ದಿನ ಭವಿಷ್ಯ: 23 ಜುಲೈ, 2018!!

0
486
ದಿನ ಭವಿಷ್ಯ

ದಿನ ಭವಿಷ್ಯ: 23 ಜುಲೈ, 2018!!

Astrology in kannada | kannada news

ಮೇಷ:

ನಿಮ್ಮ ನೆರೆಹೊರೆಯವರಿಗೆ ಅಲ್ಪ ಸಹಾಯ ಮಾಡಿದ್ದನ್ನೇ ನೆನೆದು ನಿಮ್ಮನ್ನು ಬಹುವಾಗಿ ಕೊಂಡಾಡುವರು. ಇದರಿಂದ ನಿಮಗೂ ಸಂತೋಷವಾಗುವುದು. ಮಕ್ಕಳ ಪ್ರಗತಿಯು ಉತ್ತಮವಾಗಿರುತ್ತದೆ.

ವೃಷಭ:

ಮನಸ್ತಾಪಗಳಿಗೆ ಒಳಗಾಗದಿರಿ. ಶಾಂತ ಮನಸ್ಸಿನಿಂದ ಕಾರ್ಯದಲ್ಲಿ ತೊಡಗಿರಿ. ನಿಮ್ಮ ಹೊಣೆಗಾರಿಕೆಯನ್ನು ಅರಿತು ಕೆಲಸ ಮಾಡುವುದರಿಂದ ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಮಾಡುವಿರಿ. ಹಣವೂ ಕೀರ್ತಿಯನ್ನು ಹಿಂಬಾಲಿಸಿ ಬರುವುದು.

ಮಿಥುನ:

ಮನೆಯಲ್ಲಿನ ಶುಭ ಸಮಾರಂಭಕ್ಕೆ ಬಿಡುವಿಲ್ಲದ ಓಡಾಟದಿಂದ ಈದಿನ ದೈಹಿಕವಾಗಿ ಸ್ವಲ್ಪ ಸುಸ್ತು ಅನುಭವಿಸುವಿರಿ. ಮಧ್ಯಾಹ್ನದ ನಂತರ ದೇಹಕ್ಕೆ, ಮನಸ್ಸಿಗೆ ವಿಶ್ರಾಂತಿ ಕೊಟ್ಟು ಒಂದು ಸುಖ ನಿದ್ದೆ ಮಾಡಿರಿ.

Also read: ಮದುವೆಗೆ ಜಾತಕ ಪರೀಶಲನೆ ಎಷ್ಟು ಮುಖ್ಯ ಹಾಗೂ ಯಾವ ವಿಚಾರಗಳು ಸಂಬಂಧವನ್ನು ಗಟ್ಟಿ ಗೊಳಿಸುತ್ತವೆ ಅಂತ ತಿಳ್ಕೊಳ್ಳಿ..

ಕಟಕ:

ಗಹನವಾದ ಚರ್ಚೆಯು ಫೋನ್‌ನಲ್ಲಿನ ವ್ಯಾಟ್ಸ್‌ಆ್ಯಪ್‌ನಲ್ಲಿ ಬರುವುದು. ಇದಕ್ಕೆ ಪ್ರತಿಕ್ರಿಯಸದೆ ಅವರ ವಿಚಾರಧಾರೆಗಳನ್ನು ಮೆಲುಕು ಹಾಕಿರಿ. ಜಗತ್ತು ಯಾವ ರೀತಿಯಲ್ಲಿ ಚಿಂತಿಸುತ್ತದೆ ಎಂದು ತಿಳಿದು ಮನಸು ಖಿನ್ನತೆ ಅನುಭವಿಸುವುದು.

ಸಿಂಹ:

ಹಿರಿಯರ ಆರೋಗ್ಯದತ್ತ ಗಮನವಿರಲಿ. ಬಂಧು ಬಾಂಧವರೊಂದಿಗೆ ಹಿತಮಿತವಾಗಿ ಮಾತನಾಡಿ ದೂರದೃಷ್ಟಿಯಿಂದ ಹಮ್ಮಿಕೊಳ್ಳುವ ಕೆಲಸಗಳಿಗೆ ಸ್ನೇಹಿತರಿಂದ ಬೆಂಬಲ ವ್ಯಕ್ತವಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.

