ಕೆಪಿಸಿಸಿ ಅಧ್ಯಕ್ಷ ಪಟ್ಟ ಕಟ್ಟಲು ಮುಹೂರ್ತ ಫಿಕ್ಸ್; ಅಧ್ಯಕ್ಷ ಪಟ್ಟ ಅಲಂಕರಿಸಲು ಸಿದ್ಧ. ಆದರೆ ನನ್ನ 8 ಷರತ್ತುಗಳನ್ನು ಒಪ್ಪಿಕೊಂಡರೆ ಮಾತ್ರ ಹುದ್ದೆ ಏರುತ್ತೇನೆ ಡಿ.ಕೆ.ಶಿ.!

0
242

ಕನಕಪುರದ ಬಂಡೆ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಅದೃಷ್ಟದ ಮೇಲೆ ಅದೃಷ್ಟ ಒಲಿದು ಬರುತ್ತಿದ್ದು, ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಡಿಕೆಶಿ ಎನ್ನುವುದು ಈಗಾಗಲೇ ಪೈನಲ್ ಆದಂತಿದೆ. ಅದರಂತೆ ಜನವರಿ ಎರಡನೇ ವಾರ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದುಬಂದಿದ್ದು, ಕೆಪಿಸಿಸಿ ಅಧ್ಯಕ್ಷ ಪಟ್ಟ ಅಲಂಕರಿಸಲು ಸಿದ್ಧರಿರುವ ಡಿಕೆಶಿ, 8 ಷರತ್ತುಗಳನ್ನು ಇಟ್ಟಿದ್ದು, ಇವುಗಳನ್ನು ಹೈ ಕಮಾಂಡ್ ಒಪ್ಪಿದರೆ ಮಾತ್ರ ಈ ಹುದ್ದೆ ನಿಭಾಯಿಸುತ್ತೇನೆ ಎಂದು ಹೇಳಿದ್ದಾರಂತೆ.

ಹೌದು ದಿನೇಶ್ ಗುಂಡೂರಾವ್ ಅವರ ರಾಜೀನಾಮೆಯಿಂದ ಖಾಲಿಯಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಹುತೇಕವಾಗಿ ಡಿಕೆಶಿ ಪೈನಲ್ ಆಗಿದ್ದಾರೆ. ಆದರೆ ಈ ರೇಸ್‍ನಲ್ಲಿ ಎಂಬಿ ಪಾಟೀಲ್ ಹೆಸರು ತೇಲಿಬಂದರೂ ಹೈಕಮಾಂಡ್ ಈಗ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರನ್ನೇ ಆಯ್ಕೆ ಮಾಡಲು ಮುಂದಾಗಿದೆ. ಜ.20 ರಿಂದ ಅಧಿವೇಶನ ಆರಂಭವಾಗಲಿದ್ದು, ಅಷ್ಟರೊಳಗೆ ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅದೇ ರೀತಿ ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಅವರನ್ನೇ ಮುಂದುವರೆಸಬೇಕೇ ಅಥವಾ ಬೇರೆಯವರನ್ನು ನೇಮಕ ಮಾಡಬೇಕೇ ಎಂಬ ಬಗ್ಗೆಯೂ ಕೂಡ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅವರೇ ಆ ಸ್ಥಾನದಲ್ಲಿ ಮುಂದುವರೆಯ ಬೇಕೆಂಬುದು ಹೈಕಮಾಂಡ್‍ನ ನಿಲುವಾಗಿದೆ.

ಅವರ ಮನವೊಲಿಸುವ ಯತ್ನ ಕೂಡ ನಡೆದಿದೆ. ಅವರು ಒಪ್ಪಿದರೆ ಮುಂದುವರೆಸುವ ಸಾಧ್ಯತೆ ಇದೆ. ಅವರು ಒಪ್ಪದಿದ್ದರೆ ಬೇರೆಯವರನ್ನು ಹೈಕಮಾಂಡ್ ನೇಮಿಸಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಬದಲಾವಣೆ ಮಾಡುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ. ಆದರೆ ಕಾಂಗ್ರೆಸ್ ಪಕ್ಷವನ್ನು ಪುನರ್ ರಚನೆ ಮಾಡಲು ಹೈಕಮಾಂಡ್ ಸಿದ್ಧತೆ ನಡೆಸಿದ್ದು, ಡಿ.ಕೆ.ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ. ಡಿ.ಕೆ.ಶಿವಕುಮಾರ್ ಅವರು ಕೂಡ ಹಲವು ಷರತ್ತುಗಳನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ. ಇನ್ನು ಮೂರು ದಿನಗಳ ನಂತರ ದೆಹಲಿಗೆ ತೆರಳಲಿದ್ದು, ವರಿಷ್ಠರ ಜೊತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಕಳೆದ ವಾರ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲೇ ಡಿ.ಕೆ.ಶಿವಕುಮಾರ್ ಅವರಿಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಜನವರಿಯಲ್ಲಿ 13ರ ನಂತರ ಹೈಕಮಾಂಡ್ ಅನುಮತಿ ನೀಡಲಿದೆ. ಈ ಬಗ್ಗೆ ಡಿಕೆಶಿ ತಮ್ಮ ಆಪ್ತರೊಂದಿಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಬಹುತೇಕ ತನ್ನ ಹೆಸರು ಅಂತಿಮವಾಗುತ್ತಿದ್ದಂತೆ ಡಿಕೆಶಿವಕುಮಾರ್ ಹೈಕಮಾಂಡ್ ಮುಂದೆ 8 ಷರತ್ತುಗಳನ್ನು ಇಟ್ಟಿದ್ದಾರೆ. ಈ ಷರತ್ತುಗಳನ್ನು ಒಪ್ಪಿದರೆ ಮಾತ್ರ ನಾನು ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ಏರುತ್ತೇನೆ. ಅಧ್ಯಕ್ಷನಾಗಿಯೂ ನನಗೆ ಬೇಕಾದ ನಿರ್ಧಾರ ಕೈಗೊಳ್ಳಲು ಆಗದೇ ಇದ್ದರೆ ನನಗೆ ಪಟ್ಟ ಬೇಡ ಎಂದು ಹೇಳಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿದೆ.

