ದಿನ ಭವಿಷ್ಯ: 11 ಸೆಪ್ಟೆಂಬರ್, 2018!!

0
583
ದಿನ ಭವಿಷ್ಯ

Astrology in kannada | kannada news

ದಿನ ಭವಿಷ್ಯ: 11 ಸೆಪ್ಟೆಂಬರ್, 2018!!

ಮೇಷ:

ದಿನ ಭವಿಷ್ಯ

ಮೇಷರಾಶಿ:- ನಿಮ್ಮ ಸುತ್ತಮುತ್ತ ಇರುವವರ ಬಗ್ಗೆ ಕೊಂಚ ಗಮನವಿರಲಿ. ದ್ವಿಚಕ್ರವಾಹನದಲ್ಲಿ ಸಂಚರಿಸುವಾಗ ಎಚ್ಚರಿಕೆ ಇರಲಿ. ಎಚ್ಚರಿಕೆ ತಪ್ಪಿದರೆ ಅಂಗ ಊನ ಆಗುವ ಸಾಧ್ಯತೆ ಇರುತ್ತದೆ. ಆಂಜನೇಯ ಸ್ತೋತ್ರ ಪಠಿಸಿ.

ವೃಷಭ:

ದಿನ ಭವಿಷ್ಯ

ವೃಷಭ:- ಯಾರೂ ಯೋಚಿಸದೇ ಇರುವುದನ್ನು ಮಾಡುವುದೇ ನಿಮ್ಮ ಜಾಯಮಾನ. ಹಾಗಾಗಿ ಅದರಲ್ಲಿನ ಯಶಸ್ಸನ್ನು ಕಂಡು ಇತರರು ಅಸೂಯೆ ಪಡುವರು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದ್ದು ಮಕ್ಕಳು ವಿಧೇಯತೆಯನ್ನು ಪ್ರದರ್ಶಿಸುವರು.

ಮಿಥುನ:

ದಿನ ಭವಿಷ್ಯ

ಮಿಥುನ:- ಹಿಡಿದ ಕೆಲಸವನ್ನು ಬೇಗನೆ ಮುಗಿಸುವಿರಿ. ನೂತನ ವಾಹನ/ಆಸ್ತಿ ಖರೀದಿ ವಿಚಾರ ಮಾಡುವುದರಿಂದ ಸದ್ಯಕ್ಕೆ ಆಗದೇ ಹೋಗುವ ಸಾಧ್ಯತೆ ಇದೆ. ಕುಲದೇವತಾ ಪ್ರಾರ್ಥನೆ ಮಾಡಿ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಬಹುದಿನಗಳ ಕನಸೊಂದು ಸಾಕಾರವಾಗುವ ಸಮಯ. ವೃತ್ತಿಯಲ್ಲಿ ವಿಶೇಷ ಗೌರವ ಪ್ರಾಪ್ತಿ. ಗಣ್ಯರ ಒಡನಾಟದಿಂದ ಹರ್ಷ ಉಂಟಾಗುವುದು. ಪರಾಕ್ರಮ ಕೆಲಸಗಳಲ್ಲಿ ಯಶಸ್ಸು ದೊರೆಯುವುದು.

ಸಿಂಹ:

