ಠಾಣೆಯಲ್ಲಿ ತುಕ್ಕು ಹಿಡಿದ ವಾಹನಗಳಲ್ಲೇ ತರಕಾರಿ ಸೊಪ್ಪು ಬೆಳೆಯುತ್ತಿರುವ ಪೊಲೀಸರು

0
284

ಸಾವಯವ ಪದ್ಧತಿಯಲ್ಲಿ ಬೆಳೆದ ಸೊಪ್ಪು-ತರಕಾರಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಈ ಮಾತನ್ನು ಹೇಳುವುದು ಸುಲಭ. ಆದರೆ, ಸಾವಯವ ಕೃಷಿ ಅಳವಡಿಸಿಕೊಳ್ಳುವುದು ಸುಲಭದ ಮಾತಲ್ಲ. ಇದಕ್ಕೆ ಅಗತ್ಯ ಸೌಲಭ್ಯಗಳು, ಇಚ್ಛಾಶಕ್ತಿ, ಗುರಿ ಇರಬೇಕು. ಎಲ್ಲಕ್ಕಿಂತ ಮಿಗಿಲಾಗಿ ಮನಸ್ಸು ಇರಬೇಕಷ್ಟೆ. ಪೊಲೀಸ್ ಠಾಣೆಯಲ್ಲಿ ಹರಾಜಾಗದ, ದಾಖಲೆ ಇಲ್ಲದ ಒಂದಷ್ಟು ವಾಹನಗಳು ಹಾಗೇ ತುಕ್ಕು ಹಿಡಿಯುತ್ತವೆ. ಅಂತ ವಾಹನಗಳಿಗೆ ಮರು ಜೀವ ಒದಗಿಸಿದ್ದಾರೆ.

@thenewsminute.com

ತ್ರಿಶೂರ್ ಜಿಲ್ಲೆಯ ಚೆರುತುರುತಿ ಪೊಲೀಸ್ ಠಾಣೆಯಲ್ಲಿ ತುಕ್ಕು ಹಿಡಿದ ವಾಹನಗಳಲ್ಲೇ ಸಾವಯವ ಕೃಷಿ ಬೆಳೆದಿದ್ದಾರೆ. ಸಿಂಪ್ಸನ್, ಸುಧಾಕರನ್, ಬೇಬಿ, ರಂಜಿತ್, ರಘು ಮತ್ತು ಅನಿಲ್, ಸಿವಿಲ್ ಪೊಲೀಸ್ ಅಧಿಕಾರಿ ರಂಗರಾಜ್ ಸದ್ಯ ಕೃಷಿಯನ್ನು ನೋಡಿಕೊಳ್ಳುತ್ತಿದ್ದಾರೆ.

2019ರ ವರದಿಯ ಪ್ರಕಾರ ಸುಮಾರು 40 ಸಾವಿರಕ್ಕೂ ಹೆಚ್ಚು ವಾಹನಗಳು ತುಕ್ಕುಹಿಡಿಯುತ್ತಿವೆ. ಪೊಲೀಸರು ಜಪ್ತಿ ಮಾಡಿದ ವಾಹನಗಳನ್ನು ಇಷ್ಟು ವರ್ಷದೊಳಗೆ ಮಾಲೀಕರು ದಾಖಲೆಗಳನ್ನು ಒದಗಿಸಿ ತೆಗೆದುಕೊಂಡು ಹೋಗಬೇಕಾಗುತ್ತದೆ. ಆ ಸಮಯದಲ್ಲಿ ಯಾರು ತೆಗೆದುಕೊಂಡು ಹೋಗಿಲ್ಲವೆಂದರೆ ಅವುಗಳನ್ನು ಹರಾಜಿಗೆ ಇಡಲಾಗುತ್ತದೆ. ಹೀಗೆ ಹರಾಜಾಗದೆ ಉಳಿದ ಗಾಡಿಗಳನ್ನ ಇಲ್ಲಿನ ಪೊಲೀಸ್ ಠಾಣೆ ಸದ್ಭಳಕೆ ಮಾಡಿಕೊಂಡಿದೆ.

@thenewsminute.com

ಈ ಬಗ್ಗೆ ಪೊಲೀಸ್ ಅಧಿಕಾರಿ ಸಿಂಪ್ಸನ್, ಮರಳು ಮತ್ತು ಮಣ್ಣಿನ ಕಳ್ಳಸಾಗಣೆ ಸಮಯದಲ್ಲಿ ಕೆಲವು ಮಿನಿ ಲಾರಿಗಳನ್ನು ಹಿಡಿದಿದ್ದೇವು. ನಂತರ ಮೂರು ತಿಂಗಳ ಹಿಂದೆ ಅವುಗಳಲ್ಲಿ ತರಕಾರಿಗಳನ್ನು ಬೆಳೆಯಲು ನಿರ್ಧರಿಸಿ, ಅದರಲ್ಲಿ ಸಾವಯವ ಕೃಷಿ ಮಾಡಿದ್ದೇವೆ. ಮೊದಲ ಫಸಲು ಕೂಡ ತೆಗೆದಿದ್ದೇವೆ. ಬೆಳೆದ ತರಕಾರಿಗಳನ್ನು ನಮ್ಮ ಪೊಲೀಸ್ ಕ್ಯಾಂಟೀನ್ಗೆ ನೀಡಲಾಗಿದೆ ಎಂದಿದ್ದಾರೆ.

ಈ ಕೃಷಿಯನ್ನು ಉಳಿದ ಎಲ್ಲಾ ವಾಹನಗಳಲ್ಲೂ ಬೆಳೆಯಲು ನಿರ್ಧರಿಸಲಾಗಿದೆ. ಈಗಾಗಲೇ ಮೊದಲ ಬೆಳೆಯಲ್ಲಿ ಬೆಂಡೆಕಾಯಿ, ಬೀನ್ಸ್ ಮತ್ತು ಪಾಲಕ್ ಸೊಪ್ಪನ್ನು ಬೆಳೆಯಲಾಗಿದೆ.

@thenewsminute.com

ಒಟ್ಟಾರೆ ಪೊಲೀಸ್ ಠಾಣೆಯಲ್ಲಿ ತುಕ್ಕು ಹಿಡಿದ ವಾಹನಗಳನ್ನ ಹೇಗೆಲ್ಲಾ ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅಲ್ಲದೆ, ಈ ದೇಶದ ಬೆನ್ನೆಲುಬು ರೈತಾಪಿ ವರ್ಗದ ದುಡಿಮೆಯನ್ನೇ ಮರೆತಿರುವ ಸಂದರ್ಭದಲ್ಲಿ ರೈತಾಪಿ ವರ್ಗ ಹಾಗೂ ಸೊಪ್ಪು-ತರಕಾರಿಯ ಪ್ರಯೋಜನ ಅದರಲ್ಲೂ ಸಾವಯವ ಕೃಷಿ ಪದ್ಧತಿಯಿಂದ ಆಗುವ ಪರಿಣಾಮಕಾರಿ ಪ್ರಯೋಜನ ತಿಳಿಸುತ್ತಿರುವುದು ಸಂತಸದ ವಿಚಾರವಾಗಿದೆ.

ಸಾವಯವ ಕೃಷಿ ಮೂಲಕ ಬಗೆಬಗೆಯ ತರಕಾರಿ ಹಾಗೂ ವಿವಿಧ ಸೊಪ್ಪುಗಳನ್ನು ಬೆಳೆದು ಸವಿಯಲು ಸವಿಯುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಪಟ್ಟಣದ ಜನರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

@thenewsminute.com