ಮೋದಿ ಸರ್ಕಾರ ಬಂದಾಗಿನಿಂದ ದೇಶದಲ್ಲಿ ನಿರುದ್ಯೋಗ ಜಾಸ್ತಿಯಾಗ್ತಿದೆ ಅನ್ನೋರಿಗೆ ಇದನ್ನು ತೋರಿಸಿ, 1.5 ಕೋಟಿ ಉದ್ಯೋಗಗಳು ಸೃಷ್ಟಿಯಾಗ್ತಿವೆ..

0
749

Kannada News | Karnataka News

ಪ್ರಧಾನಿ ನರೇಂದ್ರ ಮೋದಿಯವರು ಯುವ ಜನರಿಗೆ ಕೇವಲ ಆಶ್ವಾಸನೆ ನೀಡುತ್ತಿದ್ದಾರೆ, ರೈತರಿಗೆ ಹೊರೆಯಾಗುವಂತಹ ಕೆಲಸ ಮಾಡುತ್ತಿದ್ದಾರೆ, ಕೊನೆ ಪಕ್ಷ ಕಾರ್ಮಿಕರಿಗೂ ಕೆಲಸ ಸಿಗುತ್ತಿಲ್ಲ ಎಂಬ ವಿಪಕ್ಷಗಳ ಮತ್ತು ಟೀಕಾಕಾರರಿಗೆ ಮೋದಿಯವರು ಈಗ ಸುಲಭವಾಗಿ ಉತ್ತರ ನೀಡಬಹುದು. ಯಾಕೆ ಅಂತ ಮುಂದೆ ಓದಿ.

ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕೆ ದೊಡ್ಡ ಮುನ್ನಡೆ ಸಿಕ್ಕಿದೆ. ಹೊಸ ಅಧ್ಯಯನದ ಪ್ರಕಾರ ಪ್ರತಿವರ್ಷವೂ 1.5 ಕೋಟಿ ಜನರು ಕೆಲಸಕ್ಕೆ ಸೇರುತ್ತಿದ್ದಾರೆ ಎಂಬ ಮಹತ್ವದ ವಿಷಯ ತಿಳಿದುಬಂದಿದೆ. ದೇಶದಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ ಎಂಬ ಪ್ರತಿಪಕ್ಷಗಳ ವಾದಕ್ಕೆ ಪ್ರತ್ಯುತ್ತರದಂತಿದೆ ಈ ವರದಿ.

IIM ಅಧ್ಯಯನವು ನಿರುದ್ಯೋಗದ ವದಂತಿಯನ್ನು ನಿವಾರಿಸಿದೆ ಎಂದು ಮೋದಿ ಪ್ರತಿಪಾದಿಸಿದರು, ವಾರ್ಷಿಕವಾಗಿ 1.5 ಕೋಟಿ ಜನ ಕೆಲಸಕ್ಕೆ ಸೇರುತ್ತಿದ್ದಾರೆ. SBI ಸಮೂಹದ ಮುಖ್ಯಸ್ಥರು ನೀಡಿದ ಅಧ್ಯಯನ ವರದಿಯ ಪ್ರಕಾರ ಪ್ರತಿ ವರ್ಷ 2.5 ಕೋಟಿ ಮಕ್ಕಳು ಜನಿಸುತ್ತಾರಂತೆ ಅದರಲ್ಲಿ 40 ರಷ್ಟು ಜನರನ್ನು ಹೊರತುಪಡಿಸಿ ಮಿಕ್ಕ1.5 ಕೋಟಿ ಜನ ಕಾರ್ಮಿಕ ವರ್ಗಕ್ಕೆ ಸೇರುತ್ತಿದ್ದರಂತೆ ಅಂದರೆ ಇಷ್ಟು ಮೊತ್ತದ ಜನಕ್ಕೆ ಉದ್ಯೋಗ ಸಿಗುತ್ತಿದೆ ಎಂದು ಅಂದಾಜಿಸಲಾಗಿದೆ.

ಇದಕ್ಕೂ ಮೊದಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮೋದಿ ಉದ್ಯೋಗಗಳನ್ನು ಒದಗಿಸುವಲ್ಲಿ ಅಸಮರ್ಥರಾಗಿದ್ದರೆ ಕೆಲಸ ಕೊಡಲು ಆಗದಿದ್ದರೆ ಸರ್ಕಾರದಿಂದ ಹೊರಬರಲಿ ಎಂದಿದ್ದರು. ರೈತರು ಮತ್ತು ಯುವಕರು ಭಾರತಕ್ಕೆ ಸಂಬಂಧಿಸಿದ ಎರಡು ಮುಖ್ಯ ವಿಷಯಗಳಾಗಿವೆ ಮತ್ತು ಮೋದಿ ಅವರು ಇವರಿಗೆ ಉದ್ಯೋಗ ಒದಗಿಸಲು ಆಗುತ್ತಿಲ್ಲ, ನಮ್ಮ ಸರ್ಕಾರ ಬಂದರೆ ಕೇವಲ 6 ತಿಂಗಳಲ್ಲಿ ಎಲ್ಲರಿಗು ಉದ್ಯೋಗ ನೀಡುತ್ತೇವೆ ಎಂದು ಚುನಾವಣೆ ಪ್ರಚಾರದಲ್ಲಿ ಹೇಳಿದ್ದರು.

ನೌಕರರ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್ (EPFO), ನೌಕರರ ರಾಜ್ಯ ವಿಮಾ ನಿಗಮ, ಜನರಲ್ ಪ್ರಾವಿಡೆಂಟ್ ಫಂಡ್ ಮತ್ತು ನ್ಯಾಷನಲ್ ಪೆನ್ಷನ್ ಸಿಸ್ಟಮ್ (NPS) ಯ ಸದಸ್ಯತ್ವದಿಂದ ಉದ್ಯಮಗಳಲ್ಲಿ ಉದ್ಯೋಗಾವಕಾಶಗಳನ್ನೂ ಸಹ ಈ ಅಧ್ಯಯನವು ಲೆಕ್ಕ ಹಾಕಿದೆ.

Also Read: ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಜೀವನಾಡಿ ಕೆರೆಗಳು ಇಂದು ಮನಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ವಿಷ ಕಾರುತ್ತಿದೆ.. ಇದಕೆಲ್ಲ ಯಾರು ಕಾರಣ??