ದಿನ ಭವಿಷ್ಯ

ಸಿಂಹ:- ಪೊರೆ ಕಳಚಿದ ಹಾವಿನಂತೆ ಹೊಸ ಉತ್ಸಾಹದಿಂದ ಕೆಲಸ ಕಾರ್ಯಗಳನ್ನು ಪೂರೈಸಿಕೊಳ್ಳುವಿರಿ. ದೈವಕೃಪೆಯಿಂದ ವಿವಿಧ ಮೂಲಗಳಿಂದ ಹಣ ಬರುವುದು. ನಿಮ್ಮ ಮಾತಿನ ವರಸೆಯನ್ನು ವಿರೋಧಿಗಳು ಒಪ್ಪುವರು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಿ. ಈದಿನ ಮಿಶ್ರಫಲವನ್ನು ಅನುಭವಿಸುವಿರಿ. ಸಾಮಾಜಿಕವಾಗಿಯೂ, ಸಾಂಸ್ಕೃತಿಕ ವಿಚಾರವಾಗಿಯೂ ಹೆಚ್ಚಿನ ಗೌರವ ಹೊಂದುವಿರಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಅತಿಯಾದ ಆತ್ಮವಿಶ್ವಾಸ ನಿಮ್ಮನ್ನು ಅವಮಾನಗೊಳಿಸುವ ಸಾಧ್ಯತೆ ಇರುತ್ತದೆ. ವ್ಯವಹಾರದ ವಿಷಯದಲ್ಲಿ ಕಟ್ಟುನಿಟ್ಟಿನ ನಿರ್ಧಾರ ತಳೆಯಿರಿ. ಹಮ್ಮಿಕೊಂಡ ಉತ್ತಮ ಕಾರ್ಯಗಳು ಗುರು-ಹಿರಿಯರ ಆಶೀರ್ವಾದದಿಂದ ಶುಭವಾಗುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಸರಿಯಾದ ನಿರ್ಣಯದಿಂದ ಮಾತ್ರ ಬದುಕು ತಹಬಂದಿಗೆ ಬರಲು ಸಾಧ್ಯ. ಇಲ್ಲವಾದಲ್ಲಿ ಭವಿಷ್ಯದ ಚಿಂತೆ ವರ್ತಮಾನವನ್ನು ಹಾಳು ಮಾಡುವುದು. ಯಾರದೋ ಪಿತೂರಿಯಿಂದಾಗಿ ಮೇಲಧಿಕಾರಿಗಳ ಕೋಪಕ್ಕೆ ಒಳಗಾಗಬೇಕಾಗುವುದು.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಅತಿಯಾದ ಸಂಕೋಚದ ಸ್ವಭಾವದಿಂದಾಗಿ ಕೆಲಸ ಕಾರ್ಯಗಳಲ್ಲಿ ಭಾರಿ ಹಿನ್ನಡೆ ಆಗುವುದು. ಪಾಲುದಾರರಿಂದಲೇ ಮೋಸ ಹೋಗುವ ಸಾಧ್ಯತೆ. ಹಣಕಾಸಿನ ವಿಷಯದಲ್ಲಿ ಬಿಗಿಹಿಡಿತ ಇರಲಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಇಂದು ಕೆಲವು ಯೋಜನೆಗಳನ್ನು ಹಮ್ಮಿಕೊಳ್ಳುವಿರಿ. ಸಂಗಾತಿ ಮತ್ತು ಮಕ್ಕಳೊಂದಿಗೆ ಪ್ರವಾಸ ಹೋಗುವ ಚಿಂತನೆ ನಡೆಸುವಿರಿ. ಇದರಿಂದ ಮಾನಸಿಕ ಕ್ಷೋಭೆ ಕಡಿಮೆ ಆಗುವುದು.

ಕುಂಭ:

ದಿನ ಭವಿಷ್ಯ

ಕುಂಭ:- ಸರಕಾರದಿಂದ ಬರಬೇಕಾಗಿದ್ದ ಸೌಲಭ್ಯಗಳು ಸಕಾಲದಲ್ಲಿ ಬರುವುದು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಯಶಸ್ಸು ಕಾಣುವರು. ಅಡ್ಡಾದಿಡ್ಡಿಯಾಗಿದ್ದ ಕೆಲಸವು ಈದಿನ ಸರಿದಾರಿಗೆ ಬರುವುದು.

ಮೀನ:

ದಿನ ಭವಿಷ್ಯ

ಮೀನ:- ಮನೆಯ ಹಿರಿಯರ ಅನಾರೋಗ್ಯ ಸಲುವಾಗಿ ಆಸ್ಪತ್ರೆ ಖರ್ಚು ಬರುವ ಸಂಭವ. ಕೌಟುಂಬಿಕ ಜೀವನ ಉತ್ತಮ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಹಳೆಯ ಸಂಬಂಧಗಳು ಪುನಃ ಸೇರ್ಪಡೆ ಆಗುವ ಸಾಧ್ಯತೆ ಇರುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 11 ಸೆಪ್ಟೆಂಬರ್, 2018!!