ಏನವೂ ಡಿಕೆಶಿ ಷರತ್ತುಗಳನ್ನು?

1. ಅಧ್ಯಕ್ಷನಾಗಿ ನನಗೆ ಸಂಪೂರ್ಣ ಫ್ರೀ ಹ್ಯಾಂಡ್ ನೀಡಬೇಕು.
2. ಪದಾಧಿಕಾರಿಗಳ ಬದಲಾವಣೆ ಹಾಗೂ ನೇಮಕ ವಿಚಾರದಲ್ಲಿ ನಾನೇ ನಿರ್ಧಾರ ಕೈಗೊಳ್ಳುವಂತಿರಬೇಕು.
3. ಪಕ್ಷವನ್ನ ಅಧಿಕಾರಕ್ಕೆ ತರುವುದು ನನ್ನ ಜವಾಬ್ದಾರಿ. ಪಕ್ಷ ಅಧಿಕಾರಕ್ಕೆ ಬಂದಮೇಲೆ ಯಾವುದೇ ಗೊಂದಲಗಳು ಇರಬಾರದು. ನನ್ನನ್ನೇ ಸಿಎಂ ಮಾಡಬೇಕು.
4. ಎಲ್ಲ ನಾಯಕರನ್ನು ಒಗ್ಗೂಡಿಸಿಕೊಂಡು ಹೋಗುವ ಜವಾಬ್ದಾರಿ ನನ್ನದು. ಆದರೆ ಬೇರೆಯವರ ಹಸ್ತಕ್ಷೇಪಕ್ಕೆ ನೀವು ಮಣಿಯಬಾರದು.
5. ಸಹಕಾರ ಬೇಕಾದಾಗ ನಾನೇ ತಿಳಿಸುತ್ತೇನೆ. ಆಗ ಹೈಕಮಾಂಡ್ ನಾಯಕರುಗಳು ರಾಜ್ಯಕ್ಕೆ ಬಂದು ಸಹಕರಿಸಬೇಕು.
6. ಹೊಂದಾಣಿಕೆಗೆ, ಬದಲಾವಣೆಗೆ ನಾನು ಸಿದ್ಧ. ಆದರೆ ರಾಜ್ಯ ನಾಯಕರುಗಳು ಬೇರೆ ಯಾವುದೇ ಉದ್ದೇಶದಿಂದ ಮಧ್ಯೆ ಕೈ ಆಡಿಸಿದರೆ ಅದಕ್ಕೆ ನಾನು ಒಪ್ಪುವುದಿಲ್ಲ.
7. ಟಿಕೆಟ್ ಹಂಚಿಕೆ ಹಾಗೂ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು.
8. ಅಗತ್ಯ ಬಿದ್ದರೆ ಪಕ್ಷಕ್ಕೆ ಅನುಕೂಲವಾಗುವಲ್ಲಿ ಪಕ್ಷದ ಸಂಪ್ರದಾಯವನ್ನು ಮೀರಿ ತೀರ್ಮಾನ ಕೈಗೊಳ್ಳಲು ನೀವು ಒಪ್ಪಿಗೆ ನೀಡಬೇಕು.

Also read: ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಯಲ್ಲಿ ಐಟಿ, ಇಡಿ ಅಧಿಕಾರಿಗಳಿಂದ ಕಿರುಕುಳ ಆರೋಪ, ಹೈ ಕೋರ್ಟ್ ಮೆಟ್ಟಿಲೇರಿದ ಡಿಕೆಶಿ ತಾಯಿ!!