ಮತ್ತೊಂದು ವಿವಾದದಲ್ಲಿ ಆಮೀರ್ ಖಾನ್..!

0
194

ಬಾಲಿವುಡ್ ನಟ ಆಮೀರ್ ಖಾನ್ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಮಕ್ಕಳು ಇಸ್ಲಾಂ ಧರ್ಮ ಪಾಲಿಸುತ್ತಾರೆ ಎಂದು ಆಮೀರ್ ಖಾನ್ ಸಂದರ್ಶನದಲ್ಲಿ ಹೇಳಿದ್ದರು. ಈ ಹೇಳಿಕೆ ಈಗ ವೈರಲ್ ಆಗಿದೆ.

ನಟಿ ಕಂಗನಾ ರಣಾವತ್, ಈ ಸಂದರ್ಶನದ ಲಿಂಕನ್ನು ಶೇರ್ ಮಾಡಿದ್ದು, ಆಮೀರ್ ಖಾನ್ ಜಾತ್ಯಾತೀತತೆ ಪ್ರಶ್ನೆ ಮಾಡಿದ್ದಾರೆ. ಹಿಂದು +ಮುಸ್ಲಿಂ = ಮುಸ್ಲಿಂ ಇದು ಮೂಲಭೂತವಾದ. ಅಂತರ್ಧರ್ಮೀಯ ಮದುವೆ ಎಂದರೆ ಬರೀ ಜೀನ್ಸ್ ಮತ್ತು ಸಂಸ್ಕೃತಿಯ ವಿಲೀನ ಅಲ್ಲ. ಧರ್ಮದ ವಿಲೀನ ಕೂಡ ಹೌದು. ಮಕ್ಕಳಿಗೆ ಅಲ್ಲಾನನ್ನು ಆರಾಧಿಸುವುದು ಕಲಿಸಿ. ಅದರ ಜೊತೆ ಶ್ರೀಕೃಷ್ಣ ಮೇಲೆ ಭಕ್ತಿಯನ್ನೂ ಮೂಡಿಸಿ. ಅದು ತಾನೇ ಜಾತ್ಯಾತೀತತೆ ಎಂದರೆ? ಎಂದು ಆಮೀರ್ ಖಾನ್ಗೆ, ಕಂಗನಾ ರಣಾವತ್ ಟ್ವಿಟರ್ ಖಾತೆಯಲ್ಲಿ ಪ್ರಶ್ನಿಸಲಾಗಿದೆ.

ಇನ್ನು ನಟ ಆಮೀರ್ ಖಾನ್ ಅವರು 2012ರಲ್ಲಿ ನೀಡಿದ ಸಂದರ್ಶನದಲ್ಲಿ ಅಲ್ಲಾರನ್ನು ಮಾತ್ರ ಪೂಜಿಸುತ್ತಾರೆ, ಅವರು ಅಲ್ಲಾನಲ್ಲಿಯೇ ನಂಬಿಕೆ ಇಟ್ಟುಕೊಂಡಿದ್ದಾರೆ. ವಿಶ್ವದ ಏಕಮಾತ್ರ ಸುಪ್ರೀಂ ಪವರ್ ಅಲ್ಲಾನಲ್ಲಿಯೇ ಇದೆ. ಆಮೀರ್ ಅವರ ಎರಡು ಪತ್ನಿಯರು ಹಿಂದೂಗಳು. ನಾನು ಮತ್ತು ನನ್ನ ಪತ್ನಿ ಪರಸ್ಪರ ಇದೇ ಧರ್ಮ ಪಾಲಿಸಬೇಕು ಎಂದು ಯಾವತ್ತೂ ಹೇಳಿಕೊಂಡಿಲ್ಲ. ಆದರೆ ನನ್ನ ಮಕ್ಕಳು ಯಾವಾಗಲೂ ಇಸ್ಲಾಂ ಧರ್ಮ ಪಾಲಿಸಬೇಕು ಎಂದು ಹೇಳಿದ್ದಾರೆ. ಆಮೀರ್ ಖಾನ್ ಹೇಳಿಕೆ ಈಗ ವಿವಾದ ಸೃಷ್ಟಿಸಿದ್ದು, ಈ ಹಿಂದೆಯೂ ತಮ್ಮ ಪತ್ನಿಯ ಸೆಕ್ಯೂರಿಟಿ ಕುರಿತು ಮಾತನಾಡಿ ವಿವಾದ ಎಬ್ಬಿಸಿದ್ದರು. ದೇಶದಲ್ಲಿ ಅಭದ್ರತೆಯ ಅಲರಾಂ ಬಡಿಯುತ್ತಿರುತ್ತದೆ. ನಾವು ದೇಶ ಬಿಟ್ಟು ಹೋಗೋಣವೇ? ಎಂದು ನನ್ನ ಹೆಂಡತಿ ಕೇಳುತ್ತಿದ್ದಾಳೆ ಎಂದು ಹೇಳಿದ್ದು, ಈ ಹೇಳಿಕೆ ವಿವಾದಕ್ಕೀಡಾಗಿತ್ತು.

