ಕರ್ನಾಟಕದಿಂದ 2480 ಕೋಟಿ ರೂ. ಪರಿಹಾರ ಕೋರಿ ಸುಪ್ರೀಂಗೆ ತಮಿಳುನಾಡು ಅರ್ಜಿ

0
985

ನವದೆಹಲಿ: ಕರ್ನಾಟಕದಲ್ಲಿ ಬರ ಇದ್ದರೂ ಕಾವೇರಿ ನದಿ ನೀರಿನ ವಿಚಾರದಲ್ಲಿ ಪದೇ ಪದೇ ಕ್ಯಾತೆ ತೆಗೆಯುವ ತಮಿಳುನಾಡು ಈಗ ಮತ್ತೊಮ್ಮೆ ರಾಜ್ಯವನ್ನು ಕೆಣಕಿದೆ.

ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನ್ಯಾಯಾಧಿಕರಣದ ಐ ತೀರ್ಪಿನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಬಾರದೆಂದು ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಿದೆ. ರಾಜ್ಯದ ಪ್ರಮುಖ ಜಲಾಶಯಗಳಾದ ಕೃಷ್ಣರಾಜ ಸಾಗರ, ಕಬಿನಿ, ಹಾರಂಗಿ ಮತ್ತು ಜಲಾಶಯಗಳ ಮೂಲಕ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಆದರು ಸಹ ತಮಿಳುನಾಡಿನವರಿಗೆ ಸಕಾಗಿಲ್ಲ ಇನ್ನು ಕರ್ನಾಟಕದವರನ್ನು ಕಾಡುತ್ತಿದ್ದಾರೆ.

sc_cauvery_

ಕರನಾಟಕದಲ್ಲಿ ಬರ ಪರಿಸ್ಥಿತಿ ಇದ್ದರೂ ಸಹಿತ ತಮಿಳುನಾಡಿಗೆ ನೀರು ಹರಿಸಿ ತಮ್ಮಗೆ ನಷ್ಟವಾದರು ಕೂಡ ತಮಿಳುನಾಡಿಗೆ ನೀರು ಹರಿಸಿದ್ದಾರೆ.  ಮತ್ತೆ ಸುಪ್ರೀಂ  ಆದೇಶವಿದ್ದರೂ ಕಾವೇರಿ ನೀರನ್ನು ಸಕಾಲದಲ್ಲಿ ಬಿಡುಗಡೆ ಮಾಡದ ಕಾರಣ ಬೇಳೆಹಾನಿಯಾಗಿದೆ ಪರಿಹಾರವಾಗಿ ಒಟ್ಟು 2.480 ಕೋಟಿ ರೂ.  ಬೇಕೆಂದು ಸುಪ್ರೀಂ ಕೋರ್ಟ್ ಗೆ ತಮಿಳುನಾಡು ಅರ್ಜಿ ಸಲ್ಲಿಸಿದೆ.

ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಒಂದು ವಾರದ ಒಳಗಡೆ ಈ ಅರ್ಜಿಗೆ ಸಂಬಂಧಿಸಿ ಸಾಕ್ಷ್ಯಗಳನ್ನು ನೀಡುವಂತೆ ಎರಡು ರಾಜ್ಯಗಳಿಗೆ ಸೂಚಿಸಿದೆ. ಅಷ್ಟೇ ಅಲ್ಲದೇ 4 ವಾರದ ಒಳಗಡೆ ಸಂಪೂರ್ಣ ವಿವರಗಳೊಳೊಂದಿಗೆ ಸಾಕ್ಷ್ಯಗಳ ಅಫಿದವಿತ್ ಸಲ್ಲಿಸಬೇಕೆಂದು ಸೂಚಿಸಿದೆ.

ಕೆಆರ್ ಎಸ್ ಅಣೆಕಟ್ಟೆ ಡೆಡ್ ಸ್ಟೋರೇಜ್ ಮಟ್ಟ ತಲುಪಿದೆ. ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಕರ್ನಾಟಕ ಈಗಾಗಲೇ ರಾಜ್ಯದಾದ್ಯಂತ ಬರ ಪರಿಸ್ಥಿತಿ ಘೋಷಣೆ ಮಾಡಿದೆ. ಹಾಗೂ ಕೇಂದ್ರ ಸರಕಾರವು ಕರ್ನಾಟಕ ಸಲ್ಲಿಸಿದ್ದ 4700 ಕೋಟಿ ಪರಿಹಾರದ ಮನವಿಗೆ ಪ್ರತಿಯಾಗಿ 1700 ಕೋಟಿ ನೀಡಿದೆ.