ದಿನ ಭವಿಷ್ಯ 10 ಮೇ, 2018!!

0
590
ದಿನ ಭವಿಷ್ಯ

ಮೇಷ:

ಮಿತ್ರ ವರ್ಗದವರಿಂದ ಅಪವಾದ ಎದುರಿಸುವ ಸಂಭವ. ಕೋರ್ಟ್ ಕಚೇರಿ ಕಾರ್ಯಗಳಲ್ಲಿ ಮುನ್ನಡೆ. ನಿಧಾನಗತಿಯಲ್ಲಿ ಸುಧಾರಣೆ.

ವೃಷಭ:

ಸುಖ ದಾಂಪತ್ಯ ಮುಂದುವರಿಕೆ, ಮಕ್ಕಳ ಬಗ್ಗೆ ಹೆಚ್ಚಿನ ಗಮನ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ನಿಲುವಿಗೆ ಹೆಚ್ಚಿನ ಗೌರವ, ಸಂತಸ.

ಮಿಥುನ:

ಕೃಷಿಕರಿಗೆ ಕೃಷಿ ಕಾರ್ಯದಿಂದ ಅಭಿವೃದ್ಧಿ ನೆಮ್ಮದಿ. ವ್ಯರ್ಥ ಸಂಚಾರದಿಂದ ಅಧಿಕ ಧನವ್ಯಯ. ಸಹೋದ್ಯೋಗಿಯಿಂದ ಸಹಾಯ.

ಕಟಕ:

ಅವಿವಾಹಿತರಿಗೆ ನಿಶ್ಚಯ ಭಾಗ್ಯ ಇಲ್ಲವೆ ಮಂಗಲ ಕಾರ್ಯಕ್ಕೆ ಚಾಲನೆ. ನೂತನ ದಂಪತಿಗೆ ಸಿಹಿ ಸುದ್ದಿ ಮಾನಸಿಕ ಸಂತಸ.

ಸಿಂಹ:

ಆರ್ಥಿಕವಾಗಿ ನಾನಾ ರೀತಿಯ ಲಾಭಗಳಿಕೆ ಯಿಂದ ಮನಸ್ಸಿಗೆ ಉಲ್ಲಾಸ ಹೆಚ್ಚಳ. ದೇವತಾ ಕಾರ್ಯ ಗಳಿಗಾಗಿ ಬಂಧುಗಳ ಆಗಮನ.

ಕನ್ಯಾ:

ವಿದ್ಯಾರ್ಥಿಗಳ ಅಭ್ಯಾಸದಲ್ಲಿ ಸಣ್ಣ ಪುಟ್ಟ ಬದಲಾವಣೆ ತೋರಿಬಂದರೂ ಉತ್ತಮ ಫಲಿತಾಂಶ. ದೈವಾನುಗ್ರಹದಿಂದ ಮನೆಯಲ್ಲಿ ಎಲ್ಲ ಸುಗಮ.

ತುಲಾ:

ಸರಕಾರಿ ನೌಕರರಿಗೆ ಲಾಭದಾಯಕ ಆದಾಯ ವಿದ್ದರೂ ಮುನ್ನಡೆಗೆ ಆಗಾಗ ತೊಡಕು ಸಂಭವ. ರಾಜಕಾರಣಿಗೆ ಶತ್ರುಭೀತಿ.

ವೃಶ್ಚಿಕ:

ಮನೆಯಲ್ಲಿ ಹರುಷವಿದ್ದರೂ ವ್ಯಯಾಧಿಕ್ಯದಿಂದ ಚಿಂತೆ. ಪುತ್ರರ ಹಿನ್ನಡೆಯಿಂದ ಬೇಸರ. ಆರೋಗ್ಯದ ಮೇಲೆ ಪರಿಣಾಮ.

ಧನಸ್ಸು:

ಪ್ರತಿಷ್ಠಿತ ವ್ಯಕ್ತಿಗಳ ಸಹಕಾರದಿಂದ ಕಾರ್ಯಾನುಕೂಲ. ಅನಿರೀಕ್ಷಿತ ಕಂಕಣ ಭಾಗ್ಯದಿಂದ ಮನಸ್ಸಿಗೆ ಉಲ್ಲಾಸ, ಸಂತೃಪ್ತಿ.

ಮಕರ:

ಅನವಶ್ಯಕ ತಕರಾರಿನಿಂದ ಉದ್ಯೋಗದಲ್ಲಿ ಬೇಸರ. ವಿಶ್ವಾಸಿಗಳಿಂದ ಸಹಾಯ. ಆರ್ಥಿಕ ವಿಚಾರದಲ್ಲಿ ಸ್ವಲ್ಪ ಪ್ರಗತಿ, ಮನೋಲ್ಲಾಸ.

ಕುಂಭ:

ದೈವ ಸಹಾಯದಿಂದ ಕೆಲಸ ಕಾರ್ಯಗಳಿಗೆ ಯಶಸ್ಸು. ಮೇಲಧಿಕಾರಿಗಳ ಸಹಕಾರದಿಂದ ಜವಾಬ್ದಾರಿ ಹೆಚ್ಚಳ. ಸಾಂಸಾರಿಕ ಸುಖ, ಸಂತಸ.

ಮೀನ:

Meena1

ಸಾಂದರ್ಭಿಕ ಖರ್ಚು ವೆಚ್ಚಗಳಿಂದ ಉಳಿತಾಯಕ್ಕೆ ಕುಂದು, ಧರ್ಮ ಕಾರ್ಯಗಳಲ್ಲಿ ವಿಘ್ನ, ಗೃಹಿಣಿಗೆ ಸೂಕ್ತ ಸ್ಥಾನದಿಂದ ಉಲ್ಲಾಸ.