ವಾತಾವರಣ ವೈಪರೀತ್ಯದಿಂದಾಗುವ ಸಾಮಾನ್ಯ ಶೀತ ಜ್ವರಕ್ಕೂ ಕರೋನ ಶೀತ ಜ್ವರಕ್ಕೂ ಇದೆ ಇದೊಂದೇ ದೊಡ್ಡ ವ್ಯತ್ಯಾಸ, ಅದ್ಯಾವುದು ಅಂತ ಹೇಳ್ತೀವಿ ತಪ್ಪದೇ ಓದಿ!!

0
3444

ಕೋವಿಡ್-19 ದೇಶದಿಂದ ದೇಶಕ್ಕೆ ರೂಪಾಂತರವಾಗುತ್ತಲೇ ಇದೆ. ಕೊರೊನಾವು ಪ್ರತಿ ನಿತ್ಯವೂ ತನ್ನ ಲಕ್ಷಣಗಳಲ್ಲಿ ಕೂಡ ಬದಲಾವಣೆ ತೋರಿಸುತ್ತಿದೆ. ಕೊರೊನಾದ ಸರಿಯಾದ ಲಕ್ಷಣಗಳು ಏನು ಎನ್ನುವುದು ಇದುವರೆಗೆ ಹೆಚ್ಚಿನವರಿಗೆ ತಿಳಿದಿಲ್ಲ. ಕೆಲವರು ಸಾಮಾನ್ಯ ಶೀತ, ಜ್ವರದ ವೇಳೆ ಕಾಣಿಸಿಕೊಳ್ಳುವಂತಹ ಕೆಲವೊಂದು ಲಕ್ಷಣಗಳು ಕೋವಿಡ್-19 ಸೋಂಕಿನ ಲಕ್ಷಣವೆಂದು ಭೀತಿಪಡುವರು.

ಕೋವಿಡ್-19 ಹಾಗೂ ಸಾಮಾನ್ಯ ಶೀತದ ವೇಳೆ ಕಂಡುಬರುವಂತಹ ಕೆಲವೊಂದು ಲಕ್ಷಣಗಳು ಸಮಾನವಾಗಿದ್ದರೂ ಅದರಲ್ಲಿ ಭಿನ್ನತೆಯು ಇರುವುದು. ಹೀಗಾಗಿ ನೀವು ಈ ಲೇಖನವನ್ನು ಓದಿಕೊಂಡು ಕೋವಿಡ್-19 ಹಾಗೂ ಸಾಮಾನ್ಯ ಶೀತದ ಲಕ್ಷಣಗಳಲ್ಲಿ ಯಾವೆಲ್ಲಾ ವ್ಯತ್ಯಾಸಗಳು ಇವೆ ಎಂದು ತಿಳಿಯಿರಿ.

ಕೋವಿಡ್-19 ವೇಳೆ ರುಚಿ, ವಾಸನೆ ಇಲ್ಲದಿರುವುದು ಸಾಮಾನ್ಯ ಶೀತಕ್ಕಿಂತ ಹೇಗೆ ಭಿನ್ನ?

ಸಾಮಾನ್ಯ ಶೀತ ಮತ್ತು ಜ್ವರಕ್ಕೆ ಹೋಲಿಕೆ ಮಾಡಿದರೆ ಕೋವಿಡ್-19 ಸೋಂಕು ತಗುಲಿದ ವೇಳೆ ಜನರು ಹೇಗೆ ರುಚಿ ಹಾಗೂ ವಾಸನೆ ಕಳೆದುಕೊಳ್ಳುತ್ತಾರೆ ಎಂದು ಅಧ್ಯಯನವೊಂದು ವಿವರಿಸಿದೆ. ಕೊರೋನಾ ವೈರಸ್ ನಿಂದಾಗಿ ಮೆದುಳು ಹಾಗೂ ನರ ಮಂಡಲದ ಮೇಲೆ ಕೂಡ ಪರಿಣಾಮ ಬೀಳುವುದು ಎಂದು ಈ ಅಧ್ಯಯನವು ಹೇಳಿದೆ.

ಅಧ್ಯಯನದ ವೇಳೆ ಹತ್ತು ಮಂದಿ ಕೊರೋನಾ ಸೋಂಕಿತರು, ಹತ್ತು ಮಂದಿ ಸಾಮಾನ್ಯ ಶೀತ, ಜ್ವರ ಇದ್ದವರು ಮತ್ತು ಹತ್ತು ಮಂದಿ ಯಾವುದೇ ಶೀತಜ್ವರ ಅಥವಾ ಕೊರೊನಾ ಲಕ್ಷಣಗಳು ಇಲ್ಲದವರನ್ನು ಸಮೀಕ್ಷೆ ಮಾಡಲಾಯಿತು.

ಸಾಮಾನ್ಯ ಶೀತಜ್ವರ ಮತ್ತು ಕೋವಿಡ್-19 ವೇಳೆ ಕಳೆದುಕೊಳ್ಳುವ ರುಚಿ ಹಾಗೂ ವಾಸನೆಯ ಲಕ್ಷಣಗಳು ಈ ರೀತಿಯಾಗಿ ಇವೆ. ಕೊರೊನಾ ಸೋಂಕಿತರು ವಾಸನೆ ಇಲ್ಲದೆ ಇದ್ದರೂ ಮುಕ್ತವಾಗಿ ಉಸಿರಾಡುವರು.

