ದಿನ ಭವಿಷ್ಯ: 23 ಮೇ, 2018

0
494
ದಿನ ಭವಿಷ್ಯ

Astrology in kannada | kannada news

ಮೇಷ:

ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಹಮ್ಮಿಕೊಳ್ಳುವ ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. ಇದರಿಂದ ಶತ್ರುಗಳು ನಿಮ್ಮ ಸ್ನೇಹವನ್ನು ಬಯಸಿ ಬರುವರು.

ವೃಷಭ:

ಕನಸುಗಳನ್ನು ಬೆನ್ನತ್ತಿ ಹೋಗುವಿರಿ. ಮಕ್ಕಳ ಪ್ರಗತಿಯು ಮನಸ್ಸಿಗೆ ಸಂತೋಷವನ್ನು ನೀಡುವುದು. ಆರ್ಥಿಕ ಸಂಕಷ್ಠ ಕಡಿಮೆ ಆಗಲಿದೆ. ಆರೋಗ್ಯ ಉತ್ತಮ.

ಮಿಥುನ:

ಇಂದಿನ ನಿಮ್ಮ ಇಚ್ಚಾಶಕ್ತಿಯನ್ನು ಎಲ್ಲರೂ ಪ್ರಶಂಸಿಸುವರು. ಮನೆಯಲ್ಲಿ ಮತ್ತು ಕಚೇರಿಯಲ್ಲಿನ ಸದಸ್ಯರುಗಳಲ್ಲಿ ಭರವಸೆಯನ್ನು ಮೂಡಿಸುವಿರಿ.

ಕಟಕ:

ಆತುರಗಾರನಿಗೆ ಬುದ್ಧಿಮಟ್ಟ ಎಂದರು ಹಿರಿಯರು. ಹಾಗಾಗಿ ಯಾವುದೇ ಕೆಲಸವನ್ನು ಮಾಡುವಾಗ ತರಾತುರಿ ತೋರದೆ ನಿಧಾನವಾಗಿ ಯೋಚಿಸಿ ಕಾರ್ಯ ಪ್ರವೃತ್ತರಾಗಿರಿ.

ಸಿಂಹ:

ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ನಿಮ್ಮ ಕಾರ್ಯವೈಖರಿ ಬಗ್ಗೆ ನಿಮಗೆ ಹೆಮ್ಮೆ ಎನಿಸುವುದು. ಆದರೆ ಅದನ್ನು ಪರರ ಮುಂದೆ ಹೇಳಿ ನಗೆಪಾಟಲಿಗೆ ಈಡಾಗದಿರಿ.

ಕನ್ಯಾ:

ಅನಿರೀಕ್ಷಿತ ಸುದ್ದಿಯೊಂದನ್ನು ನೀಡಿ ಸಹೋದ್ಯೋಗಿಗಳನ್ನು ಮಿತ್ರರನ್ನು ಅಚ್ಚರಿಯಲ್ಲಿ ಬೀಳಿಸುವಿರಿ. ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಕಂಡುಬರುವುದು.

ತುಲಾ:

ನಿಮ್ಮ ಸುತ್ತಮುತ್ತ ಧನಾತ್ಮಕ ವಾತಾವರಣ ಸೃಷ್ಠಿಸಿಕೊಳ್ಳುವಿರಿ. ತಂಡದಲ್ಲಿ ಸ್ಫೂರ್ತಿ ತುಂಬುವುದಲ್ಲದೆ ದೊಡ್ಡ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸುವಿರಿ.

ವೃಶ್ಚಿಕ:

ಮಹತ್ವದ ಸಭೆಗಳಲ್ಲಿ ಭಾಗಿಯಾಗುವಿರಿ. ನೀತಿ ನಿರೂಪಣೆಯಲ್ಲಿ ನಿಮ್ಮ ಅಭಿಪ್ರಾಯಕ್ಕೆ ಮನ್ನಣೆ ದೊರೆಯುವುದರಿಂದ ವೈಯಕ್ತಿಕವಾಗಿ ಸಂತೋಷ ಹೊಂದುವಿರಿ.

ಧನಸ್ಸು:

ಪ್ರಮುಖ ವ್ಯಕ್ತಿಯೊಬ್ಬರನ್ನು ಭೇಟಿ ಮಾಡುವ ಸಂದರ್ಭ. ಅದಕ್ಕಾಗಿ ತಕ್ಕ ಪೂರ್ವ ತಯಾರಿ ಮಾಡಿಕೊಳ್ಳುವುದು ಅನಿವಾರ್ಯ. ಭೇಟಿಯಿಂದ ಕಾರ್ಯ ಸಿದ್ಧಿಸುವುದು.

ಮಕರ:

ಅತಿಯಾದ ದುಡಿತ ನಿಮ್ಮ ಆರೋಗ್ಯದಲ್ಲಿ ವ್ಯತ್ಯಯವನ್ನುಂಟು ಮಾಡಬಹುದು. ಮಧ್ಯೆ ಬಿಡುವು ಮಾಡಿಕೊಳ್ಳುವುದು ಕ್ಷೇಮಕರ. ಪ್ರಯಾಣವನ್ನು ಮುಂದೂಡಿರಿ.

ಕುಂಭ:

ಚಿನ್ನ, ಬೆಳ್ಳಿ ಮುಂತಾದ ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಇಲ್ಲವೇ ಬಂಗಾರದ ಮೇಲೆ ಮಾಸಿಕ ಕಂತಿನಂತೆ ಹಣ ತುಂಬಲು ಆರಂಭಿಸುವಿರಿ.

ಮೀನ:

Meena1

ಏಕಾಏಕಿ ಮುನ್ನುಗ್ಗುವ ಧಾವಂತ ಬೇಡ. ಪರಿಸ್ಥಿತಿಯನ್ನು ಅವಲೋಕಿಸಿ ಹೆಜ್ಜೆ ಇಟ್ಟರೆ ಸುಲಭವಾಗಿ ಕಾರ್ಯ ಸಾಧಿಸುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!