ದಿನ ಭವಿಷ್ಯ 21 ಮೇ, 2019!!

0
512

Astrology in kannada | kannada news ದಿನ ಭವಿಷ್ಯ 21 ಮೇ, 2019!!

ದಿನ ಭವಿಷ್ಯ 21 ಮೇ, 2019!!

ಮೇಷ:

ದಿನ ಭವಿಷ್ಯ

ಮೇಷ:- ಆರೋಗ್ಯ ವಿಚಾರಿಸಲು ಸ್ನೇಹಿತರು ಬರುವ ಸಾಧ್ಯತೆಯಿದೆ. ಆದರೆ ಅಪರಿಚಿತ ವ್ಯಕ್ತಿಗಳ ಭೇಟಿಗೆ ಅವಕಾಶ ಕೊಡಬೇಡಿ. ನಿಮ್ಮ ಸಮಸ್ಯೆಯನ್ನು ಅವರು ಭೂತಗನ್ನಡಿಯಲ್ಲಿ ನೋಡಿ ಅಪಪ್ರಚಾರ ಮಾಡುವರು. ರಾಜಕೀಯ ಜನರಿಗೆ ಟೀಕೆ ತಪ್ಪವು.

ವೃಷಭ:

ದಿನ ಭವಿಷ್ಯ

ವೃಷಭ:- ಗುರಿ ಸಾಧಿಸುವಲ್ಲಿ ಸಫಲರಾಗುತ್ತೀರಿ. ಹಳೆಯ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ. ಕೌಟುಂಬಿಕವಾಗಿ ಉತ್ತಮ ದಿನ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ಆಸ್ತಿ ವ್ಯವಹಾರಗಳು ಚರ್ಚೆ ಬರಲಿವೆ. ನಿಮ್ಮ ಪಾಲಿಗೆ ಬಂದದ್ದು ಪಂಚಾಮೃತ ಎಂದು ಭಾವಿಸಿಕೊಳ್ಳಿರಿ. ಸಹೋದರರ ನಡುವೆ ವೈಷಮ್ಯ ಕಡಿಮೆ ಆಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:– ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲ ಎನ್ನುವಂತೆ ಇಂದು ನೀವು ಮಾಡುವ ಕೆಲಸದಲ್ಲಿ ಪೂರ್ಣವಿಶ್ವಾಸ ತೋರಿರಿ. ಇದರಿಂದ ಒಳಿತಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಸಿಂಹ:

ದಿನ ಭವಿಷ್ಯ

ಸಿಂಹ:– ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣವಿರುವುದು. ಕಚೇರಿ ಕೆಲಸಗಳಲ್ಲಿನ ಬಿಕ್ಕಟ್ಟು ನಿವಾರಣೆ ಆಗಲಿದೆ. ಹಿತ ಚಿಂತಕರೊಡನೆ ಸಮಾಲೋಚನೆ ನಡೆಸುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಜನಪ್ರಿಯತೆ ಹೆಚ್ಚಾಗುವ ಸಾಧ್ಯತೆಯಿದೆ. ವ್ಯಾಪಾರ-ವ್ಯವಹಾರದಲ್ಲಿ ಎಂದಿಗಿಂತ ಲಾಭಾಂಶ ಹೆಚ್ಚಾಗಲಿದೆ. ಮಡದಿ ಮಕ್ಕಳ ಜೊತೆ ಸಂತಸದ ಜೀವನವನ್ನು ಕಳೆಯುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಆರ್ಥಿಕ ಅಭಿವೃದ್ಧಿ ಸ್ವಲ್ಪ ನಿಧಾನವಾದರೂ ಸಂತೃಪ್ತಿಯ ಬದುಕು ನಿಮ್ಮದಾಗುವುದು. ಹೊಸ ಹೊಸ ಆಲೋಚನೆಗಳು ನಿಮ್ಮ ಕಾರ್ಯಕ್ಷ ಮತೆಗೆ ಒರೆಗಲ್ಲಾಗಿ ನಿಲ್ಲುವುದು. ಸ್ನೇಹಿತರ ಸಹಾಯ ಉತ್ತಮವಾಗಿರುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:– ಇಂದು ನಿಮಗೆ ಮರೆಯಲಾರದ ದಿನ. ನಿಮ್ಮ ಸಾಮಾಜಿಕ ಪ್ರತಿಷ್ಠೆ ಹೆಚ್ಚಲಿದೆ. ಮಿತ್ರರ ಸಹಕಾರವೂ ದೊರೆಯುವುದು. ಹಿರಿಯರ ಆಶೀರ್ವಾದದಿಂದ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವವು.

ಧನಸ್ಸು:

ದಿನ ಭವಿಷ್ಯ

ಧನಸ್ಸು:– ಆರೋಗ್ಯ ಉತ್ತಮವಿರುವುದು. ಹಣಕಾಸು ವ್ಯವಹಾರಗಳಲ್ಲಿ ಯಶಸ್ಸು ಸಿಗುವುದು. ಇಂದು ನಿಮಗೆ ಸಂತೋಷದ ದಿನ. ಆದಾಗ್ಯೂ ಗುರು-ಹಿರಿಯರ ಮಾತನ್ನು ಮೀರುವುದು ಉಚಿತವಲ್ಲ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:– ಉದ್ಯೋಗಿಗಳು ತಮ್ಮ ಬೇಡಿಕೆ ಈಡೇರುವುದಕ್ಕಾಗಿ ಮುಷ್ಕರ ಹೂಡುವುದು ಅನಿವಾರ್ಯವಾಗುವುದು. ಗೆಳೆಯರು ನಿಮ್ಮ ಹೋರಾಟಕ್ಕೆ ಬೆಂಬಲ ಸೂಚಿಸುವರು. ಸಂಜೆಯ ವೇಳೆಗೆ ಅಧಿಕಾರ ವರ್ಗದವರು ನಿಮ್ಮ ಬೇಡಿಕೆಯನ್ನು ಈಡೇರಿಸುವರು.

ಕುಂಭ:

ದಿನ ಭವಿಷ್ಯ

ಕುಂಭ:– ನೌಕರಿಯಲ್ಲಿ ಸಮಸ್ಯೆಗಳು ಎದುರಾಗುವ ಸಂಭವವಿದ್ದು ಅಧೈರ್ಯದಿಂದ ಕೂಡುವ ಕಾಲವಲ್ಲ. ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಮೀನ:

ದಿನ ಭವಿಷ್ಯ

ಕುಟುಂಬದಲ್ಲಿ ಉತ್ತಮ ಪ್ರಗತಿ ಕಾಣುವುದು. ಕಚೇರಿಯಲ್ಲಿನ ಕೆಲಸಗಾರರು ಅಸಹಕಾರವನ್ನು ನೀಡುವರು. ಆದಾಗ್ಯೂ ಸೇವಕ ಮತ್ತು ಮಾಲಕರ ನಡುವೆ ಒಪ್ಪಂದವಾಗಿ ಸುಖವಾಗಿರುವರು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ 21 ಮೇ, 2019!!