ಸಕ್ಕರೆಯಿಂದ ದೇಹಕ್ಕೆ ಏನೆಲ್ಲ ಹಾನಿಯಾಗುತ್ತಿದೆ ಅಂತ ನೀವೇನಾದ್ರು ತಿಳಿದುಕೊಂಡರೆ, ಸಕ್ಕರೆಯನ್ನು ಬಿಡುವ ಪ್ರಯತ್ನನಾದ್ರು ಮಾಡ್ತೀರಾ.

1
1929

ಆಹಾರ ಮತ್ತು ಪಾನೀಯ ಉದ್ಯಮ ಸಕ್ಕರೆ ಸೇವಿಸುವುದರಿಂದಾಗುವ ಕೆಟ್ಟ ಪರಿಣಾಮಗಳ ಬಗ್ಗೆ 60 ವರ್ಷಗಳಿಗೂ ಹೆಚ್ಚು ಕಾಲದಿಂದ ಜನರಿಂದ ಮರೆಮಾಚಿರುವ ಸತ್ಯಗಳನ್ನು PLOS ಜೀವಶಾಸ್ತ್ರ ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟಿಸಿದೆ.

ಈ ಆತಂಕಕಾರಿ ಮಾಹಿತಿಯನ್ನು “ಅಂತಾರಾಷ್ಟ್ರೀಯ ಸಕ್ಕರೆ ಸಂಶೋಧನೆ ಫೌಂಡೇಶನ್” (ISRF) ತುಂಬ ವರ್ಷಗಳ ಹಿಂದೆಯೇ ಕಲೆಹಾಕಿತ್ತು, ಆದರೆ ಅಮೆರಿಕಾದ ವ್ಯಾಪಾರ ಸಂಘ ಇದು ಹೊರಗೆ ಬೀಳದ ಹಾಗೆ, ಜನರಿಗೆ ಈ ಮಾಹಿತಿ ತಲುಪದ ಹಾಗೆ ಗೌಪ್ಯತೆ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 2016 ರಲ್ಲಿ ಕ್ಯಾನ್ಸರ್ ಕುರಿತು ನಡಿಸಿದ ಒಂದು ಅಧ್ಯಯನದಲ್ಲಿ ಆಹಾರದ ಸಕ್ಕರೆ ಪ್ರಮಾಣದಿಂದಾಗುವ ಅಡ್ಡ ಪರಿಣಾಮಗಳು ಹಾಗು ಅದು ಹೇಗೆ ಟ್ಯೂಮರ್ ಬೆಳೆಯಲು ಮತ್ತು ಹರಡಲು ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ವಿವರಿಸಿತ್ತು. ಆದರೆ ಇದನ್ನು ಶುಗರ್ ಅಸೋಸಿಯೇಷನ್ ತಳ್ಳಿಹಾಕಿತ್ತು.

ಅಧ್ಯಯನ ನಡೆಸಿದ ಪ್ರಾಣಿಗಳಲ್ಲಿ ಸಕ್ಕರೆ ಸೇವಿಸದ ಪ್ರಾಣಿಗಳು ಸ್ವಸ್ಥವಾಗಿರುವುದು ಕಂಡು ಬಂದಿತು ಹಾಗು ಸಕ್ಕರೆ ಮಿಶ್ರಿತ ಆಹಾರ ಸೇವಿಸಿದ ಪ್ರಾಣಿಗಳಲ್ಲಿ ಅಧಿಕ ಕೊಲೆಸ್ಟರಾಲ್ ಮತ್ತು ಕೊಬ್ಬಿನಾಮ್ಲಗಳು ಇರುವುದು ಕಂಡುಬಂದಿತು. ಪಿಷ್ಟಗಿಂತ ಸಕ್ಕರೆ(ಸುಕ್ರೋಸ್) ಇರುವ ಆಹಾರ ತುಂಬ ಅಪಾಯ ಇದರಿಂದ ಯುರಿನರಿ ಬೀಟಾ -ಗ್ಲುಕುರೋನೀಸ್ ಎಂಬ ಸೂಕ್ಷ್ಮ ಜೀವಿ ಬೆಳೆದು ಬ್ಲಡ್ಡೇರ್ ಕ್ಯಾನ್ಸರ್ ಆಗುವ ಸಾಧ್ಯತೆಯಿರುತ್ತದೆ ಎಂದು ತಿಳಿದುಬಂದಿತ್ತು.

ತಮ್ಮ ಕಂಪನಿಯ ಆಹಾರ ಪದಾರ್ಥಗಳು ಹೆಚ್ಚಾಗಿ ಮಾರಾಟ ಮಾಡುವ ಸಲುವಾಗಿ ದೊಡ್ಡ ಕಂಪನಿಗಳಾದ ನೆಸ್ಲೆ, ಕೋಕಾ-ಕೋಲಾ ಮತ್ತು ಇತರೆ ಕ್ಯಾಂಡಿ ತಯಾರಕರು ತಮ್ಮದೇ ಆದ ವರದಿ ಪ್ರಕಟಿಸಿ, ಅದರಲ್ಲಿ ತಮ್ಮ ಉತ್ಪನ್ನಗಳಿಂದ ಆರೋಗ್ಯಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಜನರ ಮನವೊಲಿಸುತ್ತಿವೆ.

ಒಟ್ಟಿನಲ್ಲಿ ಸಕ್ಕರೆಯಿಂದ ಕೂಡಿದ ಆಹಾರ ಸೇವೆನಿಂದ ಇಂದಲ್ಲ-ನಾಳೆ ಅಪಾಯ ತಪಿದಲ್ಲ…!