ಕೋರೋನ ಕೇವಲ ವಯಸ್ಸಾದವರಿಗೆ ಮತ್ತೆ ಅನ್ಯ ಖಾಯಿಲೆ ಇರುವವರಿಗೆ ಮಾರಕ; ಯುವ ಸಮುದಾಯ ದೇಶದ ಆರ್ಥಿಕತೆ ಕಾಪಾಡಬೇಕಿದೆ: ರಾಹುಲ್ ಗಾಂಧಿ!!

0
210

ದೇಶದಲ್ಲಿ ಎಂದು ಅರಿಯದ ಮತ್ತು ಎಂದು ಆಗದ ನಷ್ಟವನುಂಟು ಮಾಡಿದ ಕೊರೊನಾ ವೈರಸ್-ಗೆ ಇಡೀ ವಿಶ್ವವೇ ಬೆಚ್ಚಿದೆ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಶ್ನೆಗಳು ಕೂಡ ಜನರಲ್ಲಿ ಹುಟ್ಟಿದ್ದು ಈ ಕುರಿತು ರಾಹುಲ್ ಗಾಂಧಿ ಜನರಿಗೆ ಉತ್ತರಿಸಿದ್ದು ಕೊರೊನಾ ವೈರಸ್ ಮಾರಕವಲ್ಲ ಎಂದು ಹೇಳಿದ್ದಾರೆ. ಅದರಂತೆ 3 ಪ್ರಮುಖ ವಿಷಯಗಳಿಗೆ ಒತ್ತು ನೀಡಿದ್ದು. ಲಾಕ್‍ಡೌನ್ ವಿಸ್ತರಣೆ, ಕೈಬಿಡುವ ನಿರ್ಧಾರ ತೆಗೆದುಕೊಳ್ಳುವ ಅವಕಾಶವನ್ನು ಕೇಂದ್ರ ಸರ್ಕಾರ ವಿಕೇಂದ್ರೀಕರಿಸುವುದು ಅವಶ್ಯವಾಗಿದೆ. ಕೋವಿಡ್-19 ಬಗ್ಗೆ ಜನರಲ್ಲಿ ಇರುವ ಭಯವನ್ನು ಅಳಿಸಿಹಾಕಬೇಕು. ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರೆ ಅದು ಮಾರಕ ರೋಗವಲ್ಲ ಎಂದು ತಿಳಿಸಬೇಕು. ಎಂದು ಹೇಳಿದ್ದಾರೆ.

ಹೌದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಕೊರೊನಾ ವೈರಸ್ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹಲವು ವಿಚಾರಗಳ ಕುರಿತು ಮಾತನಾಡಿದ್ದು, ಲಾಕ್‍ಡೌನ್ ವಿಸ್ತರಣೆ, ಕೈಬಿಡುವ ನಿರ್ಧಾರ ತೆಗೆದುಕೊಳ್ಳುವ ಅವಕಾಶವನ್ನು ಕೇಂದ್ರ ಸರ್ಕಾರ ವಿಕೇಂದ್ರೀಕರಿಸುವುದು ಅವಶ್ಯವಾಗಿದೆ. ಕೋವಿಡ್-19 ಬಗ್ಗೆ ಜನರಲ್ಲಿ ಇರುವ ಭಯವನ್ನು ಅಳಿಸಿಹಾಕಬೇಕು. ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರೆ ಅದು ಮಾರಕ ರೋಗವಲ್ಲ ಎಂದು ತಿಳಿಸಬೇಕು. ಕೇಂದ್ರ ಸರ್ಕಾರವು ವಲಸೆ ಕಾರ್ಮಿಕರು, ಕಷ್ಟದಲ್ಲಿರುವ ಜನರಿಗೆ ವಿಳಂಬ ಮಾಡದೇ ನೇರ ನಗದು ವರ್ಗಾವಣೆ ಮಾಡಬೇಕು, ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಸಾಮಾನ್ಯ ಸ್ಥಿತಿಯನ್ನು ತರಲು ಸಮಯದ ಅವಶ್ಯಕತೆಯಿದೆ. ವಯಸ್ಸಾದವರು, ಮಧುಮೇಹಿಗಳು ಮತ್ತು ಉಸಿರಾಟದ ವೈದ್ಯಕೀಯ ಪರಿಸ್ಥಿತಿ ಇರುವವರಿಗೆ ಮಾತ್ರ ಕೊರೊನಾ ಅಪಾಯಕಾರಿಯಾಗಿದೆ. ಹೀಗಾಗಿ ದುಡಿಯುವ ವರ್ಗಗಳ ಮಾನಸಿಕ ಬದಲಾವಣೆಯ ಅವಶ್ಯಕತೆಯಿದೆ. ಎಂದು ಹೇಳಿದ್ದಾರೆ.

ಕೊರೊನಾ ಮಾರಕವಲ್ಲ?

