ಹಸುಗಳು ಆಮ್ಲಜನಕವನ್ನು ಉಸಿರಾಡಿ, ಆಮ್ಲಜನಕವನ್ನು ಹೊರ ಬಿಡುವ ಏಕೈಕ ಪ್ರಾಣಿ ಎಂದ ಮುಖ್ಯಮಂತ್ರಿ ಹೇಳಿಕೆ ಭಾರಿ ವೈರಲ್..

0
328

ಗೋಮಾತೆಯ ಬಗ್ಗೆ ಇಡಿ ಜಗತ್ತೆಲ್ಲ ಮಾತನಾಡುತ್ತೆ, ಹಾಗೆಯೇ ಗೋವಿನ ಮೂತ್ರ, ಹಾಲಿನಿಂದ ಇರುವ ಆರೋಗ್ಯಕರ ಉಪಯೋಗಗಳು ಪ್ರತಿಯೊಬ್ಬರ ಮನದಲ್ಲಿವೆ. ಈ ವಿಚಾರವಾಗಿ ಮಾತನಾಡಲು ಹೋದ ಮುಖ್ಯಮಂತ್ರಿಯೊಬ್ಬರು ಯಡವಟ್ಟು ಮಾಡಿಕೊಂಡಿದ್ದು, ಬಾರಿ ವೈರಲ್ ಆಗಿದೆ. ಅಷ್ಟಕ್ಕೂ ಯಾವ ಸಿಎಂ ಗೋ ಮಾತೆಯೇ ಬಗ್ಗೆ ಏನು ಮಾತನಾಡಿದ್ದಾರೆ ಎನ್ನುವುದು ಕುತೂಹಲಕಾರಿಯಾಗಿದ್ದು, ಹಸುಗಳು ಆಮ್ಲಜನಕವನ್ನು ಉಸಿರಾಡಿ, ಆಮ್ಲಜನಕವನ್ನು ಹೊರ ಬಿಡುವ ಏಕೈಕ ಪ್ರಾಣಿ ಎಂದು ಉತ್ತರಾಖಂಡ್‍ನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.

Also read: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಬಿಎಸ್ ವೈ; ಎಚ್.ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಗೆ ಆಹ್ವಾನ ನೀಡಿದ್ದು ಯಾಕೆ ಗೊತ್ತಾ??

ಏನಿದು ಸುದ್ದಿ?

ಹಸುಗಳು ಹೊರಬಿಡುವಾಗಲೂ ಆಮ್ಲಜನಕ ನೀಡುವ ಏಕೈಕ ಪ್ರಾಣಿ ದನ ಆಗಿದೆ, ಎಂದು ಹೇಳುವ ಮೂಲಕ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ವಿವಾದಕ್ಕೀಡಾಗಿದ್ದಾರೆ. ದನಕ್ಕೆ ಮಸಾಜ್ ಮಾಡಿದರೆ ಉಸಿರಾಟ ಸಮಸ್ಯೆ ನಿವಾರಿಸಬಹುದೆಂದು ರಾವತ್ ಡೆಹ್ರಾಡೂನ್ ನಲ್ಲಿ ನಡೆದ ಸಮಾರಂಭದಲ್ಲಿ ವಿವರಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ದನಗಳು ಉಸಿರು ಒಳಗೆ ಎಳೆದುಕೊಳ್ಳುವಾಗಲೂ ಆಮ್ಲಜನಕ ಬಳಸುತ್ತವೆ ಹಾಗೂ ಶ್ವಾಸ ಹೊರಕ್ಕೆ ಬಿಡುವಾಗಲೂ ಆಮ್ಲಜನಕ ನೀಡುತ್ತವೆ ಎಂದು ಹೇಳಿದ ಅವರು ದನದ ಹತ್ತಿರದಲ್ಲಿಯೇ ವಾಸಿಸುವವರು ಕ್ಷಯ ರೋಗದಿಂದಲೂ ಗುಣಮುಖರಾಗುತ್ತಾರೆಂದು ಹೇಳಿಕೊಂಡಿದ್ದಾರೆ. ಆದರೆ ಉತ್ತರಾಖಂಡದಲ್ಲಿರುವ ಸಾಮಾನ್ಯ ನಂಬಿಕೆಗಳನ್ನೇ ಮುಖ್ಯಮಂತ್ರಿ ಹೇಳಿದ್ದಾರೆಂದು ಅವರ ಕಾರ್ಯಾಲಯ ಅವರ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದೆ.

