Astrology in kannada | kannada news ದಿನ-ಭವಿಷ್ಯ: 2 ಮಾರ್ಚ್, 2019!!
ದಿನ-ಭವಿಷ್ಯ: 2 ಮಾರ್ಚ್, 2019!!
ಮೇಷ:
ಮೇಷ:- ಸಾಮಾಜಿಕವಾಗಿ ವಿಶೇಷವಾದುದನ್ನು ಸಾಧಿಸಿ ಪ್ರಶಂಸೆ ಗಳಿಸಲು ಗ್ರಹಗಳು ಸಹಕಾರ ನೀಡುವವು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಣಕಾಸಿನ ನೆರವು ವಿವಿಧ ಮೂಲಗಳಿಂದ ಬರುವುದು.
ವೃಷಭ:
ವೃಷಭ:- ಅವಸರದ ನಿರ್ಣಯ ತೆಗೆದುಕೊಂಡು ನಂತರ ಕೈ ಕೈ ಹಿಸುಕಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ಕಾರ್ಯ ಮಾಡುವ ಮುನ್ನ ಎರಡು ಬಾರಿ ಚಿಂತಿಸಿ. ಸ್ವಯಂಕೃತ ಅಪರಾಧದಿಂದ ತೊಂದರೆಗೆ ಸಿಲುಕಿಕೊಳ್ಳುವಿರಿ.
ಮಿಥುನ:
ಮಿಥುನ:- ವಿವೇಕದ ಮಾತುಗಳನ್ನು ಆಡಿದಾಗಲೂ ಅಹಂಕಾರ ತೋರುವ ಜನರನ್ನು ನಿರ್ದಾಕ್ಷಿಣ್ಯವಾಗಿ ದೂರವಿಡಿ. ಇದರಿಂದ ನಿಮ್ಮ ಕಾರ್ಯ ಸಾಧುವಾಗುವುದು. ಹಣಕಾಸಿನ ಸ್ಥಿತಿ ಸದ್ಯಕ್ಕೆ ಉತ್ತಮವಾಗಿಲ್ಲ.
Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!
ಕಟಕ:
ಕಟಕ:- ನಿಮ್ಮ ನಿರೀಕ್ಷೆ ಮೀರಿ ಹೆಚ್ಚಿನ ಲಾಭ ಬರುವ ಉತ್ತಮ ಅವಕಾಶ ನಿಮಗೆ ದೊರೆಯಲಿದೆ. ಇದರಿಂದ ನಿಮ್ಮ ಬಹುತೇಕ ಸಮಸ್ಯೆಗಳು ನಿವಾರಣೆಯಾಗುವವು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಸಿಂಹ:
ಸಿಂಹ:- ವಿನಾಕಾರಣ ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡುವ ಜನರು ನಿಮಗೆ ತಲೆನೋವು ತರುವ ಸಾಧ್ಯತೆ ಇದೆ. ಅವರನ್ನು ಜಾಣ್ಮೆಯಿಂದ ಸಾಗ ಹಾಕಿ. ಸಮಾಜದಲ್ಲಿ ನಿಮಗೆ ಉತ್ತಮ ಗೌರವ ಆದರಗಳು ದೊರೆಯುವವು.
ಕನ್ಯಾ:
ಕನ್ಯಾ:- ಪ್ರವಾಸದ ಸಂದರ್ಭದಲ್ಲಿ ನಡೆಸಿದ ಮಾತುಕತೆಗೆ ವ್ಯತಿರಿಕ್ತವಾಗಿ ವರ್ತಿಸಿದವರನ್ನು ನಿರ್ಲಕ್ಷಿಸಿ ಮತ್ತು ಅವರನ್ನು ದೂರ ಇಡಿ. ಬಹುದಿನದ ಬಯಕೆ ಈಡೇರುವ ಸಾಧ್ಯತೆ ಇದೆ. ಆರೋಗ್ಯದ ಕಡೆ ಗಮನ ನೀಡಿ.
Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!
