ದಿನ ಭವಿಷ್ಯ: 20 ಜೂನ್, 2019!!

0
425

Astrology in kannada | kannada news ದಿನ ಭವಿಷ್ಯ: 20 ಜೂನ್, 2019!!

ದಿನ ಭವಿಷ್ಯ: 20 ಜೂನ್, 2019!!

ಮೇಷ:

ನೂತನ ಒಪ್ಪಂದಗಳಿಗೆ ಸಹಿ ಹಾಕುವ ಕಾಗದ ಪತ್ರಗಳನ್ನು ಪರೀಕ್ಷಿಸುವುದು ಒಳಿತು. ಇಷ್ಟಪಟ್ಟ ವ್ಯವಹಾರದಲ್ಲಿ ಅಧಿಕ ಲಾಭಾಂಶ ಕಂಡುಬರುವುದು. ಆರೋಗ್ಯದಲ್ಲಿ ಉತ್ತಮ ಪ್ರಗತಿ ಕಂಡುಬರುವುದು.

ವೃಷಭ:

ಹಣಕಾಸು ವಿಷಯದಲ್ಲಿ ಜಾಗ್ರತೆಯಿಂದಿರಿ. ಆರೋಗ್ಯದ ಕಡೆ ಗಮನವಿರಲಿ. ಸಣ್ಣಪುಟ್ಟ ವಿಷಯಗಳಿಗೆ ತಲೆಕೆಡಿಸಿಕೊಳ್ಳಬೇಕು. ಸಂಗಾತಿಯ ಸಲಹೆಯನ್ನು ಸ್ವೀಕರಿಸುವುದು ಒಳ್ಳೆಯದು.

ಮಿಥುನ:

ಹಳೆಯ ಗೆಳೆಯರ ಭೇಟಿ ಸಂಭವ. ಕಳೆದುಹೋದ ದಿನಗಳ ಸವಿನೆನಪುಗಳ ಮೆಲುಕು ಹಾಕುವಿರಿ. ನೂತನ ಕಾರ್ಯವನ್ನು ಮಾಡಲು ಇಬ್ಬರೂ ಪಣ ತೊಡುವಿರಿ. ನಿಮ್ಮ ಕಾರ್ಯ ಸಾಧುವಾದುದು.

ಕಟಕ:

ಹೊಸ ತರಹದ ಆಲೋಚನೆಗಳು ನಿಮ್ಮನ್ನು ಹುರಿದುಂಬಿಸಲಿದೆ. ಮಾನಸಿಕವಾಗಿ ನೆಮ್ಮದಿಯನ್ನು ಹೊಂದುತ್ತಿರಿ. ಧನಸ್ಥಾನದ ಗುರುವು ವಿವಿಧ ಮೂಲಗಳಿಂದ ಹಣವನ್ನು ಕೊಡಿಸುವನು.

ಸಿಂಹ:

ನಿಮ್ಮ ವತ್ತಿಯಲ್ಲಿ ಪ್ರಗತಿ ಸಾಧಿಸುತ್ತಿರಿ. ಆಧ್ಯಾತ್ಮದ ವಿಚಾರಗಳಲ್ಲಿ ಹಿರಿಯರ ಬೆಂಬಲ ಸಹಕಾರ ದೊರೆಯುವುದು. ಆಧ್ಯಾತ್ಮ ಸಾಧನೆಗಾಗಿ ಇರುವ ಊರನ್ನು ಬಿಡಬೇಕಾಗುವುದು.

ಕನ್ಯಾ:

ಹಲವು ದಿನಗಳಿಂದ ಬಾಕಿಯಿರುವ ಕೆಲಸಗಳು ಇಂದು ಅಂತಿಮಗೊಳ್ಳಲಿವೆ. ಒಂದು ಮಹತ್ವಪೂರ್ಣ ಕಾರ್ಯಕ್ರಮದಲ್ಲಿ ಭಗವಹಿಸುವಿರಿ. ಇದರಿಂದ ನಿಮಗೂ ಸಂತಸವುಂಟಾಗಲಿದೆ.