ಕನ್ಯಾ:

ತುಂಬಾ ದಿನಗಳಿಂದ ಆಗಬೇಕಾಗಿದ್ದ ಸರಕಾರಿ ಕೆಲಸಗಳು ಇಂದು ಕೈಗೂಡಬಹುದು. ಹಳೆಯ ಬಾಕಿ ಸಾಲಗಳು ತೀರುತ್ತವೆ. ಮಗನ ಮದುವೆಯ ವಿಷಯದ ಬಗ್ಗೆ ಶುಭ ಸೂಚನೆ ಬರಲಿದೆ.

Also read: ಈ ಎರಡು ರಾಶಿಯವರ ಪ್ರೇಮ ಜೀವನ ತುಂಬಾ ಸ್ಪೆಷಲ್ ಅಂತೆ, ನೀವು ಇದೆ ರಾಶಿಯವರ ನೋಡಿಕೊಳ್ಳಿ…

ತುಲಾ:

ಆರ್ಥಿಕ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ಇರಿ. ಷೇರು ಮಾರುಕಟ್ಟೆಯಲ್ಲಿ ಹೆಚ್ಚು ಹಣ ತೊಡಗಿಸುವುದು ಸೂಕ್ತವಲ್ಲ. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ. ಹಸುವಿಗೆ ಅಕ್ಕಿ ಬೆಲ್ಲವನ್ನು ತಿನ್ನಿಸಿರಿ.

ವೃಶ್ಚಿಕ:

ನಿಮ್ಮ ಹಳೆಯ ಸ್ನೇಹಿತನ ಆಗಮನದಿಂದ ನಿಮ್ಮ ಮನಸ್ಸಿಗೆ ಬಲ ಬರುವುದು. ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ಪತ್ರ ನೋಡಿ ಮಕ್ಕಳ ಬಗ್ಗೆ ಹೆಮ್ಮೆ ಎನಿಸುವುದು. ಈ ಬಗ್ಗೆ ಸ್ನೇಹಿತರೊಂದಿಗೆ ಹಂಚಿಕೊಂಡು ಸಂತಸ ಪಡುವಿರಿ.

ಧನಸ್ಸು:

ದಿನಸಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಕಂಡುಬರುವುದು. ಇಂದು ನಿಮಗೆ ಶುಭ ದಿನ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿರಿ. ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನಕೊಟ್ಟು ಅವರನ್ನು ಸರಿ ದಾರಿಗೆ ತರುವುದು ಉತ್ತಮ.

Also read: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನದ ಆಭರಣಗಳನ್ನು ಹೇಗೆ ಧರಿಸಬೇಕೆಂದು ನಿಮಗೆ ತಿಳಿದಿದೆಯೇ..?

ಮಕರ:

 ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಒಳ್ಳೆಯ ಸಮಯ. ವಿದ್ಯಾರ್ಥಿಗಳು ಮುಂಬರುವ ಪರೀಕ್ಷೆಗಾಗಿ ಹೆಚ್ಚು ತಯಾರು ನಡೆಸಬೇಕು. ಇಂದು ಅಲ್ಪ ಶ್ರಮಕ್ಕೆ ವಿಶೇಷ ಪ್ರತಿಫಲ ದೊರೆಯುವುದು. ಹಣಕಾಸಿನ ಸ್ಥಿತಿ ಉತ್ತಮ.

ಕುಂಭ:

ಯಾರದೋ ಮಾತುಗಳಿಂದ ಸ್ತಿಮಿತ ಕಳೆದುಕೊಳ್ಳದಿರಿ. ಸಮಚಿತ್ತದಿಂದ ವರ್ತಿಸಿ ಸಂಭ್ರಮದಿಂದಿರಿ. ಮನಸ್ಸಿನ ಬೇಸರ ಕಳೆಯಲು ಪಾರ್ಕ್‌ ಇಲ್ಲವೇ ದೇವಸ್ಥಾನಗಳಿಗೆ ಭೇಟಿ ಕೊಡಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಮೀನ:

Meena1

 ದೀರ್ಘಕಾಲದ ಬದ್ಧತೆಗಳಿಗೆ ಕೈ ಹಾಕುವ ಮುನ್ನ ಯೋಚಿಸಿ. ತೈಲ ವಹಿವಾಟಿನಲ್ಲಿ ಆದಾಯ ಹೆಚ್ಚಾಗುವುದು. ಕೃಷಿ ಕಾರ್ಮಿಕರಿಗೆ, ಔಷಧ ವ್ಯಾಪಾರಿಗಳಿಗೆ ಹೆಚ್ಚಿನ ಲಾಭಾಂಶ ಕಂಡುಬರುವುದು.

Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!

ದಿನ ಭವಿಷ್ಯ: 23 ಜುಲೈ, 2018!!