ಇದೆಲ್ಲದರ ನಡುವೆ, ಇದೀಗ ಆಮೀರ್ ಖಾನ್ ಅವರು, ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಭಾರತದ ವಿರುದ್ಧ ಹೇಳಿಕೆ ನೀಡಿದ್ದ ಟರ್ಕಿಯ ಅಧ್ಯಕ್ಷ ರೆಸಿಪ್ ತಯ್ಯಿಪ್ ಎರ್ಡೋಗನ್ ಅವರ ಪತ್ನಿಯೊಂದಿಗೆ ಅಮೀರ್ ಖಾನ್ ಮಾತನಾಡುತ್ತಿರುವ ಫೋಟೊ ವೈರಲ್ ಆಗಿದ್ದು, ಅಮೀರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಟರ್ಕಿಯ ಪ್ರಥಮ ಮಹಿಳೆ ಎಮೈನ್ ಎರ್ಡೋಗನ್ ಅವರನ್ನು ಅಮೀರ್ ಖಾನ್ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದರ ಫೋಟೊವನ್ನು ಎಮಿನೆ ಅವರು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದರು. ಅಮೀರ್ ಖಾನ್ ‘ಲಾಲ್ ಸಿಂಗ್ ಛಡ್ಡಾ’ ಚಿತ್ರದ ಚಿತ್ರೀಕರಣಕ್ಕಾಗಿ ಟರ್ಕಿಗೆ ತೆರಳಿದ್ದಾರೆ. ಅಲ್ಲಿ ಅವರು ಎಮೈನ್ ಅವರನ್ನು ಭೇಟಿಯಾಗಿದ್ದರು. ಪಾಕ್ ಬೆಂಬಲಕ್ಕೆ ನಿಂತು ಭಾರತದ ಕೆಂಗಣ್ಣಿಗೆ ಗುರಿಯಾದ ಟರ್ಕಿ, ಮಲೇಶಿಯಾ ಅಮೀರ್ ಖಾನ್ ಅವರನ್ನು ವಿಶ್ವ ಪ್ರಸಿದ್ಧ ಭಾರತೀಯ ನಟ ಎಂದು ಕರೆದಿರುವ ಎಮೈನ್, ಅವರ ಸಿನಿಮಾಗಳನ್ನು ನೋಡಲು ತಾವು ಕಾತರದಿಂದ ಕಾದಿರುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಅಮೀರ್ ಖಾನ್, ಪತ್ನಿ ಕಿರಣ್ಗೆ ಭಾರತ ಸುರಕ್ಷಿತವಲ್ಲ ಎಂಬ ಭಾವನೆ ಉಂಟಾಗಿದೆ ಎಂದಿದ್ದು ತೀವ್ರ ವಿವಾದ ಸೃಷ್ಟಿಸಿತ್ತು.