ತುಲಾ:

ವ್ಯಾಪಾರ ವ್ಯವಹಾರದಲ್ಲಿ ಎಂದಿಗಿಂತ ಇಂದು ತುಸು ಹೆಚ್ಚಿನ ಲಾಭಾಂಶ ಕಂಡುಬರುವುದು. ವಿದ್ಯಾರ್ಥಿಗಳು ಮನಸ್ಸು ಕೊಟ್ಟು ಓದುವುದು ಒಳ್ಳೆಯದು. ಮತ್ತು ಋಣಾತ್ಮಕ ವಿಚಾರಗಳಿಗೆ ಕಿವಿಕೊಡದಿರುವುದು ಒಳ್ಳೆಯದು.

ವೃಶ್ಚಿಕ:

ಕೆಲಸದ ಸಲುವಾಗಿ ಅಲ್ಪ ಪ್ರಯಾಣವನ್ನು ಮಾಡಬೇಕಾಗುವುದು. ಆದರೆ ಪ್ರಯಾಣವು ಪ್ರಯಾಸವನ್ನುಂಟು ಮಾಡಲಿದೆ. ಲಕ್ಷ್ಮೀನಾರಸಿಂಹದೇವರನ್ನು ಪ್ರಾರ್ಥಿಸಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಧನಸ್ಸು:

ವಿವಾಹ ಆಕಾಂಕ್ಷಿಗಳಿಗೆ ಇಂದು ಶುಭವಾರ್ತೆ ಸಿಗಲಿದೆ. ಮನೆಗೆ ಸಂಬಂಧಿಕರ, ಆತ್ಮೀಯರ ಆಗಮನ ಆಗಲಿದ್ದು ಮನೆಯಲ್ಲಿ ಹಬ್ಬದ ವಾತಾವರಣ ಉಂಟಾಗಲಿದೆ. ಗುರುವಿನ ಅನುಗ್ರಹದಿಂದ ಹಣಕಾಸಿನ ತೊಂದರೆ ಇರುವುದಿಲ್ಲ.

ಮಕರ:

ಗುರುವಿನ ಗುಲಾಮನಾಗದ ಹೊರತು ದೊರೆಯದಣ್ಣ ಮುಕುತಿ ಎಂಬಂತೆ ಈದಿನ ನಿಮ್ಮ ಕೆಲಸಕಾರ್ಯಗಳಿಗೆ ಗುರುವಿನ ಅನುಗ್ರಹ ಆಶೀರ್ವಾದ ಬೇಕಾಗಿದೆ. ಹಾಗಾಗಿ ಆದಷ್ಟು ಈದಿನ ತಗ್ಗಿ ಬಗ್ಗಿ ನಡೆಯಿರಿ.

ಕುಂಭ:

ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕ್ಷೇತ್ರದವರ ಪ್ರತಿಭೆಗೆ ತಕ್ಕ ಪ್ರತಿಫಲ ದೊರೆಯಲಿದೆ. ಎಲ್ಲೆಡೆ ನಿಮ್ಮ ಮಾತಿಗೆ ಗೌರವ ದೊರೆಯಲಿದೆ. ನಿಮ್ಮ ಒಂದು ಅಪೇಕ್ಷೆ ಮೇಲೆ ಬೆಲೆಬಾಳುವ ಯಂತ್ರವನ್ನು ತರಿಸುವ ಸಾಧ್ಯತೆ ಇರುತ್ತದೆ.

ಮೀನ:

Meena1

ಆತ್ಮೀಯರ ಆಗಮನದಿಂದ ಮನಃಶಾಂತಿ ದೊರೆಯಲಿದೆ. ಇಲ್ಲದೆ ನಿಮಗೆ ಸ್ಫೂರ್ತಿ ನೀಡುವಂತಹ ಪತ್ರ ನಿಮ್ಮ ಕೈಸೇರಿ ಸಂತಸ ಮೂಡುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 20 ಜೂನ್, 2019!!