ದಿನ ಭವಿಷ್ಯ: 19 ನವೆಂಬರ್, 2020!!

0
1036

Astrology in kannada | kannada news ದಿನ ಭವಿಷ್ಯ: 19 ನವೆಂಬರ್, 2020!!

ದಿನ ಭವಿಷ್ಯ: 19 ನವೆಂಬರ್, 2020!!

ಮೇಷ:

ದಿನ ಭವಿಷ್ಯ

ಮೇಷ:- ವ್ಯಾಪಾರವನ್ನು ದ್ರೋಹಚಿಂತನಂ ಎನ್ನುವಂತೆ ಈ ದಿನ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ದ್ರೋಹವನ್ನು ಮಾಡದಿರಿ. ಕಬ್ಬಿಣಕ್ಕೆ ಸಂಬಂಧಪಟ್ಟ ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಿ. ಕೆಲಸ ಕಳೆದಕೊಳ್ಳುವ ಭೀತಿ. ಭಿಕ್ಷುಕರಿಗೆ ಚಿತ್ರಾನ್ನ ದಾನ ಕೊಡಿರಿ.

ವೃಷಭ:

ದಿನ ಭವಿಷ್ಯ

ವೃಷಭ:- ದೂರದ ಬಂಧುಗಳಿಂದ ನಿಮಗೆ ಅಸಮಾಧಾನವುಂಟಾಗುವುದು. ಆದರೆ ಬೇರೆ ಸಹೋದ್ಯೋಗಿಗಳಿಂದ ಮತ್ತು ಬಂಧುಗಳಿಂದ ದೊರೆತ ಸಲಹೆ-ಸಹಕಾರಗಳಿಂದ ಅನುಕೂಲವಾಗುವುದು. ಯಾವುದೇ ವಿಷಯವನ್ನು ಬಹಿರಂಗವಾಗಿ ಚರ್ಚೆ ಮಾಡದಿರಿ.

ಮಿಥುನ:

ದಿನ ಭವಿಷ್ಯ

ಮಿಥುನ:- ಮಕ್ಕಳ ಆರೋಗ್ಯ ಭಾಗ್ಯದ ಕಡೆ ಗಮನ ಹರಿಸಿರಿ. ಉನ್ನತ ಶಿಕ್ಷ ಣದ ವಿಚಾರದಲ್ಲಿ ಶಿಕ್ಷ ಣ ತಜ್ಞರನ್ನು ಭೇಟಿ ಮಾಡಿರಿ. ವ್ಯಾಪಾರ, ವ್ಯವಹಾರದಲ್ಲಿ ನಿರೀಕ್ಷಿತ ಆದಾಯ ಬರುವುದು. ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆ ಸೌಜನ್ಯದಿಂದ ವರ್ತಿಸಿರಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಕೃಷಿ ವಿಚಾರದಲ್ಲಿ ಹರುಷ, ಗೆಳೆಯರಿಂದ ಸಹಾಯ ಸಿಗಲಿದೆ. ಅನುಕೂಲ ಪರಿಸ್ಥಿತಿಯಿಂದಾಗಿ ಈ ದಿನ ಸಂತಸದ ಕ್ಷ ಣಗಳನ್ನು ಕಳೆಯುವಿರಿ. ಹಣಕಾಸಿನ ವಿಷಯದಲ್ಲಿ ಅಲ್ಪ ಹಿನ್ನಡೆ ಇದ್ದರೂ ಮಾನಸಿಕ ನೆಮ್ಮದಿಗೆ ತೊಂದರೆ ಇಲ್ಲ.

ಸಿಂಹ:

