ದಿನ-ಭವಿಷ್ಯ: 14 ಮಾರ್ಚ್, 2019!!

0
551

Astrology in kannada | kannada news ದಿನ-ಭವಿಷ್ಯ: 14 ಮಾರ್ಚ್, 2019!!

ದಿನ-ಭವಿಷ್ಯ: 14 ಮಾರ್ಚ್, 2019!!

ಮೇಷ:

ದಿನ ಭವಿಷ್ಯ

ಮೇಷ:- ಮತ್ತೊಬ್ಬರ ನೆರವನ್ನು ನೆಚ್ಚಿಕೊಂಡು ಹೆಚ್ಚಿನ ಜವಾಬ್ದಾರಿ ಹೊರುವ ಹುಚ್ಚು ಸಾಹಸಕ್ಕೆ ಕೈ ಹಾಕಬೇಡಿ. ಇದರಿಂದ ಧನ, ಮಾನ ಅಥವಾ ಎರಡಕ್ಕೂ ಹಾನಿಯಾಗುವ ಸಂಭವವಿದೆ. ಪಾಲುಗಾರಿಕೆ ವ್ಯವಹಾರ ಅಷ್ಟು ಲಾಭದಾಯಕವಲ್ಲ.

ವೃಷಭ:

ದಿನ ಭವಿಷ್ಯ

ವೃಷಭ:- ವೃತ್ತಿಯಲ್ಲಿ ಅನೇಕ ಗೊಂದಲಗಳು ಮೂಡಿ ಬರಲಿದ್ದು ಅದನ್ನು ಶಾಂತ ಚಿತ್ತದಿಂದ ನಿಭಾಯಿಸಿರಿ. ಬಾಲ್ಯ ಸ್ನೇಹಿತರ ಭೇಟಿಯು ಮನಸ್ಸಿಗೆ ಮುದ ನೀಡುವುದು. ಮಕ್ಕಳ ವಿದ್ಯಾಭ್ಯಾಸ ತೃಪ್ತಿ ತರಲಿದೆ. ದೈವಾನುಗ್ರಹ ವಿಶೇಷವಾಗಿ ನಿಮ್ಮ ಮೇಲೆ ಇಲ್ಲದ ಕಾರಣ ಹೆಚ್ಚು ಶ್ರಮಪಡಬೇಕಾಗುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ಇಲ್ಲಿ ನಿಮ್ಮ ಜಾಣ್ಮೆ, ಶ್ರಮ ಮತ್ತು ಸಮಯ ಪ್ರಜ್ಞೆ ಕಾರಣವಾಗುವವು. ಬಂಧುಗಳೊಂದಿಗಿದ್ದ ಭಿನ್ನಾಭಿಪ್ರಾಯ ದೂರವಾಗಿ ಬಾಂಧವ್ಯ ವೃದ್ಧಿಸಲಿದೆ. ಮಕ್ಕಳ ಸಮಸ್ಯೆಗೂ ಒಂದು ಪರಿಹಾರ ಸೂತ್ರವನ್ನು ತೋರುವಿರಿ. ಅವರಿವರಾಡುವ ಮಾತುಗಳನ್ನು ಆಲಿಸಿ ನಿಮ್ಮ ಅಭಿಪ್ರಾಯವನ್ನು ತಿಳಿಸಿರಿ. ಹಿರಿಯರ ಸಲಹೆ ಪ್ರಯೋಜನಕ್ಕೆ ಬರುವುದು. ಕುಲದೇವತಾ ಪ್ರಾರ್ಥನೆ ಮಾಡಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಅರ್ಥವಿಲ್ಲದ ಅಥವಾ ವ್ಯರ್ಥವಾದ ತಿರುಗಾಟದಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಆಹಾರ ವಿಷಯದಲ್ಲಿ ಅಲಕ್ಷೆ ಮಾಡಿದ್ದಲ್ಲಿ ಉದರ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳುವುದು. ಹಲವು ಜವಾಬ್ದಾರಿಗಳನ್ನು ಮಕ್ಕಳಿಗೆ ವಹಿಸುವುದರಿಂದ ದೈಹಿಕ ಹಾಗೂ ಬೌದ್ಧಿಕ ಶ್ರಮ ಕಡಿಮೆಯಾಗುವುದು.

ಸಿಂಹ:

