ದಿನ ಭವಿಷ್ಯ: 01 ಅಕ್ಟೋಬರ್, 2020!!

0
1592

Astrology in kannada | kannada news ದಿನ ಭವಿಷ್ಯ: 01 ಅಕ್ಟೋಬರ್, 2020!!

ದಿನ ಭವಿಷ್ಯ: 01 ಅಕ್ಟೋಬರ್, 2020!!

ಮೇಷ:

ದಿನ ಭವಿಷ್ಯ

ಮೇಷ:- ವೃಥಾ ಸುಮ್ಮನೆ ಬರುವ ಆಲೋಚನೆಗಳಿ ತಲೆಕೆಡಿಸಿಕೊಳ್ಳದಿರಿ. ಅಧಿಕಾರದಲ್ಲಿದ್ದಾಗ ನಿಮ್ಮ ಸುತ್ತಲಿದ್ದ ಜನರು ಈಗ ಹಿಂದೆ ಸರಿಯುವರು. ಆದರೆ ನೀವು ಪಾರದರ್ಶಕತೆಯಿಂದ ನಡೆಸಿದ ವ್ಯವಹಾರ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವುದು.

ವೃಷಭ:

ದಿನ ಭವಿಷ್ಯ

ವೃಷಭ:- ‘ಮಾತೇ ಮುತ್ತು ಮಾತೇ ಶತ್ರು’ ಎಂಬಂತೆ ಅತಿಯಾದ ಭಾವುಕತೆಯಿಂದ ಕೂಡಿರುವ ಸಣ್ಣ ವಿಷಯವನ್ನು ಗೌಪ್ಯವಾಗಿಡುವಲ್ಲಿ ಸೋಲುವಿರಿ. ಇದರಿಂದ ನಿಮ್ಮ ಮೇಲಿನ ಗೌರವಕ್ಕೆ ಕುಂದುಂಟಾಗುವುದು. ಆದಷ್ಟು ತಾಳ್ಮೆಯಿಂದ ವ್ಯವಹರಿಸಿ.

ಮಿಥುನ:

ದಿನ ಭವಿಷ್ಯ

ಮಿಥುನ:- ಸರ್ವ ರಕ್ಷ ಕನಾದ ಈಶ್ವರ ದೇವರನ್ನು ಅನನ್ಯ ಭಜಿಸಿ. ಭಗವಂತನು ಒಲಿದರೆ ಮತ್ಯಾರ ಮರ್ಜಿಯನ್ನು ಹಿಡಿಯುವ ಅವಕಾಶವಿಲ್ಲ. ಸಂಜೆ ಕಾಲದ ಪ್ರದೋಷ ಪೂಜೆಯನ್ನು ತಪ್ಪದೆ ಮಾಡಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಆಕಾಶಕ್ಕೆ ಏಣಿ ಹಾಕುವ ನಿಮ್ಮ ಮನಸ್ಸು ನಿಜ ಜೀವನದ ಆಗು ಹೋಗುಗಳ ಕಡೆ ನಿರ್ಲಕ್ಷ ್ಯ ವಹಿಸುವುದರಿಂದ ಬರಬೇಕಾದ ಲಾಭಾದಲ್ಲಿ ಕಡಿಮೆ ಆಗುವುದು. ಮನೆಗೆದ್ದು ಮಾರುಗೆಲ್ಲು ಎಂದರು ಹಿರಿಯರು ಹಾಗಾಗಿ ಸಾವಧಾನ ಇರಲಿ.

ಸಿಂಹ:

ದಿನ ಭವಿಷ್ಯ

ಸಿಂಹ:- ಯಾರೇ ಕೂಗಾಡಲಿ ಊರೇ ಹೋರಾಡಲಿ ನನ್ನ ನೆಮ್ಮದಿಗೆ ಭಂಗವಿಲ್ಲ ಎನ್ನುವ ಮನೋಭೂಮಿಕೆ ಇರುವ ನೀವು ಕೆಲವೊಂದನ್ನು ತಿರಸ್ಕರಿಸುವಿರಿ. ಇದರಿಂದ ಎದುರಾಳಿಗಳಿಗೆ ಭಯವುಂಟಾಗುವುದು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಮಕ್ಕಳೇ ಮಾಣಿಕ್ಯ ಅವರು ನಿಮ್ಮ ಕಷ್ಟಕಾಲಕ್ಕೆ ನೆರವಾಗುವರು ಎಂಬ ಭ್ರಮೆಯಲ್ಲಿದ್ದೀರಿ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಂತಹ ಘಟನೆಗಳು ಜರುಗುವ ಸಾಧ್ಯತೆ ಕಡಿಮೆ. ನಿಮ್ಮ ದುಡಿಮೆಯಲ್ಲಿ ನಂಬಿಕೆ ಇಡಿ. ಒಳಿತಾಗುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಮನುಜ ಸಂಘ ಜೀವಿ, ಪ್ರತಿನಿತ್ಯ ಒಂದಲ್ಲ ಒಂದು ಕಾರಣಕ್ಕೆ ಪರರ ಸಲಹೆ ಸಹಕಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಂತಹ ಸಂದರ್ಭವನ್ನು ಎದುರಿಸುವ ನೀವು ಪರರ ಸಲಹೆ ಆಲಿಸುವುದು ಒಳ್ಳೆಯದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಎಡವಿದ ಕಾಲಿಗೆ ಪುನಃ ಪೆಟ್ಟಾಗುವಂತೆ ನೊಂದಿರುವ ಜೀವಕ್ಕೆ ಮತ್ತೊಂದು ಆತಂಕದ ಸುದ್ದಿ ಎದುರಾಗುವುದು. ಯಾವುದಕ್ಕೂ ಚಿಂತಿಸದೆ ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂದು ಭಗವಂತನನ್ನು ಪ್ರಾರ್ಥಿಸಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಕಣ್ಣಿಗೆ ಕಂಡರೂ ಪರಾಮರ್ಶಿಸದೆ ನಿರ್ಣಯ ತಳೆಯಬೇಡಿ. ನಿಮ್ಮ ಮಾತಿಗೆ ಸಮಾಜದಲ್ಲಿ ಬೆಲೆ ಇರುತ್ತದೆ. ಅಲ್ಲದೆ ಸದ್ಯಕ್ಕೆ ನಿಮಗೆ ಗುರುವಿನ ಬಲ ಇರುವುದರಿಂದ ಹೆಚ್ಚು ಚಿಂತಿಸುವ ಅಗತ್ಯವಿಲ್ಲ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಅನೇಕ ಅನಿರೀಕ್ಷಿತ ಘಟನೆಗಳು ನಿಮ್ಮನ್ನು ಗೊಂದಲಕ್ಕೆ ತಳ್ಳುವ ಸಾಧ್ಯತೆ ಇದೆ. ವಿವೇಕತನದಿಂದ ಕಾರ್ಯ ನಿರ್ವಹಿಸಿ. ಭಗವಂತನು ನಿಮ್ಮ ಕಾರ್ಯಕ್ಕೆ ಸಹಾಯ ಹಸ್ತ ನೀಡುವರು.

ಕುಂಭ:

ದಿನ ಭವಿಷ್ಯ

ಕುಂಭ:- ಪ್ರತಿಯೊಂದು ಕಾರ್ಯದಲ್ಲೂ ವಿಳಂಬ ಉಂಟಾಗುತ್ತಿರುವುದು ನಿಮ್ಮ ಗಮನಕ್ಕೆ ಬಂದಿರುತ್ತದೆ. ವಿಷ್ಣುಸಹಸ್ರನಾಮ ಪಾರಾಯಣದಿಂದ ಒಳಿತಾಗುವುದು. ಕೆಲಕಾಲ ಉದ್ಯೋಗಕ್ಕೆ ರಜೆ ಹಾಕಿ ಸ್ನೇಹಿತರೊಂದಿಗೆ ಬೆರೆಯಿರಿ.

ಮೀನ:

ದಿನ ಭವಿಷ್ಯ

ಮೀನ:- ನೀವು ಯಾರೊಂದಿಗೂ ಬೆರೆಯದೆ ನೀವಾಯಿತು ನಿಮ್ಮ ಕಾರ್ಯವಾಯಿತು ಎಂದು ಸುಮ್ಮನಿರುವಿರಿ. ಆದರೆ ಎದುರಾಳಿಗಳು ನಿಮ್ಮನ್ನು ಸುಖಾಸುಮ್ಮನೆ ಕೆಣಕುವರು. ಅವರಿಗೆ ಸರಿಯಾದ ಬುದ್ಧಿ ಕಲಿಸುವಿರಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 01 ಅಕ್ಟೋಬರ್, 2020!!