ದಿನ ಭವಿಷ್ಯ: 06 ನವೆಂಬರ್, 2020!!

0
1208

Astrology in kannada | kannada news ದಿನ ಭವಿಷ್ಯ: 06 ನವೆಂಬರ್, 2020!!

ದಿನ ಭವಿಷ್ಯ: 06 ನವೆಂಬರ್, 2020!!

ಮೇಷ:

ದಿನ ಭವಿಷ್ಯ

ಮೇಷ:- ಈದಿನ ಕೆಲಸ ಕಾರ್ಯಗಳಲ್ಲಿ ಅಲ್ಪ ಹಿನ್ನಡೆಯನ್ನು ಕಾಣಬೇಕಾಗುವುದು. ನೆಚ್ಚಿನ ಸ್ನೇಹಿತರೇ ನಿಮ್ಮನ್ನು ದೂರುವರು. ಮನಸ್ಸಿನಲ್ಲಿ ಒಂದು ರೀತಿಯ ಅವ್ಯಕ್ತ ಭಯ ಕಾಡುವುದು. ಲಕ್ಷ್ಮೀನಾರಸಿಂಹ ದೇವರನ್ನು ಪ್ರಾರ್ಥನೆ ಮಾಡಿರಿ.

ವೃಷಭ:

ದಿನ ಭವಿಷ್ಯ

ವೃಷಭ:- ಕುಟುಂಬದಲ್ಲಿ ನೆಮ್ಮದಿಯ ವಾತಾವರಣವನ್ನು ಕಲ್ಪಿಸುವುದು ನಿಮ್ಮ ವಿಚಾರಧಾರೆಯ ಮೇಲೆ ನಿಂತಿರುವುದು. ಎಲ್ಲ ಕೆಲಸಗಳನ್ನು ಸಂಶಯ ದೃಷ್ಟಿಯಿಂದ ನೋಡುವುದನ್ನು ಬಿಡಿ, ಒಳಿತಾಗುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ದೇಹಾರೋಗ್ಯ ಉತ್ತಮವಾಗಿರುವುದು. ಭೋಜನ ಸುಖ, ಮಿತ್ರರೊಡನೆ ಸೌಹಾರ್ದಯುತ ವಾತಾವರಣ. ಸಂಗಾತಿಯೊಂದಿಗೆ ಉತ್ತಮ ಮಧುರ ಕ್ಷ ಣಗಳನ್ನು ಕಳೆಯುವಿರಿ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಪ್ರೀತಿ ಪಾತ್ರರೊಂದಿಗಿನ ಭಿನ್ನಾಭಿಪ್ರಾಯ ಕಡಿಮೆ ಆಗುವುದು. ಆರ್ಥಿಕ ಪರಿಸ್ಥಿತಿಯಲ್ಲಿ ನಿರೀಕ್ಷೆ ಮೀರಿ ಉತ್ತಮ ಫಲಿತಾಂಶವನ್ನು ಹೊಂದುವಿರಿ. ಹಳೆಯ ಸ್ನೇಹಿತರ ಆಗಮನದಿಂದ ಗತಿಸಿಹೋದ ಮಧುರ ಕ್ಷ ಣಗಳನ್ನು ಮೆಲುಕು ಹಾಕುವಿರಿ.

ಸಿಂಹ:

ದಿನ ಭವಿಷ್ಯ

ಸಿಂಹ:- ಕಾರ್ಯ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಸೌಹಾರ್ದಯುತವಾಗಿ ವ್ಯವಹರಿಸಿ. ದೂರದಿಂದ ಬರುವ ಅಶುಭ ವಾರ್ತೆಯು ಮನಸ್ಸಿನ ಮೇಲೆ ಪರಿಣಾಮ ಬೀರುವುದು. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ಅಸಹಕಾರ ತೋರುವರು. ಕುಲದೇವತಾ ಪ್ರಾರ್ಥನೆ ಮಾಡಿರಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಎಷ್ಟೇ ಕಾರ್ಯದಕ್ಷ ತೆಯಿಂದ ಕರ್ತವ್ಯ ನಿರ್ವಹಿಸಿದರೂ ಟೀಕೆಗೆ ಒಳಗಾಗುವಿರಿ. ಇದರಿಂದ ಬೇಸರ ಮಾಡಿಕೊಳ್ಳದಿರಿ. ನಡೆಯುವ ಮನುಷ್ಯ ಎಡವುವನೇ ಹೊರತು ಕುಳಿತ ವ್ಯಕ್ತಿಯಲ್ಲ. ಇಂದಿನ ಹಿನ್ನಡೆಯು ಮುಂದಿನ ಯಶಸ್ಸಿಗೆ ಮುನ್ನುಡಿ ಆಗುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಸುಲಲಿತ ಸಾಮಾಜಿಕ ಬಾಂಧವ್ಯವನ್ನು ಸವಿಯುವತ್ತ ಗಮನ ನೀಡುವಿರಿ. ಉದ್ಯೋಗಿಗಳಿಗೆ ಕೆಲಸದ ಒತ್ತಡವಿದ್ದು, ಕೆಲಸ ಕಾರ್ಯದಲ್ಲಿ ತಪ್ಪುಗಳು ನುಸುಳುವ ಸಾಧ್ಯತೆ ಇರುವುದು. ಯಾವುದಕ್ಕೂ ತಲೆಕೆಡಿಸಿಕೊಳ್ಳದಿರಿ. ವಿಷ್ಣುವಿನ ಆರಾಧನೆ ಮಾಡಿರಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ದೂರದ ಬಂಧುಗಳಿಂದ ಅಶುಭವಾರ್ತೆಯನ್ನು ಕೇಳುವಿರಿ. ಇದರಿಂದ ಮನಸ್ಸು ಖಿನ್ನತೆಯನ್ನು ಅನುಭವಿಸುವುದು. ಇಲ್ಲವೇ ವಿನಾಕಾರಣ ನೀವು ಮಾಡದೆ ಇರುವ ತಪ್ಪಿಗೆ ಅಪವಾದವನ್ನು ಕೇಳುವಿರಿ. ಆಂಜನೇಯ ಸ್ತೋತ್ರ ಪಠಿಸಿರಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ವ್ಯಾಪಾರ ವ್ಯವಹಾರಗಳಲ್ಲಿ ದಿಢೀರನೆ ಲಾಭಾಂಶ ಕಡಿಮೆ ತೋರುವುದು. ನಿಮ್ಮ ಕೈ ಕೆಳಗಿನ ಕೆಲಸಗಾರರ ಅಸಹಕಾರವನ್ನು ಎದುರಿಸಬೇಕಾಗುವುದು. ದಶರಥ ಕೃತ ಶನಿ ಸ್ತೋತ್ರವನ್ನು ಪಠಿಸಿರಿ. ಇಲ್ಲವೇ ಲಕ್ಷ್ಮಿ ಸ್ತೋತ್ರ ಪಠಿಸಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಆಪತ್ಕಾಲದಲ್ಲಿ ಸಹಾಯ ಪಡೆದಿದ್ದ ಸ್ನೇಹಿತರೇ ಶತ್ರುಗಳಾಗುವರು. ನಿಮ್ಮ ಸಮಯಕ್ಕೆ ಯಾರೂ ಸಹಾಯ ಮಾಡುವುದಿಲ್ಲ. ಹಾಗಾಗಿ ಇಂದು ಮಾಡಬೇಕೆಂದಿದ್ದ ಕೆಲಸಗಳು ಮಂದ ಪ್ರಗತಿಯಲ್ಲಿ ಸಾಗುವುದು. ಗುರುವಿನ ಸ್ತೋತ್ರ ಪಠಿಸಿರಿ.

ಕುಂಭ:

ದಿನ ಭವಿಷ್ಯ

ಕುಂಭ:- ನಿಮ್ಮ ಕಾರ್ಯಯೋಜನೆಗಳು ಪೂರ್ಣಗೊಳ್ಳುವವು. ನೀವು ಅಂದುಕೊಂಡಿದ್ದನ್ನು ಸಾಧಿಸುವಿರಿ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿದ್ದು, ನಿಮ್ಮ ಗೌರವ ಸಂಭಾವನೆ ಹೆಚ್ಚಾಗುವ ಸಾಧ್ಯತೆ ಇರುವುದು.

ಮೀನ:

ದಿನ ಭವಿಷ್ಯ

ಮೀನ:- ವ್ಯಾಪಾರ, ವ್ಯವಹಾರಗಳಲ್ಲಿ ಅಧಿಕ ಲಾಭಾಂಶ ಕಂಡುಬರುವುದು. ಯಾವುದೇ ವ್ಯವಹಾರಕ್ಕೆ ಕೈ ಹಾಕಿದರೂ ಅಧಿಕ ಲಾಭವುಂಟಾಗಿ ಜೀವನ ಸಮಾಧಾನಕರ ಘಟ್ಟವನ್ನು ತಲುಪುತ್ತದೆ. ಕೌಟುಂಬಿಕವಾಗಿ ಸಂತೋಷ ದಿನವಾಗಿರುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 06 ನವೆಂಬರ್, 2020!!