ಕಟ್ಟಿದ ಮೂಗು ಅಥವಾ ಮೂಗಿನಿಂದ ಕಫ ಬರುವುದು ಇರದು. ಇವರಿಗೆ ಕಹಿ ಅಥವಾ ಸಿಹಿ ರುಚಿಯ ಅನುಭವ ಸಿಗುವುದಿಲ್ಲ. ಕೋವಿಡ್-19 ಸೋಂಕಿತರಲ್ಲಿ ರುಚಿ ಹಾಗೂ ವಾಸನೆ ಕಳೆದುಕೊಳ್ಳುವುದು ತುಂಬಾ ತೀವ್ರವಾಗಿರುವುದು.

ಯಾಕೆಂದರೆ ಇವರು ನಿಜವಾಗಿಯೂ ರುಚಿಯನ್ನು ಕಳಕೊಳ್ಳುವರು ಎಂದು ಅಧ್ಯಯನವು ತಿಳಿಸಿದೆ. ಕೊರೊನಾ ವೈರಸ್ ವೇಳೆ ರುಚಿ ಹಾಗೂ ವಾಸನೆ ಕಳೆದುಕೊಳ್ಳುವುದು ನರ ವ್ಯವಸ್ಥೆ ಹಾಗೂ ಮೆದುಳಿನ ಮೇಲೆ ಬೀಳುತ್ತಿರುವ ಹೊಡೆತದಿಂದ ಆಗಿರಬಹುದು ಎಂದು ಅಧ್ಯಯನಗಳು ಹೇಳಿವೆ.\

ಜನರು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಅವರಲ್ಲಿ ಘ್ರಾಣ ಸಂಬಂಧಿ ಕಾರ್ಯಗಳು ಮರಳಿವೆ. ಈ ಅಂಶಗಳು ಕೊರೊನಾವನ್ನು ಬೇಗನೆ ಪತ್ತೆ ಮಾಡಲು ಸಾಧ್ಯವಾಗಲಿದೆ ಎಂದು ಅಧ್ಯಯನಗಳು ತಿಳಿಸಿವೆ.

ಕೊರೊನಾ ಸೋಂಕಿತರು ಮತ್ತು ಸಾಮಾನ್ಯ ಶೀತ, ಜ್ವರದ ರೋಗಿಗಳನ್ನು ಪ್ರತ್ಯೇಕಿಸಲು ರುಚಿ ಹಾಗೂ ಘ್ರಾಣ ಕಾರ್ಯವನ್ನು ಬಳಸುವುದು ತುಂಬಾ ಆಸಕ್ತಿದಾಯಕವಾಗಿರುವುದು ಎಂದು ಅಧ್ಯಯನವು ಹೇಳಿದೆ.

ಆದರೆ ಈ ಪರೀಕ್ಷೆಯಿಂದ ಗಂಟಲ ದ್ರವ ಮಾದರಿ, ರಕ್ತ ಪರೀಕ್ಷೆಯನ್ನು ಕಡೆಗಣಿಸಬಾರದು ಎಂದು ಇದೇ ವೇಳೆ ಅಧ್ಯಯನವು ತಿಳಿಸಿದೆ. ಕೆಲವೊಂದು ಸಂದರ್ಭದಲ್ಲಿ ಆರಂಭಿಕ ಪರೀಕ್ಷೆ ಹಾಗೂ ಬೇರೆ ಪರೀಕ್ಷೆಗಳು ಲಭ್ಯವಾಗದೆ ಇರುವಂತಹ ಸಂದರ್ಭದಲ್ಲಿ ಇದನ್ನು ಬಳಸಬಹುದಾಗಿದೆ.

ಪ್ರತೀ ದಿನವೂ ವಿಶ್ವದಲ್ಲಿನ ವಿಜ್ಞಾನಿಗಳು ಹಾಗೂ ವೈದ್ಯಕೀಯ ಲೋಕವು ಕೊರೊನಾ ಬಗ್ಗೆ ಸಂಶೋಧನೆ ಮಾಡುತ್ತಲೇ ಇದೆ. ಕೋವಿಡ್-19 ಮನುಷ್ಯನ ನರ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಮತ್ತು ಅದರಿಂದ ನರ ಸಂಬಂಧಿ ಸಮಸ್ಯೆಗಳು ಕಂಡುಬರಬಹುದು ಎಂದು ಅಧ್ಯಯನಗಳು ಹೇಳಿವೆ.

ಕೇಂದ್ರೀಯ ನರ ಮಂಡಲದ ಮೇಲೆ ಕೋವಿಡ್-19 ಪರಿಣಾಮ ಬೀರುವುದು ಎಂದು ಅಧ್ಯಯನ ತಂಡದಲ್ಲಿದ್ದ ಸಂಶೋಧಕ ಕಾರ್ಲ ಫಿಲಪೊಟ್ ತಿಳಿಸಿದ್ದಾರೆ.

Also read: ಕೆರೆ ನದಿಗಳಲ್ಲಿ ಆಟವಾಡಲು ಅಥವಾ ಈಜಾಡಲು ಹೋಗುವವರೇ ಹುಷಾರ್, ಈ ಯುವಕ ಮೆದುಳು ತಿನ್ನುವ ಅಮೀಬದಿಂದ ಸಾವನಪ್ಪಿದ ಕಥೆ ಕೇಳಿದರೆ ಶಾಕ್ ಆಗುತ್ತೆ!!