ದಿನ-ಭವಿಷ್ಯ: 24 ಅಕ್ಟೋಬರ್, 2018!!

0
569
ದಿನ ಭವಿಷ್ಯ

Astrology in kannada | kannada news | ದಿನ-ಭವಿಷ್ಯ: 24 ಅಕ್ಟೋಬರ್, 2018!!

ದಿನ-ಭವಿಷ್ಯ: 24 ಅಕ್ಟೋಬರ್, 2018!!

ಮೇಷ:

ಈದಿನ ಆರೋಗ್ಯದ ಮೇಲೆ ಪ್ರಭಾವ ಬೀರುವರು. ಹಾಗಾಗಿ ಈದಿನ ಮನೆ ವೈದ್ಯರ ಸಲಹೆಯನ್ನು ಸ್ವೀಕರಿಸಿರಿ. ನಿಮ್ಮ ಮನೋದೌರ್ಬಲ್ಯವನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಳ್ಳೆಯದು.

ವೃಷಭ:

ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಯಸ್ಸಿನ ಅಂತರ ಅಡ್ಡಿ ಬರಲಾರದು. ನಿಗೂಢ ವಿದ್ಯೆಯನ್ನು ಕಲಿಯುವ ದಿಸೆಯಲ್ಲಿ ಪ್ರವೃತ್ತರಾಗುವಿರಿ. ಒಂದರ್ಥದಲ್ಲಿ ಅದರಲ್ಲೂ ಪ್ರವೇಶ ಪಡೆಯುವಿರಿ. ಕಲಿಯುಗದಲ್ಲಿ ಕಲಿಕೆಗೆ ನಿರಂತರ ಅವಕಾಶಗಳಿವೆ.

ಮಿಥುನ:

ಸ್ಪರ್ಧೆಯ ಒತ್ತಡ ನಿಮ್ಮನ್ನು ಹೈರಾಣ ಮಾಡುವುದು. ಕಾಲಕ್ಕೆ ತಕ್ಕಂತೆ ಬದಲಾಗುವುದು ಅನಿವಾರ್ಯವಾಗುವುದು. ಗುರು ಹಿರಿಯರ ಆಶೀರ್ವಾದ ಪಡೆಯಿರಿ. ಇದರಿಂದ ಒಳಿತಾಗುವುದು ಮತ್ತು ಸ್ಪರ್ಧೆಯಲ್ಲಿ ತೇರ್ಗಡೆ ಆಗುವಿರಿ.

ಕಟಕ:

ಪಂಚಮ ಶನಿಯು ಹೇಗೆ ಫಲ ನೀಡುವರು ಎಂಬುದು ಕೆಲವೊಮ್ಮೆ ಗೊತ್ತಾಗದೆ ಹೋಗುವ ಸಾಧ್ಯತೆ ಇರುವುದು. ಈದಿನ ಕೆಲಸದ ಸ್ಥಳದಲ್ಲಿ ತಲೆ ತಿನ್ನುವ ಜನರು ಬಂದು ನಿಮ್ಮ ಆತ್ಮವಿಶ್ವಾಸಕ್ಕೆ ಧಕ್ಕೆ ತರುವರು. ಜಾಣ್ಮೆಯಿಂದ ಉತ್ತರಿಸಿರಿ.

ಸಿಂಹ:

ನಿಮ್ಮ ಬುದ್ಧಿಶಕ್ತಿ ಹಾಗೂ ಸಾಮಾಜಿಕವಾಗಿ ಸ್ಪಂದಿಸುವ ನಿಮ್ಮ ರೀತಿಯಿಂದಾಗಿ ಜನರು ನಿಮ್ಮತ್ತ ಆಕರ್ಷಿತರಾಗುವರು. ಎಲ್ಲರೂ ನಿಮ್ಮನ್ನು ಕೊಂಡಾಡುವರು. ವಿಶೇಷವಾದ ಜವಾಬ್ದಾರಿಯನ್ನು ಇಂದು ನಿರ್ವಹಿಸಬೇಕಾಗುತ್ತದೆ.

ಕನ್ಯಾ:

ಹೊಸ ಸಾಹಸಕ್ಕೆ ಕೈ ಹಾಕಲು ಆತ್ಮೀಯರು ಒತ್ತಡ ತರುವ ಸಾಧ್ಯತೆ ಇರುತ್ತದೆ. ನಿಮ್ಮದೇ ಆದ ನಿಲುವನ್ನು ನೀವು ಬಿಟ್ಟುಕೊಡದಿರಿ. ನಿಮ್ಮ ಇತಿಮಿತಿಗಳನ್ನು ಅರಿತು ಕಾರ್ಯಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿರಿ. ಹಣಕಾಸಿನ ಸ್ಥಿತಿ ಉತ್ತಮವಾಗುವುದು.

