Astrology in kannada | kannada news ದಿನ ಭವಿಷ್ಯ: 22 ಅಕ್ಟೋಬರ್, 2019!!
ದಿನ ಭವಿಷ್ಯ: 22 ಅಕ್ಟೋಬರ್, 2019!!
ಮೇಷ:
ಮೇಷ:- ನಿಮ್ಮದೇ ಆದ ಕನಸುಗಳಲ್ಲಿ ತೇಲಾಡುತ್ತಿರುವಿರಿ. ಅದಕ್ಕೆ ಪೂರಕವಾಗಿ ನಿಮ್ಮನ್ನು ಆದರಿಸುವ ಜನರು ಹೆಚ್ಚಾಗುತ್ತಿದ್ದಾರೆ. ಚುನಾವಣೆ ಫಲಿತಾಂಶ ಬರುವವರೆಗೂ ಕಾಯಲೇಬೇಕಾದ ಅನಿವಾರ್ಯತೆ ಇದೆ. ಆದಾಗ್ಯೂ ಗೆಲುವು ನಿಮ್ಮದೆ ಎನ್ನುವುದು ಜನರ ಭಾವನೆ.
ವೃಷಭ:
ವೃಷಭ:- ಹೇಳಬೇಕಾದ್ದನ್ನು ಹೇಳಲು ಸೂಕ್ತ ಸಮಯವಾಗಿದೆ. ಬಹುದಿನಗಳಿಂದ ಹೃದಯದಲ್ಲಿ ಗೌಪ್ಯವಾಗಿಟ್ಟುಕೊಂಡ ವಿಚಾರವನ್ನು ಬಹಿರಂಗಗೊಳಿಸುವಿರಿ. ಇದರಿಂದ ನಿಮ್ಮ ಮನೆ ಮಂದಿ ಸಂತೋಷಪಡುವರು.
ಮಿಥುನ:
ಮಿಥುನ:- ಗೌರವಾದರಗಳನ್ನು ಪಡೆಯಲು ಹೇರಳ ಅವಕಾಶಗಳಿವೆ. ಕಚೇರಿ ಕೆಲಸಗಳಿಂದ ವಿಶ್ರಾಂತಿ ಲಭಿಸಿರುವುದು ಮನಸ್ಸಿಗೆ ಹರ್ಷವನ್ನುಂಟು ಮಾಡುತ್ತದೆ. ಹಳೆ ಗೆಳೆಯರ ಭೇಟಿ ಸಾಧ್ಯತೆಯಿದೆ.
Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!
ಕಟಕ:
ಕಟಕ:- ನಿಮ್ಮ ಆಂತರಿಕ ಬೇಗುದಿ ಹೊರ ಹಾಕಲು ಸಕಾಲವಾಗಿದೆ. ಸಂಜೆ ನಿಮ್ಮ ಆತ್ಮೀಯ ಗೆಳೆಯರೊಂದಿಗೆ ಸೇರಿ ಚರ್ಚೆ ಮಾಡಿ. ಇದಕ್ಕೆ ಸೂಕ್ತ ಸಲಹೆಗಳು ಸಿಗುವುದರಿಂದ ಮನಸ್ಸು ಹಗುರವಾಗುವುದು.
ಸಿಂಹ:
ಸಿಂಹ:- ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ನೀವು ಯಾವುದೇ ವಿಚಾರದಲ್ಲೂ ಸೋಲು ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ ನಿಮ್ಮ ವಿಚಾರಗಳ ಮೇಲೆ ಜನರು ತಪ್ಪು ಅಭಿಪ್ರಾಯ ತಾಳುವರು. ಹಾಗಾಗಿ ಸೋತು ಗೆಲ್ಲುವುದು ಉತ್ತಮ.
ಕನ್ಯಾ:
ಕನ್ಯಾ:- ವಾದ ಮಾಡಿ ಪರರ ಮನಸ್ಸು ಗೆಲ್ಲುವ ಯೋಚನೆಯಲ್ಲಿದ್ದೀರಿ. ಆದರೆ ತರ್ಕದಿಂದ ಸಿದ್ಧಾಂತ ಮಾಡಲು ಆಗುವುದಿಲ್ಲ. ಇದನ್ನು ನೀವು ಅರಿಯುವಿರಿ. ಆದಾಗ್ಯೂ ಸೋಲು ವಿರೋಚಿತವಾದುದು.
Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!
ತುಲಾ:
ತುಲಾ:- ಮಕ್ಕಳ ಕಲರವ ಮನಸ್ಸಿಗೆ ಮುದ ನೀಡುವುದು. ತಂದೆ ತಾಯಿಯರಿಗೆ ಮತ್ತು ಅತ್ತೆ ಮಾವಂದಿರಿಗೆ ಸಂತೋಷವುಂಟಾಗುವುದು. ಮಗುವಿನ ಮುದ್ದು ಮುಖ ಎಲ್ಲಾ ಸಮಸ್ಯೆಗಳನ್ನು ಮರೆಸುವುದು.
ವೃಶ್ಚಿಕ:
ವೃಶ್ಚಿಕ:- ಹಲವು ದಿನಗಳಿಂದ ಯಶಸ್ಸೆಂಬ ಕುದುರೆ ಏರಿ ಸಂಭ್ರಮಿಸುತ್ತಿದ್ದೀರಿ. ಕಾಲವೂ ಪಕ್ವವಾಗಿರುವುದರಿಂದ ನಿಮ್ಮ ಗೆಲುವಿಗೆ ಹಲವಾರು ಜನರು ಶ್ರಮಿಸುವರು. ಇದರಿಂದ ನಿಮ್ಮ ಗೆಲುವಿಗೆ ಅನುಕೂಲವಾಗುವುದು.
ಧನಸ್ಸು:
ಧನಸ್ಸು:- ಭತ್ತ ಕುಟ್ಟಿದರೆ ಅಕ್ಕಿ ಬರುವುದು. ಆದರೆ ಅದರ ಹೊಟ್ಟನ್ನು ಕುಟ್ಟುವುದರಿಂದ ಪ್ರಯೋಜನವಿಲ್ಲ. ಗುರುವಿನ ಶುಭ ಆಶೀರ್ವಾದದಿಂದ ಕೆಲಸ ಕಾರ್ಯಗಳು ಸುಗಮವಾಗಿ ಆಗುವವು.
ಮಕರ:
ಮಕರ:- ನಿಮ್ಮ ಅಂತರಂಗದ ಭಾವನೆಗಳಿಗೆ ಅಕ್ಷ ರ ರೂಪ ಕೊಡÜಲು ಕಾಲ ಕೂಡಿ ಬಂದಿದೆ. ನಿಮ್ಮೊಳಗಿನ ಒಬ್ಬ ಲೇಖಕ ಹೊರ ಜಗತ್ತಿಗೆ ಪ್ರಕಟನಾಗುವ ಸಾಧ್ಯತೆ ಇರುತ್ತದೆ.
ಕುಂಭ:
ಕುಂಭ:- ನಿಮ್ಮ ಸ್ವಂತ ವ್ಯಕ್ತಿತ್ವದಲ್ಲೇ ಸೂಜಿಗಲ್ಲಿನಂತೆ ಆಕರ್ಷಿಸುವ ವಿಶೇಷವಿದೆ. ಹೀಗಿದ್ದಾಗ ಇನ್ನೊಬ್ಬರನ್ನು ಅನುಕರಣೆ ಮಾಡುವುದು ಸೂಕ್ತವಲ್ಲ. ಭಗವಂತನ ವಿಶೇಷ ಕಾರುಣ್ಯ ನಿಮ್ಮ ಮೇಲಿದೆ.
ಮೀನ:
ಮೀನ:- ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಬೇಕೆಂಬ ನಿಮ್ಮ ಮನದ ಆಸೆ ಈಡೇರಿಸಿಕೊಳ್ಳಲು ಸೂಕ್ತ ಸಮಯ. ಮಡದಿ ಮಕ್ಕಳ ಸಹಿತ ಪ್ರಯಾಣ ಬೆಳೆಸಿ. ಮನಸ್ಸಿಗೆ ಪ್ರಶಾಂತತೆ ತಂದುಕೊಳ್ಳಿ.
Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ
ದಿನ ಭವಿಷ್ಯ: 22 ಅಕ್ಟೋಬರ್, 2019!!