ಇಲ್ಲಿ ನೋಡ್ರಪ್ಪೋ ತಿನ್ನೋ ಉಪ್ಪಿಟ್ಟನಲ್ಲಿ 1.29 ಕೋಟಿ ಹಣ ಸಿಕ್ಕಿದೆ ಎಲ್ಲಿ ಅಂತೀರಾ ಇಲ್ಲಿ ನೋಡಿ..!

0
942

ಹೌದು ನಾವು ಸೇವಿಸೋ ಆಹಾರ ಉಪ್ಪಿಟ್ಟನಲ್ಲಿ ಬರಬ್ಬೊರಿ ೧.೨೯ ಕೋಟಿ ಹಣ್ಣ ಪತ್ತೆಯಾಗಿದೆ ಎಲ್ಲಿ ಅನ್ನೋದು ಇಲ್ಲಿದೆ ನೋಡಿ. ಉಪ್ಪಿಟ್ಟಿನಲ್ಲಿ 1.29 ಕೋಟಿ ರು. ಅಕ್ರಮ ವಿದೇಶಿ ಕರೆನ್ಸಿಯನ್ನು ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಪುಣೆ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಈ ಇಬ್ಬರೂ ಪ್ರಯಾಣಿಕರು ದುಬೈಗೆ ತೆರಳುತ್ತಿದ್ದರು. ಇವರಲ್ಲಿ ವೈ. ನಿಶಾಂತ್ ಎಂಬ ಪ್ರಯಾಣಿಕನ ಮೇಲೆ ಸಂದೇಹ ಬಂದು ಆತನ ಚೆಕ್ ಇನ್ ಬ್ಯಾಗನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದರು. ಆಗ ಅದರಲ್ಲಿ ಹಾಟ್ ಬಾಕ್ಸ್ ಪತ್ತೆಯಾಯಿತು.

source:foodviva.com

‘ಹಾಟ್ ಬಾಕ್ಸಲ್ಲಿ ಉಪ್ಪಿಟ್ಟು ಇಟ್ಟುಕೊಂಡಿದ್ದೇನೆ’ ಎಂದು ನಿಶಾಂತ್ ಉತ್ತರಿಸಿದರೂ ನಿರೀಕ್ಷೆಯಿಂತ ಭಾರವಾಗಿತ್ತು. ಅದನ್ನು ಬಿಚ್ಚಿ ತಪಾಸಿಸಿದಾಗ ಉಪ್ಪಿಟ್ಟಿನಲ್ಲಿ ಆತ ಕಪ್ಪು ಪ್ಲಾಸ್ಟಿಕ್ ಚೀಲ ಇಟ್ಟುಕೊಂಡಿದ್ದು, ಅದರಲ್ಲಿ 86,600 ಅಮೆರಿಕನ್ ಡಾಲರ್ ಹಾಗೂ 15 ಸಾವಿರ ಯುರೋ ಕರೆನ್ಸಿಗಳನ್ನು ಇಟ್ಟುಕೊಂಡಿದ್ದು ಪತ್ತೆಯಾಯಿತು.

source;wikimatn.ir

ಈ ವಿಚಾರ ಇಷ್ಟಕ್ಕೆ ನಿಲ್ಲೋದಿಲ್ಲ ಅವನ ಜೊತೆ ಇದ್ದ ಎಚ್. ರಂಗಲಾಣಿ ಎಂಬ ಮಹಿಳಾ ಪ್ರಯಾಣಿಕಳ ಮೇಲೂ ಇದೇ ಸಂದೇಹ ಉಂಟಾಯಿತು. ಆಕೆಯ ಹಾಟ್ ಬಾಕ್ಸ್ ನಲ್ಲೂ 86,200 ಅಮೆರಿಕನ್ ಡಾಲರ್ ಹಾಗೂ 15 ಸಾವಿರ ಯುರೋ ಕರೆನ್ಸಿಗಳು
ಪತ್ತೆಯಾಗಿವೆ. ನೋಡಿ ಜನ ಎಷ್ಟು ಬುದ್ದಿ ಹುಡುಕಿ ಅಕ್ರಮವಾಗಿ ಏನೇ ಮಾಡಿದರು ಬಹುಬೇಗನೆ ಸಿಕ್ಕಿಬೀಳುತ್ತಾರೆ.

source:history.com