ದಿನ ಭವಿಷ್ಯ: 23 ಜನವರಿ, 2021!!

0
173

Astrology in kannada | kannada news ದಿನ ಭವಿಷ್ಯ: 23 ಜನವರಿ, 2021!!

ದಿನ ಭವಿಷ್ಯ: 23 ಜನವರಿ, 2021!!

ಮೇಷ:

ದಿನ ಭವಿಷ್ಯ

ಮೇಷ:- ಉನ್ನತ ಸ್ಥಾನದಲ್ಲಿ ಕೆಲಸ ಮಾಡುವ ನೀವು ಕೆಲವು ವೇಳೆ ಘನತೆ, ಗಾಂಭೀರ‍್ಯ ಪ್ರದರ್ಶಿಸಬೇಕಾಗುವುದು. ಹಾಗಾಗಿ ಸಹೋದ್ಯೋಗಿಗಳ ಜೊತೆ ಮತ್ತು ನಿಮ್ಮ ಕೈಕೆಳಗಿನವರ ಜೊತೆ ಸಲುಗೆ ಬೇಡ.

ವೃಷಭ:

ದಿನ ಭವಿಷ್ಯ

ವೃಷಭ:- ಮನೆಯಲ್ಲಿ ಮತ್ತು ಕಚೇರಿಯಲ್ಲಿ ಕೆಲವು ಅನಪೇಕ್ಷಿತ ಘಟನೆಗಳಿಂದ ಮನಸ್ಸಿಗೆ ಕಿರಿಕಿರಿ ಆಗುವುದು. ಕುಲದೇವತಾ ಧ್ಯಾನದಿಂದ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ಸರ್ಕಾರಿ ಕೆಲಸದಲ್ಲಿದ್ದವರಿಗೆ ಪದೋನ್ನತಿ ಇದೆ. ಕೋರ್ಟು ಕಚೇರಿಯ ವ್ಯಾಜ್ಯಗಳಲ್ಲಿ ಯಶಸ್ಸು ನಿಮ್ಮದಾಗುವುದು. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಉಂಟಾಗುವುದು. ಆರ್ಥಿಕ ಸ್ಥಿತಿ ಚೇತೋಹಾರಿಯಾಗಿರುತ್ತದೆ..

Also read: ಜ್ಯೋತಿಷ್ಯದ ಪ್ರಕಾರ ನಿಮ್ಮ ರಾಶಿಗಳಿಗೆ ಅನುಗುಣವಾಗಿ ಯಾವ ಉದ್ಯೋಗ ಸೂಕ್ತ ನೋಡಿ..

ಕಟಕ:

ದಿನ ಭವಿಷ್ಯ

ಕಟಕ:- ಎದುರಾಳಿಗಳನ್ನು ಎದುರಿಸುವ ಕಲೆ ನಿಮಗೆ ಕರಗತವಾಗಿರುವುದು. ಅಂತೆಯೇ ಅವರ ಮನಸ್ಥಿತಿ ಅರಿತು ಅವರ ಸ್ನೇಹ ಬಯಸುವಿರಿ. ಆದರೆ ಶತ್ರು ಶತ್ರುವೇ ಹೊರತು ಮಿತ್ರನಲ್ಲ. ಆತನನ್ನು ಎಚ್ಚರಿಕೆಯಿಂದ ಬಳಸಿಕೊಳ್ಳಿ.

ಸಿಂಹ:

ದಿನ ಭವಿಷ್ಯ

ಸಿಂಹ:- ವಿವಾಹ ಆಕಾಂಕ್ಷಿಗಳಿಗೆ ಶುಭ ಸಮಾಚಾರ ಬರುವುದು. ಕೆಲವರಿಗೆ ಮದುವೆಯೂ ನಿಶ್ಚಯವಾಗುವ ಸಂದರ್ಭವಿರುತ್ತದೆ. ಬದುಕಿನ ಬಹುಮುಖ್ಯ ನಿರ್ಣಯವೊಂದನ್ನು ನೀವು ಕೈಗೊಳ್ಳಬೇಕಾಗುವುದು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ನಿಮ್ಮ ಕೈ ಕೆಳಗೆ ಕೆಲಸ ಮಾಡುವವರಿಂದಲೇ ಕಿರಿಕಿರಿ ಎದುರಾಗುವುದು. ಹಾಗಾಗಿ ಅವರ ವಿಶ್ವಾಸವನ್ನು ಮೊದಲು ಪಡೆಯಿರಿ. ದುರ್ಜನಂ ಪ್ರಥಮಂ ವಂದೇ ಎನ್ನುವಂತೆ ಅವರನ್ನು ಸಮಾಧಾನಿಸಿದರೆ ನಿಮ್ಮ ಕೆಲಸಕ್ಕೆ ಯಾವುದೇ ಭಂಗ ಇರುವುದಿಲ್ಲ.