ತುಲಾ:

ಮಾತಿನ ಜಾಣ್ಮೆಯಿಂದ ಎಲ್ಲರನ್ನೂ ಎಲ್ಲ ಕಾಲಕ್ಕೂ ಮರಳು ಮಾಡಲು ಆಗುವುದಿಲ್ಲ. ಹಾಗಾಗಿ ಆದಷ್ಟು ನಿಮ್ಮ ವ್ಯವಹಾರದಲ್ಲಿ ಪ್ರಾಮಾಣಿಕತೆಯಿಂದ ವರ್ತಿಸಿದಲ್ಲಿ ಎಲ್ಲರೂ ನಿಮಗೆ ಸಹಾಯ ಮಾಡುವರು. ಯಾರನ್ನು ಉಪೇಕ್ಷೆ ಮಾಡದಿರಿ.

ವೃಶ್ಚಿಕ:

ಆರೋಗ್ಯವೇ ಭಾಗ್ಯ. ಈದಿನ ಆರೋಗ್ಯದ ವಿಷಯದಲ್ಲಿ ಅಲ್ಪ ತೊಂದರೆ ಉಂಟು ಮಾಡುವುದು. ಅನಾರೋಗ್ಯ ನಿವಾರಣೆಗೆ ಸ್ವತಃ ಮನೆ ಮದ್ದನ್ನು ಉಪಯೋಗಿಸದೆ ಸೂಕ್ತ ವೈದ್ಯರನ್ನು ಭೇಟಿ ಮಾಡಿರಿ. ಇಲ್ಲವೇ ಒಂದಕ್ಕೆ ದುಪ್ಪಟ್ಟು ಹಣ ಖರ್ಚಾಗುವುದು.

ಧನಸ್ಸು:

ಸಣ್ಣದಾದ ಮಾತುಗಳಿಗೆ ರೆಕ್ಕೆ-ಪುಕ್ಕ ಸೇರಿ ನಿಮ್ಮ ಮೇಲೆ ಅಪನಂಬಿಕೆ ಉಂಟಾಗುವ ಸಂದರ್ಭ ಎದುರಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈದಿನ ಮಾತುಕತೆಯಲ್ಲಿ ಅನಗತ್ಯ ವಿಚಾರಗಳನ್ನು ಎಳೆದು ತರಬೇಡಿ.

ಮಕರ:

ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿರಿ. ಮಕ್ಕಳ ಪ್ರಗತಿಯು ಮನಸ್ಸಿಗೆ ಖುಷಿಯನ್ನು ತಂದುಕೊಡುವುದು. ಆಂಜನೇಯ ಸ್ತೋತ್ರ ಪಠಿಸಿರಿ.

ಕುಂಭ:

ಗ್ರಹಣ ಬಿಟ್ಟ ಚಂದ್ರಮನಂತೆ ಈದಿನ ಪ್ರಕಾಶಿಸುವಿರಿ. ನಿಮ್ಮ ಕಾರ್ಯ ಯೋಜನೆಗಳು ನಿಮ್ಮ ಮೇಲಿನ ಅಧಿಕಾರಿಗಳ ಮನಸ್ಸಿಗೆ ಮುದ ನೀಡುವುದು. ಇದರಿಂದ ವೃತ್ತಿಯಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇರುತ್ತದೆ.

ಮೀನ:

Meena1

ಯಾವುದೂ ಪುಕ್ಕಟೆ ದೊರೆಯುವುದಿಲ್ಲ. ಅಂತೆಯೇ ವಿದ್ಯೆಯನ್ನು ವಾಮಮಾರ್ಗದಿಂದ ಕಲಿಯಲು ಆಗುವುದಿಲ್ಲ. ವಿದ್ಯೆ ಸಾಧಕನ ಸ್ವತ್ತು. ಹಾಗಾಗಿ ವಿದ್ಯೆಯ ವಿಚಾರದಲ್ಲಿ ಹೆಚ್ಚಿನ ಶ್ರಮಪಡುವುದು ಅನಿವಾರ್ಯ.

Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!

ದಿನ ಭವಿಷ್ಯ: 24 ಅಕ್ಟೋಬರ್, 2018!!