ತುಲಾ:
ತುಲಾ:- ವಾಯುಪ್ರಕೋಪ, ಇಲ್ಲವೆ ಮಿತಿ ಮೀರಿದ ಅಲರ್ಜಿ ತೊಂದರೆ ನಿಮ್ಮನ್ನು ಕಾಡುವ ಸಾಧ್ಯತೆ ಇದೆ. ಆದಷ್ಟು ಊಟ ಉಪಚಾರಗಳಲ್ಲಿ ನಿಯಮ ಕಾಪಾಡಿಕೊಳ್ಳಿ.
ವೃಶ್ಚಿಕ:
ವೃಶ್ಚಿಕ:- ಮಾತನಾಡುವುದು ಅನಿವಾರ್ಯ ಆದಾಗಲೂ ಮೌನದಿಂದ ಇರಲು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಸಾಕಷ್ಟು ಆಂತರಿಕ ಹಾಗೂ ಬಾಹ್ಯ ಸಮಸ್ಯೆಗಳು ಕಡಿಮೆ ಆಗುವವು. ಪ್ರಯಾಣ ಕಾಲದಲ್ಲಿ ಎಚ್ಚರ ಅಗತ್ಯ. ಸಾಧ್ಯವಾದಲ್ಲಿ 18 ಉದ್ದಿನಕಾಳುಗಳನ್ನು ಜೇಬಿನಲ್ಲಿಟ್ಟುಕೊಳ್ಳಿ.
ಧನಸ್ಸು:
ಧನುಸ್ಸು:- ಅನ್ಯರ ಮಾತು ಕೇಳಿ ನಿಮಗೆ ತೊಂದರೆ ಕೊಡುತ್ತಿರುವ ಮೇಲಧಿಕಾರಿಗೆ ತಪ್ಪಿನ ಅರಿವಾಗಲಿದೆ. ಈ ಬಗ್ಗೆ ಅವರು ತಮ್ಮ ಬಳಿ ಕ್ಷ ಮೆಯಾಚಿಸುವ ಸಾಧ್ಯತೆ ಇದೆ. ಹಾಗಂತ ನೀವು ಅಹಂಕಾರ ಪಡುವುದು ಸೂಕ್ತವಲ್ಲ. ಆಂಜನೇಯ ಸ್ವಾಮಿ ಮಂತ್ರ ಜಪಿಸಿ.
ಮಕರ:
ಮಕರ:- ದೂರದ ಬೆಟ್ಟ ನುಣ್ಣಗೆ ಎಂಬುದು ತಿಳಿದಿದ್ದರೂ ಪುನಃ ಪುನಃ ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಂಡು ಸೋಲನ್ನು ಅನುಭವಿಸುವಿರಿ. ಸದ್ಯದ ಪರಿಸ್ಥಿತಿಯಲ್ಲಿ ಈಗಿರುವ ಕೆಲಸವನ್ನೇ ಮುಂದುವರಿಸಿಕೊಂಡು ಹೋಗುವುದು ಒಳ್ಳೆಯದು.
ಕುಂಭ:
ಕುಂಭ:- ನಿಮ್ಮ ಬುದ್ಧಿಮತ್ತೆ ಎಲ್ಲೆಡೆ ಚರ್ಚೆಗೆ ಒಳಪಡುವುದು ಮತ್ತು ಈ ವಿಷಯದಲ್ಲಿ ಹಲವು ರೀತಿಯ ಸದವಕಾಶಗಳು ನಿಮಗೆ ಬರಲಿದ್ದು ನೀವು ಇನ್ನೂ ಎತ್ತರಕ್ಕೆ ಏರಲು ಅನುಕೂಲವಾಗುವುದು.
ಮೀನ:
ಮೀನ:- ಪರರ ಮಾತುಗಳನ್ನು ಕೇಳಿ ನಿರ್ಧಾರ ಕೈಗೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಒಳಿತಲ್ಲ. ಆದಷ್ಟು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಿ. ಒಳಿತಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ
ದಿನ-ಭವಿಷ್ಯ: 2 ಮಾರ್ಚ್, 2019!!