ಕೊರೋನಾವೈರಸ್ ಚಿಕಿತ್ಸೆಗಾಗಿ ಇನ್ಫೋಸಿಸ್ ನಿಂದ ಆಸ್ಪತ್ರೆ ಸಜ್ಜುಗೊಳಿಸುವುದಾಗಿ ಹೇಳಿದ ಸುಧಾಮೂರ್ತಿ; ಮಾತೃ ಕಾಳಜಿಗೆ ಈ ಮಹಾತಾಯಿ ಎಂದ ಸಚಿವರು.!

0
374

ಸಮಾಜದ ಬಗ್ಗೆ ಅಪಾಯ ಕಾಳಜಿ ಹೊಂದಿರುವ ಸರಳ ಜೀವಿ ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಅವರು ಕೊರೊನಾ ಚಿಕಿತ್ಸೆಗೆ ಸಹಾಯ ಮಾಡಲು ತಮ್ಮ ಸಲಹೆಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಕರೋನಾವೈರಸ್ ವ್ಯಾಪಕವಾಗಿ ಹರಡದಂತೆ ಕರ್ನಾಟಕದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದ್ದಾರೆ. ಅದರಂತೆ ಕರ್ನಾಟಕದಲ್ಲಿ ಒಂದು ಆಸ್ಪತ್ರೆಯನ್ನು ತಮಗೆ ವಹಿಸಿದರೆ, ಅದನ್ನು ಕೊರೋನಾ ವೈರಸ್ ಚಿಕಿತ್ಸೆಗಾಗಿ ತಮ್ಮ ಫೌಂಡೇಶನ್ ನಿಂದ ಸಂಸ್ಥೆಯ ವೆಚ್ಚದಲ್ಲಿ ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಳಿಸುವುದಾಗಿ, ಹೇಳಿದಕ್ಕೆ ಸಚಿವರೇ ಅಭಿನಂದನೆ ಸಲ್ಲಿಸಿದ್ದಾರೆ.

source: worldtvnews.co.in

ಹೌದು ಪ್ರವಾಹದ ವೇಳೆ 10 ಕೋಟಿ ರೂ. ಧನ ಸಹಾಯ ಮಾಡಿದ ಸುಧಾಮೂರ್ತಿ ಅವರು ಬಡವರಿಗೆ, ಸಹಾಯ ಮಾಡುತ್ತಾನೆ ಇದ್ದಾರೆ, ಸಾವಿರಾರು ಕೋಟಿಯ ಒಡತಿಯಾದರು ಕೂಡ ಇವರ ಸರಳತೆಗೆ ಮನ ಸೋತಿದ್ದಾರೆ. ಹೀಗೆ ರಾಜ್ಯಕ್ಕೆ ಯಾವುದೇ ಸಂಕಷ್ಟ ಒದಗಿ ಬಂದರು ಕೂಡ ಇವರು ಮುಂದೆ ಬಂದು ಸಾಕಷ್ಟು ಹಣ ನೀಡುತ್ತಿದ್ದಾರೆ. ಅದರಂತೆ ಸಧ್ಯ ರಾಜ್ಯಕ್ಕೆ ಅಟ್ಟಿಕೊಂಡ ‘ಕೋವಿಡ್ 19’ ಎನ್ನುವ ವೈರಸ್ ಗೆ ಚಿಕಿತ್ಸೆ ನೀಡಲು ಮುಂದೆ ಬಂದು ಸಚಿವ ಎಸ್‌. ಸುರೇಶ್‌ ಕುಮಾರ್ ಅವರಿಗೆ ಇನ್ಫೋಸಿಸ್ ಫೌಂಡೇಶನ್ ನಿಂದ ಕರೆ ಮಾಡಿದ ಸುಧಾಮೂರ್ತಿಯವರು, ದೇಶ-ವಿದೇಶಗಳಲ್ಲಿ ಆತಂಕ ತಂದಿರುವ ಕರೋನಾವೈರಸ್ ವ್ಯಾಪಕವಾಗಿ ಹರಡದಂತೆ ಕರ್ನಾಟಕದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದ್ದಾರೆ.

ಈ ಕುರಿತು ಸುಧಾಮೂರ್ತಿ ಹೃದಯವಂತಿಕೆ ನನ್ನ ಹೃದಯ ತುಂಬಿತು ಎಂದು ಬರೆದುಕೊಂಡಿದ್ದು, ಬೆಳಗ್ಗೆ ನನಗೆ ಇನ್ಫೋಸಿಸ್ ಫೌಂಡೇಶನ್ ಕಛೇರಿಯಿಂದ ಕರೆ ಬಂದಿತ್ತು. ಈ ಕುರಿತಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್ ಅವರಿಗೆ ಇನ್ಫೋಸಿಸ್ ಫೌಂಡೇಶನ್ ನಿಂದ ಕರೆ ಮಾಡಿದ ಸುಧಾಮೂರ್ತಿಯವರು, ದೇಶ-ವಿದೇಶಗಳಲ್ಲಿ ಆತಂಕ ತಂದಿರುವ ಕರೋನಾವೈರಸ್ ವ್ಯಾಪಕವಾಗಿ ಹರಡದಂತೆ ಕರ್ನಾಟಕದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದ್ದಾರೆ. ಕರ್ನಾಟಕದಲ್ಲಿ ಒಂದು ಆಸ್ಪತ್ರೆಯನ್ನು ತಮಗೆ ವಹಿಸಿದರೆ, ಅದನ್ನು ಕೊರೋನಾವೈರಸ್ ಚಿಕಿತ್ಸೆಗಾಗಿ ಇನ್ಫೋಸಿಸ್ ಫೌಂಡೇಶನ್ ನಿಂದ ಸಂಸ್ಥೆಯ ವೆಚ್ಚದಲ್ಲಿ ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಳಿಸುವುದಾಗಿ, ಅಗತ್ಯ ಉಪಕರಣಗಳನ್ನು ಒದಗಿಸುವುದಾಗಿ ಹೇಳಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿ ಮಕ್ಕಳ ಹಿತವನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳಿಗೆ ರಜೆ ಘೋಷಿಸಿರುವ ಕ್ರಮ ವಿವರಿಸಿದೆ. ಇಷ್ಟು ಬೇಗ ಕ್ರಮ ತೆಗೆದುಕೊಂಡಿರುವ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಿದರು. ಈ ಹೃದಯವಂತಿಕೆ ನನ್ನ ಹೃದಯ ತುಂಬಿತು. ನಿಜವಾದ ಮಾತೃ ಕಾಳಜಿ ಈ ಮಹಾತಾಯಿಯದು” ಎಂದು ಸುರೇಶ್ ಕುಮಾರ್ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಈ ಕುರಿತಾಗಿ ಸುಧಾಮೂರ್ತಿಯವರು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಆರೋಗ್ಯ ಸಚಿವ ಶ್ರೀರಾಮುಲುರೊಂದಿಗೂ ಸಹ ಈ ಕುರಿತಾಗಿ ಚರ್ಚಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಿಗೂ ಈ ಬಗ್ಗೆ ಪತ್ರ ಬರೆದಿದ್ದು, ಸದ್ಯದಲ್ಲಿಯೇ ಈ ಕುರಿತಾಗಿ ಉನ್ನತಮಟ್ಟದ ಸಭೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌ ಸುರೇಶ್‌ ಕುಮಾರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದಿದ್ದಾರೆ.