ದಿನ ಭವಿಷ್ಯ

ಸಿಂಹ:- ಮನೆಯ ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ಆಗಾಗ ವೈದ್ಯಕೀಯ ತಪಾಸಣೆ ಮಾಡಿಸುವುದು ಎಲ್ಲಾ ರೀತಿಯಿಂದಲೂ ಕ್ಷೇಮಕರ. ನೌಕರಿ ಸದ್ಯಕ್ಕೆ ಬದಲಾವಣೆ ಬೇಡ. ಯಾರು ಎಷ್ಟೇ ಹೇಳಿದರೂ ಅವರ ಮಾತಿಗೆ ಕಿವಿಗೊಡದ ನೀವು ಕೆಲವು ವಿಷಯಗಳನ್ನು ಕಾಲ ಮಿಂಚಿದ ಮೇಲೆ ಅರಿಯುವಿರಿ. ಮತ್ತೊಬ್ಬರೊಂದಿಗೆ ಮಾಡುವ ಕುತರ್ಕ, ವಿತಂಡ ವಾದಗಳಿಂದ ಅಪಖ್ಯಾತಿ ಪಡೆಯುವಿರಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ದೂರ ಪ್ರಯಾಣ ಒಳ್ಳೆಯದಲ್ಲ. ಪ್ರೇಮಿಗಳು ಭಾವೋದ್ವೇಗಕ್ಕೆ ಒಳಗಾಗುವುದರಿಂದ ತೊಂದರೆ ಅನುಭವಿಸಬೇಕಾಗುವುದು. ಗುರುವಿಲ್ಲದ ಗುರಿ ಅಡ್ಡದಾರಿ ಹಿಡಿಯುವುದು. ಯಾವುದೇ ಕಾರ್ಯ ಮಾಡುವ ಮುನ್ನ ಗುರುವಿನ ಆಶೀರ್ವಾದ ಪಡೆಯಿರಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಜೀವನದಲ್ಲಿ ಏನನ್ನಾದರೂ ಸಾಧಿಸಿಯೇ ತೀರಬೇಕೆಂಬ ನಿಮ್ಮ ಹಂಬಲಕ್ಕೆ ಬೆಂಬಲ ಸಿಗಲಿದೆ. ಇದರಿಂದ ನಿಮ್ಮ ಆತ್ಮಸ್ಥೈರ್ಯ ಹೆಚ್ಚಲಿದೆ. ಪ್ರತಿಯೊಂದು ಕೆಲಸದಲ್ಲೂ ಮುನ್ನುಗ್ಗುವಿರಿ. ನೀವಾಡಲಿರುವ ಮಾತುಗಳಿಗೆ ಒಂದು ಬೆಲೆ ಬರುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಮಾತಿನ ಮೋಡಿಯಿಂದ ಎಲ್ಲರನ್ನು ಕಟ್ಟಿ ಹಾಕುವ ಕಲೆ ಕರಗತವಾಗಲಿದೆ. ಅವೇಳೆಯಲ್ಲಿ, ಕಂಡ ಕಂಡಲ್ಲಿ, ಇತಿಮಿತಿಗಳ ಪರಿವೆಯಿಲ್ಲದ ಆಹಾರ ಸೇವನೆ ನಿಮ್ಮ ಆರೋಗ್ಯಕ್ಕೆ ತೊಂದರೆ ಉಂಟು ಮಾಡುವುದು. ಈ ವಿಷಯದಲ್ಲಿ ಎಚ್ಚರದಿಂದಿರಿ.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ನಿಮ್ಮ ಪ್ರತಿಭೆ, ಶ್ರಮ ಮೊದಲಾದವುಗಳಿಂದ ಯಶಸ್ಸಿನ ಮೆಟ್ಟಿಲನ್ನು ಏರುತ್ತಿರುವ ನಿಮಗೆ ಅವರಿವರಿಂದ ಕುಹಕದ ಮಾತುಗಳು ಕೇಳಿ ಬರುವ ಸಾಧ್ಯತೆ ಇದೆ. ಬುದ್ಧಿವಂತರಾದ ನೀವು ಅದಕ್ಕೆ ಪ್ರಾಮುಖ್ಯತೆ ಕೊಡದೆ ನಿಮ್ಮ ಪಾಡಿಗೆ ನೀವಿರುವುದು ಉತ್ತಮ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ವಿದ್ಯಾರ್ಥಿಗಳು ಅಥವಾ ಉದ್ಯೋಗಾಕಾಂಕ್ಷಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಇದು ಸರಿಯಾದ ಸಮಯ. ಆದರೆ ಇದಕ್ಕೆ ಪೂರ್ವ ಸಿದ್ಧತೆ ಮಾತ್ರ ಚೆನ್ನಾಗಿರಲಿ. ಹಿರಿಯರ ಅನುಭವದ ಮಾತು, ಸಲಹೆಗಳು ನಿಮಗೆ ಉಪಯೋಗಕ್ಕೆ ಬರುವುದು.

ಕುಂಭ:

ದಿನ ಭವಿಷ್ಯ

ಕುಂಭ:- ಬಹು ಯೋಜನೆಗಳನ್ನು ಪೂರ್ವಾಪರವಿಲ್ಲದೆ ಅಪರಿಮಿತವಾಗಿ ಹಣಕಾಸಿನ ವ್ಯವಸ್ಥೆ ಇಲ್ಲದೆ ಹಮ್ಮಿಕೊಂಡ ಫಲವಾಗಿ ಯೋಜನೆಗಳು ಶೂನ್ಯ ಫಲಿತಾಂಶ ನೀಡುವವು. ಭರವಸೆ ಕೊಟ್ಟ ಜನರಿಂದಲೇ ನಕಾರಾತ್ಮಕ ಪ್ರತಿಕ್ರಿಯೆ ಬರುವುದು.

ಮೀನ:

ದಿನ ಭವಿಷ್ಯ

ಮೀನ:- ಹಮ್ಮಿಕೊಂಡ ಹೊಸ ಯೋಜನೆಗಳಿಗೆ ಸರ್ಕಾರದಿಂದ ಹಾಗೂ ಆರ್ಥಿಕ ವಲಯಗಳಿಂದ ನಿರೀಕ್ಷಿತ ಫಲ ಸಿಗುವುದಿಲ್ಲ. ಈ ವಿಷಯದಲ್ಲಿ ಮಧ್ಯವರ್ತಿಗಳ ಬಗ್ಗೆ ಎಚ್ಚರದಿಂದಿರಿ ಹಾಗೂ ದೊರೆಯಲಿರುವ ಸಹಾಯ ಸದುಪಯೋಗವಾಗುವಂತೆ ನೋಡಿಕೊಳ್ಳಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ-ಭವಿಷ್ಯ: 14 ಮಾರ್ಚ್, 2019!!