ಬೆಂಗಳೂರು: ಹೆಮ್ಮಾರಿ ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಆಗಿದ್ದ ಪದವಿ ಹಂತದ ಕಾಲೇಜುಗಳು ನಾಳೆಯಿಂದ ರೀ ಓಪನ್ ಆಗಲಿವೆ.
ಡಿಗ್ರಿ ಕೋರ್ಸುಗಳಾದ ಬಿಎ, ಬಿಕಾಂ, ಬಿಎಸ್ಸಿ, ಸ್ನಾತಕೋತ್ತರ ಪದವಿ ತರಗತಿಗಳು, ಡಿಪ್ಲೋಮಾ ಹಾಗೂ ಎಂಜಿನಿಯರಿಂಗ್ ಕೋರ್ಸ್ಗಳ ತರಗತಿಗಳು ನಾಳೆಯಿಂದ ಆರಂಭವಾಗಲಿವೆ.
ತರಗತಿಗಳನ್ನು ರೀ ಓಪನ್ ಮಾಡಲು ರಾಜ್ಯದ ಎಲ್ಲಾ ಕಾಲೇಜುಗಳಲ್ಲೂ ಕಳೆದ ಒಂದು ವಾರದಿಂದ ಸಿದ್ಧತೆ ನಡೆದಿದೆ. ಕಾಲೇಜಿನ ಕೊಠಡಿಗಳನ್ನು ಶುಚಿತ್ವಗೊಳಿಸಿ, ಸ್ಯಾನಿಟೈಸ್ ಮಾಡಿ ತಯಾರು ಮಾಡಲಾಗಿದೆ.
ಕಾಲೇಜುಗಳನ್ನು ಆರಂಭಿಸಲು ಉನ್ನತ ಶಿಕ್ಷಣ ಇಲಾಖೆ ಸಿದ್ದತೆ ಮಾಡಿಕೊಂಡಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ಆಯಾ ಕಾಲೇಜುಗಳಿಗೆ ರವಾನಿಸಿದೆ.
ಕಾಲೇಜು ಆರಂಭಿಸಲು ಠಫ್ ರೂಲ್ಸ್:
- 8 ತಿಂಗಳ ಬಳಿಕ ಡಿಗ್ರಿ ಹಾಗೂ ಸ್ನಾತಕೋತ್ತರ, ಇಂಜಿನಿಯರಿಂಗ್ ಕಾಲೇಜುಗಳು ಆರಂಭವಾಗುತ್ತಿದ್ದರೂ, ವಿದ್ಯಾರ್ಥಿಗಳು ಕಡ್ಡಾಯವಾಗಿ ಬರುವಂತೆ ಒತ್ತಡ ಹೇರುವಂತಿಲ್ಲ. ಹಾಜರಾತಿ ಕಡ್ಡಾಯ ಮಾಡುವಂತಿಲ್ಲ.
- ಪೋಷಕರ ಅನುಮತಿ ಪತ್ರವನ್ನು ವಿದ್ಯಾರ್ಥಿಗಳು ತರವುದು ಕಡ್ಡಾಯ.
- ಕಾಲೇಜಿಗೆ ಬರುವ 3 ದಿನ ಮೊದಲು ಕೊರೊನಾ ಟೆಸ್ಟ್ ಮಾಡಿಕೊಂಡು ರಿಪೋರ್ಟ್ ತರುವುದು ಕಡ್ಡಾಯ.
- ಕಾಲೇಜುಗಳ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕು.
- ಕೊರೊನಾ ಟೆಸ್ಟ್ ರಿಪೋರ್ಟ್ ಕಾಲೇಜಿನಲ್ಲಿ ತೋರಿಸುವುದು ಕಡ್ಡಾಯ.
- ಆಯಾ ಕಾಲೇಜುಗಳ ಕ್ಯಾಂಪಸ್ಗೆ ವಿದ್ಯಾರ್ಥಿಗಳು ಬರುತ್ತಿದ್ದಂತೆ ಥರ್ಮಲ್ ಚೆಕ್ ಮಾಡಿ, ಮಸ್ಕ್ ಕಡ್ಡಾಯವಾಗಿ ಧರಿಸುವಂತೆ ನೋಡಿಕೊಳ್ಳುವುದು ಕಾಲೇಜುಗಳ ಜವಾಬ್ದಾರಿ.
- ಸದ್ಯಕ್ಕೆ ಕ್ಯಾಂಟೀನ್, ಗ್ರಂಥಾಲಯಗಳನ್ನು ತೆರೆಯುವಂತಿಲ್ಲ.
- ಪ್ರತಿದಿನ ಕೊಠಡಿ, ಕ್ಯಾಂಪಸ್ ಸ್ಯಾನಿಟೈಸ್ ಆಗಬೇಕು.
- ಆಫ್ಲೈನ್ ತರಗತಿಗೆ ಬರಲು ಆಗದ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕವೂ ತರಗತಿ ಆರಂಭಿಸಬಹುದು.
- ಒಂದು ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರೆ ಪಾಳಿ ಮಾದರಿಯಲ್ಲಿ ತರಗತಿಗಳನ್ನು ನಡೆಸಬೇಕು.
- ವಿದ್ಯಾರ್ಥಿಗಳು ಮನೆಯಿಂದಲೇ ಊಟ-ತಿಂಡಿ, ನೀರಿನ ಬಾಟಲ್ ತರಬೇಕು. ಜತೆಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು.
- ಹಾಸ್ಟೆಲ್ಗಲ್ಲಿ ಉಳಿದುಕೊಳ್ಳುವ ವಿದ್ಯಾರ್ಥಿಗಳಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
- ಕಾಲೇಜುಗಲ್ಲಿ ಕೋವಿಡ್ ಕಾರ್ಯಪಡೆ ರಚಿಸಬೇಕು. ಯಾವ ವಿದ್ಯಾರ್ಥಿಗಳಿಗೆ ಕೊರೊನಾ ಲಕ್ಷಣಗಳು ಇದ್ದರೆ ಕಾರ್ಯಪಡೆ ಗಮನಕ್ಕೆ ತರಬೇಕು.
- ಎನ್ಸಿಸಿ, ಎಸ್ಎಸ್ಎಸ್ ಚಟುವಟಿಕೆ ನಡೆಸಲು ಅವಕಾಶ ಇಲ್ಲ.
- ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ತಮ್ಮ ಮೊಬೈಲ್ಗಳಲ್ಲಿ ಆರೋಗ್ಯ ಸೇತು ಆಪ್ ಕಡ್ಡಾಯವಾಗಿ ಡೌನ್ಲೋಡ್ ಮಾಡಿಕೊಂಡಿರಬೇಕು.
- ಕಾಲೇಜುಗಳಿಗೆ ಹೊರಗಡೆಯಿಂದ ಬರುವ ಪೋಷಕರು, ಸಂದರ್ಶಕರ ಪ್ರವೇಶ ಅವಕಾಶ ನೀಡುವಂತಿಲ್ಲ.