Also read: ಮಂಗಳಕರವಾದ ಮಾಂಗಲ್ಯದಲ್ಲಿ ಯಾವ ಯಾವ ರಾಶಿಯವರು ಎಷ್ಟೆಷ್ಟು ಕರಿಮಣಿ ಧರಿಸಬೇಕು ಎಂಬುದಕ್ಕೆ ಇಲ್ಲಿದೆ ಕಂಪ್ಲೀಟ್ ಡೀಟೇಲ್..!!

ತುಲಾ:

ದಿನ ಭವಿಷ್ಯ

ತುಲಾ:- ರಾಜಕಾರಣಿಗಳಿಗೆ ವಿರೋಧಿಗಳ ತೊಂದರೆ ಇದೆ. ಅವರು ಮಾಡುವ ಅಪಪ್ರಚಾರದಿಂದ ನಿಮ್ಮ ವರ್ಚಸ್ಸಿಗೆ ಧಕ್ಕೆ ಬರುವ ಸಾಧ್ಯತೆ ಇದೆ. ಕಾರ್ಮಿಕ ವರ್ಗದವರಿಗೆ ಮೇಲಧಿಕಾರಿಗಳಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಆಂಜನೇಯ ಸ್ತೋತ್ರ ಪಠಿಸಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:-ಮಕ್ಕಳ ವಿಚಾರದಲ್ಲಿ ಒತ್ತಡವಿದೆ. ಶಿಕ್ಷ ಣದ ವಿಚಾರದಲ್ಲಿ ತಂದೆ ಮಗನ ಮಧ್ಯೆ ಅಪಸ್ವರ ಮೂಡುವುದು. ಶಿವಸ್ತುತಿ ಮಾಡಿ. ಕುಲದೇವತಾ ಅನುಗ್ರಹ ಪಡೆಯುವುದರಿಂದ ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಉಂಟಾಗುವುದು.

ಧನಸ್ಸು:

ದಿನ ಭವಿಷ್ಯ

Also read: ವಿವಾಹ ವಿಚ್ಛೇದನೆಗೆ ಜಾತಕ ಫಲ ಎಷ್ಟು ಮುಖ್ಯ ಅಂತ ತಿಳಿಯಿರಿ!!

ಧನಸ್ಸು:- ಕೆಲಸದ ಒತ್ತಡ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ ಅದಕ್ಕಾಗಿ ಹೆಚ್ಚು ಚಿಂತಿಸಬೇಕಿಲ್ಲ. ಆದ್ಯತೆಯ ಮೇರೆಗೆ ಮೊದಲು ಬಂದ ಕೆಲಸವನ್ನು ಮೊದಲು ಮುಗಿಸಿ. ಕಾರ್ಯದ ವೇಳಾಪಟ್ಟಿ ಇರಲಿ.

ಮಕರ:

ದಿನ ಭವಿಷ್ಯ

ಮಕರ:- ಸ್ಪಷ್ಟ ನಡೆಯ ಸ್ವಭಾವವುಳ್ಳ ನೀವು ಅದನ್ನು ಜಾರಿಗೆ ತರುವಿರಿ. ಇದರಿಂದ ನಿಮ್ಮ ಮೇಲೆ ಹೆಚ್ಚಿನ ಪ್ರೀತಿ, ವಿಶ್ವಾಸವನ್ನು ನಿಮ್ಮ ಉನ್ನತ ಅಧಿಕಾರಿಗಳು ತೋರಿಸುವರು. ಚಿಕ್ಕ ಮಗುವಿನ ಪ್ರಶ್ನೆಗೆ ಉತ್ತರಿಸಲು ಸೋಲುವಿರಿ.

ಕುಂಭ:

ದಿನ ಭವಿಷ್ಯ

ಕುಂಭ:- ಇದುವರೆಗೂ ಬಯಸುತ್ತಿದ್ದ ವೃತ್ತಿಯಲ್ಲಿ ಬದಲಾವಣೆಯ ಜೊತೆಗೆ ಮುಂಬಡ್ತಿ ದೊರೆಯುವುದು. ನೂತನ ಸ್ಥಳದಲ್ಲಿ ಕೆಲಸ ಮಾಡುವ ಮುನ್ನ ಕೆಲ ದಿನ ಮಡದಿ ಮಕ್ಕಳೊಡನೆ ಪ್ರವಾಸ ಮಾಡಿ.

ಮೀನ:

ದಿನ ಭವಿಷ್ಯ

ಮೀನ:-ಕೃಷಿಕರಿಗೆ ಉತ್ತಮ ಕಾಲ. ಕೆಲವರಿಗೆ ಸ್ಥಾನ ಪಲ್ಲಟವಿದೆ. ಕೆಲವರು ಮನೆಯನ್ನು ಬದಲಾಯಿಸುವ ಚಿಂತನೆಯಲ್ಲಿರುವರು. ಅವರೆಲ್ಲರ ಬಯಕೆ ಈಡೇರಲು ಸಕಾಲವಾಗಿದೆ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 23 ಜನವರಿ, 2021!!