಿನಗಳವರೆಗೆ ಜಿಲ್ಲಾಧಿಕಾರಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಿದ್ಧತೆಯ ಉಸ್ತುವಾರಿ ವಹಿಸಿದ್ದರು. ಅದರ ಸಾರಿಗೆ ವೆಚ್ಚ ಸೇರಿಸಿದರೆ ಅಂದಾಜು ರೂ. 1 ಕೋಟಿ ಆಗಲಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಾವುದಕ್ಕೆ ಎಷ್ಟು ಕರ್ಚು?

Also read: ರಾಜ್ಯದಲ್ಲಿ ಮುಂದುವರೆದ ಸೋತ ಜೆಡಿಎಸ್ ಪಕ್ಷದ ನಾಯಕರ ದರ್ಪ; ವೋಟ್ ಬಿಜೆಪಿಗೆ ಹಾಕ್ತಾನೆ, ನನ್ನತ್ರ ಬಂದು ಚೀಟಿ ಕೊಟ್ಟಿದ್ದಾನೆ, ಮತದಾರನಿಗೆ ರೇವಣ್ಣ ಕ್ಲಾಸ್..

ಚಂಡರಕಿ ಹಾಗೂ ಹೇರೂರ (ಬಿ) ಗ್ರಾಮದಲ್ಲಿ ವಾಟರ್ ಪ್ರೂಫ್ ಶಾಮಿಯಾನವನ್ನು ಅಳವಡಿಸಲಾಗಿತ್ತು, ಇದನ್ನು ಒಬ್ಬರೇ ಗುತ್ತಿಗೆದಾರರು ಹಾಕಿದ್ದರು. ಅದರ ಮೊತ್ತವೇ ತಲಾ ರೂ 30ರಿಂದ 35 ಲಕ್ಷ ಆಗಿದೆ. ಚಂಡರಕಿಯಲ್ಲಿ ಸುಮಾರು 30 ಸಾವಿರ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದುದರಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಜಿಲ್ಲಾಡಳಿತ 75 ಸಾವಿರ ನೀರಿನ ಪ್ಯಾಕೆಟ್‌ಗಳನ್ನು ತರಿಸಿತ್ತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸದಾಗಿ ಸುಣ್ಣ ಬಣ್ಣ ಬಳಿಯಲಾಗಿತ್ತು. 30ರಿಂದ 35 ಲಕ್ಷ ಆಗಿದೆ. ಚಂಡರಕಿಯಲ್ಲಿ ಸುಮಾರು 30 ಸಾವಿರ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದುದರಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಜಿಲ್ಲಾಡಳಿತ 75 ಸಾವಿರ ನೀರಿನ ಪ್ಯಾಕೆಟ್‌ಗಳನ್ನು ತರಿಸಿತ್ತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸದಾಗಿ ಸುಣ್ಣ ಬಣ್ಣ ಬಳಿಯಲಾಗಿತ್ತು.

10 ಸಾವಿರ ಜನರು ಕುಳಿತುಕೊಳ್ಳಲು ಹೇರೂರ (ಬಿ) ಗ್ರಾಮದ ಹೊರವಲಯದಲ್ಲಿರುವ ಹುಲಿಕಂಠೇಶ್ವರ ದೇವಸ್ಥಾನದ ಬಳಿ ಸುಸಜ್ಜಿತ ಶಾಮಿಯಾನ ಅಳವಡಿಸಲಾಗಿತ್ತು. ಅದರ ಪಕ್ಕದಲ್ಲೇ ಸರ್ಕಾರದ ವಿವಿಧ ಇಲಾಖೆಗಳ ಮಳಿಗೆಗಳು, ಟೋಕನ್‌ ನೀಡಲು ಕೌಂಟರ್‌ಗಳನ್ನು ತೆರೆಯಲಾಗಿತ್ತು. ಅದಕ್ಕೂ ಪ್ರತ್ಯೇಕ ಶಾಮಿಯಾನ ಹಾಕಲಾಗಿತ್ತು. ಅದಕ್ಕೂ ಮುನ್ನ ನಾಲ್ಕು ದಿನಗಳಿಂದ ಹೊಲವನ್ನು ಸಮತಟ್ಟು ಮಾಡಲಾಗಿತ್ತು. ಅದಕ್ಕಾಗಿ ಜೆಸಿಬಿ, ಟ್ರ್ಯಾಕ್ಟರ್‌, ಟಿಪ್ಪರ್‌ಗಳನ್ನು ಬಳಸಲಾಗಿತ್ತು. ದೇವಸ್ಥಾನದ ಮುಂಭಾಗದಲ್ಲಿ ಎರಡು ಕಡೆ ಊಟ ವಿತರಣೆಗೆ ಕೌಂಟರ್‌, ಶಾಮಿಯಾನ ಹಾಕಲಾಗಿತ್ತು. ಒಟ್ಟಾರೆ ಇದಕ್ಕೆ 32 ಲಕ್ಷ ವೆಚ್ಚವಾಗಲಿದೆ.

Also read: ಸೌತ್ ಇಂಡಿಯನ್ ಬ್ಯಾಂಕ್ ನಲ್ಲಿ 385 ಪ್ರೊಬೆಷನರಿ ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಅಷ್ಟೇ ಅಲ್ಲದೆ, ಮುಖ್ಯಮಂತ್ರಿ ವಾಸ್ತವ್ಯ ಹೂಡುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಾಲ್ಕು ಹೊಸದಾಗಿ ಶೌಚಾಲಯಗಳನ್ನು 3.5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಶಾಲೆಯ ಬಳಿ ಶಾಮಿಯಾನ ಹಾಕಿಸಲಾಗಿತ್ತು. ಇದೆಲ್ಲ ಸೇರಿ 50 ಲಕ್ಷ ಮೀರಲಿದೆ ಎಂದು ಜಿಲ್ಲಾಡಳಿತ ಅಂದಾಜು ಮಾಡಿದೆ. ಈ ಸಂಬಂಧ ಹಲವು ಚರ್ಚೆಗಳು ನಡೆಯುತ್ತಿದ್ದು, ಇಷ್ಟೊಂದು ಆಡಂಬರದ ಗ್ರಾಮ ವಾಸ್ತವ್ಯ ಬೇಕಾಗಿತ್ತಾ ಎನ್ನುವ ಪ್ರಶ್ನೆಗಳು ಹುಟ್ಟುತ್ತಿವೆ.