ಮಾರಣಾಂತಿಕ ಕಾಯಿಲೆಯಾಗಿರಲಿಲ್ಲ. ಕೊರೊನಾ ವೈರಸ್ ಸೋಂಕಿತರಲ್ಲಿ ಶೇ.1ರಷ್ಟು ಜನರಿಗೆ ಮಾತ್ರ ಪರಿಣಾಮ ಬೀರುತ್ತದೆ. ಇದು ಎಲ್ಲರಿಗೂ ಮಾರಕ ರೋಗವಲ್ಲ ಎಂಬ ಅರಿವನ್ನು ಸರ್ಕಾರ ಮೂಡಿಸಬೇಕಿದೆ ಎಂದು ಹೇಳಿದ್ದು, ಮನೆಗಳಿಗೆ ಮರಳುತ್ತಿರುವ ಕೂಲಿ ಕಾರ್ಮಿಕರ ಇಚ್ಛೆಗೆ ವಿರುದ್ಧವಾಗಿ ಅವರನ್ನು ಬಂಧಿಸಲಾಗುತ್ತಿದೆ. ಹೀಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾತುಕತೆ ನಡೆಸಿ ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಅವರ ಊರುಗಳಿಗೆ ಕಳಿಸಿಕೊಡುವ ಭರವಸೆ ನೀಡಬೇಕಿದೆ. ಕೇಂದ್ರ ಸರ್ಕಾರ ರೆಡ್, ಆರೇಂಜ್, ಗ್ರೀನ್ ಝೋನ್ ಗಳನ್ನು ನಿರ್ಧರಿಸುವುದು ಬೇಡ. ಜಿಲ್ಲಾಧಿಕಾರಿಗಳು ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ‌ನಿರ್ಧರಿಸಲಿ. ಈ‌ ಕಡುಕಷ್ಟದ ಸಂದರ್ಭದಲ್ಲಿ ಅಧಿಕಾರ ವಿಕೇಂದ್ರೀಕರಣ ಆಗುವುದು ಅತ್ಯವಶ್ಯಕ ಕೇಂದ್ರ ಸರ್ಕಾರ ಅಧಿಕಾರ ವಿಕೇಂದ್ರೀಕರಣ ಮಾಡಬೇಕು. ಕೊರೋನಾ ಪರಿಸ್ಥಿತಿಯನ್ನು ಜಿಲ್ಲೆಗಳ ಮಟ್ಟದಲ್ಲೇ ನಿಭಾಯಿಸಬೇಕು ಎಂದರು.

ಪ್ರಧಾನ ಮಂತ್ರಿಗಳ ಕಚೇರಿಯಿಂದ ಕೊರೊನಾ ‌ಪರಿಸ್ಥಿತಿ ನಿಭಾಯಿಸಲು ಸಾಧ್ಯವಿಲ್ಲ. ಪ್ರಧಾನ ಮಂತ್ರಿ ಮುಖ್ಯಮಂತ್ರಿಗಳ ಮೇಲೆ, ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಮೇಲೆ‌ ಭರವಸೆ ಇಡಬೇಕು.‌ ಇಲ್ಲದಿದ್ದರೆ ಕೊರೊನಾ ವಿರುದ್ಧ ಹೋರಾಟದಲ್ಲಿ ಸೋಲಲಿದ್ದೇವೆ ಎಂದು ರಾಹುಲ್ ಗಾಂಧಿ ಅವರು ಎಚ್ಚರಿಸಿದ್ದಾರೆ. ಕೇಂದ್ರ ಸರ್ಕಾರ ಲಾಕ್ಡೌನ್ ತೆರವುಗೊಳಿಸಿದ ಬಳಿಕ ಏನು ಮಾಡಬೇಕು ಎಂಬ ಯೋಜನೆ ರೂಪಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೇರಿ ಮುಂದಿನ ಕ್ರಮಗಳೇನು ಎಂಬ ಬಗ್ಗೆ ನಿರ್ಧರಿಸಬೇಕು. ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಕ್ರಮಗಳು ಪಾರದರ್ಶಕವಾಗಿರಬೇಕು. ಆದರೆ ಸದ್ಯ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ರಾಜ್ಯ ಸರ್ಕಾರಗಳನ್ನು ಪರಿಗಣಿಸುತ್ತಿಲ್ಲ. ಲಾಕ್ ಡೌನ್ ಬಳಿಕದ ನಿರ್ಧಾರಗಳ ಬಗ್ಗೆ ಸರ್ಕಾರಕ್ಕೆ ಮತ್ತು ಮೋದಿಗೆ ಸ್ಪಷ್ಟತೆ ಇಲ್ಲ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

Also read: ಕ್ಯಾಬ್, ಆಟೋ ಚಾಲಕರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ರೂ. 5,000 ಪಡೆಯುವುದು ಹೇಗೆ.? ಇಲ್ಲಿದೆ ನೋಡಿ ಮಾಹಿತಿ.!