ದಿನ ಭವಿಷ್ಯ

ಸಿಂಹ:- ನಿಮ್ಮ ಕಾರ್ಯಕ್ಷೇತ್ರದಲ್ಲಿ ಗೆಲುವು ಕಾಣುವಿರಿ. ಬಹುತೇಕ ಇಂದಿನ ಎಲ್ಲಾ ಕಾರ್ಯಗಳು ಸಫಲತೆಯನ್ನು ತಂದು ಕೊಡುವುದು. ಈದಿನ ಅನೇಕ ತಿರುವುಗಳಿಗೆ ಸಾಕ್ಷಿಯಾಗಿ ನಿಲ್ಲುವುದು. ಹಣಕಾಸಿನ ತೊಂದರೆ ಇರುವುದಿಲ್ಲ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಸಂಗಾತಿಯೊಂದಿಗೆ ತಾಳ್ಮೆಯಿಂದ ಇರಿ. ನಿಮ್ಮ ವ್ಯವಹಾರದಲ್ಲಿನ ಒತ್ತಡ, ಸಿಟ್ಟು, ಸೆಡವುಗಳನ್ನು ನಿಮ್ಮ ಸಂಗಾತಿಯ ಮೇಲೆ ಹೇರುವುದು ತರವಲ್ಲ. ಮಧ್ಯಸ್ಥಿಕೆ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ವಿನಾಕಾರಣ ಅಪವಾದಗಳನ್ನು ಎದುರಿಸಬೇಕಾಗುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಕೆಲಸದ ಸ್ಥಳದಲ್ಲಿ ಕಿರಿಕಿರಿಗಳಿದ್ದರೂ ಮುಂದಿನ ಪದೋನ್ನತಿಗೆ ವೇದಿಕೆ ಇಂದು ಸಿದ್ಧವಾಗಲಿದೆ. ದುರ್ಗಾದೇವಿಯ ಆರಾಧನೆ ಮಾಡಿರಿ. ಸಂಗಾತಿಯೊಡನೆ ಮಹತ್ತರ ವಿಷಯಗಳನ್ನು ಚರ್ಚಿಸಿ ಪತಿ-ಪತ್ನಿಯರ ನಡುವೆ ಇದ್ದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಿರಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಆರೋಗ್ಯದ ವಿಚಾರದಲ್ಲಿ ಆಸ್ಪತ್ರೆ ಖರ್ಚು ಬರುವ ಸಂಭವವಿರುತ್ತದೆ. ಜನ್ಮಸ್ಥ ಚಂದ್ರ ಮತ್ತು ಶನಿಯ ಸಂಚಾರದಿಂದ ಮನಸ್ಸಿಗೆ ಕಿರಿಕಿರಿಯಿದೆ. ಮನೋನಿಯಾಮಕ ರುದ್ರದೇವರ ಸ್ಮರಣೆ ಮಾಡಿಕೊಳ್ಳಿರಿ. ತಂದೆ, ಮಕ್ಕಳಲ್ಲಿ ಭಿನ್ನಾಭಿಪ್ರಾಯ ತಾರಕಕ್ಕೆ ಏರುವ ಸಂಭವ ಇರುತ್ತದೆ. ತಾಳ್ಮೆಯಿಂದ ಇರಿ.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ಚಂಚಲ ಮನಸ್ಸಿನಿಂದ ಹಮ್ಮಿಕೊಂಡ ಕಾರ್ಯವನ್ನು ಸಕಾಲಕ್ಕೆ ಮುಗಿಸಲು ಆಗುವುದಿಲ್ಲ. ಮೇಲಧಿಕಾರಿಗಳು ನಿಮ್ಮ ಕಾರ್ಯಕ್ಷ ಮತೆಯನ್ನು ಗಮನಿಸುತ್ತಿರುವರು. ಆದಷ್ಟು ಜಾಗರೂಕರಾಗಿ ಕಾರ್ಯ ನಿರ್ವಹಿಸಿರಿ. ಹಿರಿಯ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ನಿಮ್ಮ ಕಾರ್ಯಕ್ರಮಗಳು ಇಂದು ಸುಲಭದಲ್ಲಿ ಯಶಸ್ಸು ಕಾಣುವುದು. ಬರಬೇಕಾಗಿದ್ದ ಹಣಕಾಸು ಒದಗಿ ಬರುವುದು. ಅಷ್ಟಮದ ರಾಹು ಅಲ್ಪ ಅನಾರೋಗ್ಯವುಂಟು ಮಾಡುವ ಸಾಧ್ಯತೆಯಿದೆ. ದುರ್ಗಾದೇವಿಯನ್ನು ಪ್ರಾರ್ಥಿಸಿರಿ.

ಕುಂಭ:

ದಿನ ಭವಿಷ್ಯ

ಕುಂಭ:- ವ್ಯಾಪಾರ-ವ್ಯವಹಾರದಲ್ಲಿ ಮೋಸ ಹೋಗುವ ಸಂದರ್ಭವಿದೆ. ಧನಲಾಭಕ್ಕೆ ಅಡೆ-ತಡೆಗಳು ಉಂಟಾಗುವ ಸಾಧ್ಯತೆಯಿದೆ. ಮನಸ್ಸಿನ ತಳಮಳವನ್ನು ನಿಗ್ರಹಿಸಲು ಆಂಜನೇಯ ಸ್ತೋತ್ರ ಪಠಿಸಿರಿ. ಸಹೋದರ, ಸಹೋದರಿಯರ ಕಷ್ಟಕ್ಕೆ ನೆರವಾಗುವಿರಿ.

ಮೀನ:

ದಿನ ಭವಿಷ್ಯ

ಮೀನ:- ನೀರಿನಲ್ಲಿ ಮೀನು ಸ್ವಚ್ಛಂದವಾಗಿ ವಿಹರಿಸುವಂತೆ ಈ ದಿನ ನಿಮ್ಮ ಕಾರ್ಯಗಳೆಲ್ಲವೂ ದೈವಕೃಪೆಯಿಂದ ಸರಾಗವಾಗಿ ಆಗುವುದು. ಬ್ಯಾಂಕಿನಲ್ಲಿ ಹಣವಿದ್ದರೂ ಈ ದಿನ ಹಣ ಬಿಡಿಸಿಕೊಳ್ಳಲು ಕಷ್ಟಪಡುವಿರಿ. ಗುರುವಿನ ಪ್ರಾರ್ಥನೆಯಿಂದ ಒಳಿತಾಗುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 19 ನವೆಂಬರ್, 2020!!