Also read: ಮಹಿಳೆಯ ಹೊಟ್ಟೆಯಲ್ಲಿ 1.5 ಕೆಜಿ ಚಿನ್ನಾಭರಣ, 90 ನಾಣ್ಯಗಳು ಪತ್ತೆ; ಶಸ್ತ್ರಚಿಕಿತ್ಸೆ ನಂತರ ಬಯಲಾಯಿತು! ಸತ್ಯ..

ಮುಖ್ಯಮಂತ್ರಿ ರಾವತ್ ಗೋಮೂತ್ರ ಮತ್ತು ಹಾಲು ಸೇರಿದಂತೆ ಗೋವಿನ ಹಲವು ಔಷಧೀಯ ಉತ್ಪನ್ನಗಳ ಕುರಿತು ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ರಾವತ್, ಗೋವು ಆಮ್ಲಜನಕ ಸೇವಿಸಿ ಮರಳಿ ಆಮ್ಲಜನಕವನ್ನೇ ಹೊರಬಿಡುತ್ತದೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಉತ್ತರಾಖಂಡ್‍ನ ಬಿಜೆಪಿ ಅಧ್ಯಕ್ಷ ಮತ್ತು ನೈನಿತಾಲ್ ಕ್ಷೇತ್ರದ ಶಾಸಕ ಅಜಯ್ ಭಟ್, ಗರ್ಭಿಣಿಯರು ಭಾಗೇಶ್ವರ ಜಿಲ್ಲೆಯ ಗರುದ್‍ನ ಗಂಗಾ ನದಿಯ ನೀರು ಕುಡಿದರೆ ಸಿಸೇರಿಯನ್ ಹೆರಿಗೆ ಮಾಡುವುದನ್ನು ತಪ್ಪಿಸಬಹುದು ಎಂದು ಹೇಳಿದ ಕೆಲ ದಿನಗಳ ನಂತರ ಮುಖ್ಯಮಂತ್ರಿಯವರು ಹಸುವನ್ನು ಹೊಗಳಿರುವುದು ಈಗ ಭಾರೀ ಸುದ್ದಿಯಾಗಿದೆ.

Also read: ಬರಿ ದಂಡ ಹಾಕೋದ್ರಿಂದ ಬುದ್ದಿ ಕಲಿಯೋದಿಲ್ಲ ಅಂತ ಒನ್ ವೇ-ಯಲ್ಲಿ ಬೈಕ್ ಸವಾರಿ ಮಾಡಿದ 6 ಜನರಿಗೆ 2 ದಿನ ಜೈಲು ಶಿಕ್ಷೆ ನೀಡಿದ ಪೋಲಿಸ್!!

ಸಿಎಂ ಅವರ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅಧಿಕಾರಿಯೊಬ್ಬರು ಮುಖ್ಯಮಂತ್ರಿಗಳು ಉತ್ತರಾಖಂಡ್‍ನಲ್ಲಿ ಇರುವ ಸಾಮಾನ್ಯ ನಂಬಿಕೆಗಳ ಬಗ್ಗೆ ಮಾತನಾಡುವ ಸಮಯದಲ್ಲಿ ಈ ರೀತಿ ಹೇಳಿದ್ದಾರೆ. ಹಸುವಿನ ಹಾಲು ಮತ್ತು ಮೂತ್ರದಲ್ಲಿ ಔಷಧೀಯ ಗುಣಗಳು ಇರುವುದು ಎಲ್ಲರಿಗೂ ತಿಳಿದಿರುವ ವಿಚಾರ ಮತ್ತು ಉತ್ತರಾಖಂಡ್‍ನ ಬೆಟ್ಟದಲ್ಲಿ ವಾಸಿಸುವ ಕೆಲ ಜನರು ಹಸು ನಮಗೆ ಉಸಿರಾಡಲು ಆಮ್ಲಜನಕ ನೀಡುತ್ತದೆ ಎಂದು ನಂಬುತ್ತಾರೆ ಈ ರೀತಿಯಲ್ಲಿ ಸಿಎಂ ಅವರು ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.