Astrology in kannada | kannada news
ಮೇಷ:
ಮಿತ್ರ ವರ್ಗದವರಿಂದ ಹಾಳು ವ್ಯಸನದ ಗೀಳು ಸಂಭವ. ಆದಾಯಕ್ಕೆ ಕಲ್ಲು. ಹಿತ ಬಂಧುಗಳ ಬಳಿ ಸಾಲಕ್ಕಾಗಿ ಮೊರೆ.
ವೃಷಭ:
ಬಂಧುಗಳಿಂದಾಗಿ ಆರ್ಥಿಕ ಹಾನಿ, ದೇಹಾಯಾಸದಿಂದ ಮನಸ್ಸಿಗೆ ಕಿರಿಕಿರಿ. ಕೋರ್ಟ್, ಕಚೇರಿ ಕೆಲಸಗಳಿಗಾಗಿ ನ್ಯಾಯಾಲಯ ದರ್ಶನ.
ಮಿಥುನ:
ರಾಜಕಾರಣಿಗಳಿಗೆ ಪ್ರಭಾವಿತ ವ್ಯಕ್ತಿಗಳಿಂದ ಸ್ಥಾನ ಲಾಭ. ಆದರೂ ಪಟ್ಟಭದ್ರ ಹಿತಾಸಕ್ತಿಗಳಿಂದ ಕಿರಿಕಿರಿ. ಮನಕ್ಲೇಶ.
ಕಟಕ:
ಅಧಿಕ ಅಲೆದಾಟದಿಂದ ದೇಹಾರೋಗ್ಯದ ಮೇಲೆ ಪರಿಣಾಮ. ಪಿತ್ರಾರ್ಜಿತ ಆಸ್ತಿಗಾಗಿ ಬಂಧುಗಳಲ್ಲಿ ಭಿನ್ನಾಭಿಪ್ರಾಯ. ಕೊಂಚ ಬೇಸರ.
ಸಿಂಹ:
ಉದ್ಯೋಗಸ್ಥರಿಗೆ ಕಾರ್ಯಗಳಲ್ಲಿ ಸ್ವಲ್ಪ ಅಭಿವೃದ್ಧಿ. ದ್ವಂದ್ವ ನೀತಿಯಿಂದ ಮನೆಯಲ್ಲಿ ಪ್ರತಿಕೂಲ ಪರಿಣಾಮ. ಕಿರಿಕಿರಿ.
ಕನ್ಯಾ:
ಹೊಸ ಉದ್ಯೋಗ, ಉದ್ದಿಮೆಯಲ್ಲಿ ಛಲ ಬಿಡದೇ ಮುಂದುವರಿದರೆ ಕಾರ್ಯ ಸಾಧನೆ. ವ್ಯಾಪಾರಿಗಳಿಗೆ ಉತ್ತಮ ಪ್ರಗತಿ.
ತುಲಾ:
ವೃತ್ತಿ ರಂಗದಲ್ಲಿ ನಿರೀಕ್ಷಿತ ಪ್ರಭಾವ ಹೆಚ್ಚಳ. ಸಾಂಸಾರಿಕ ಹೊಂದಾಣಿಕೆಯಿಂದ ಸಮಾಧಾನ. ಶುಭ ಮಂಗಲ ಕಾರ್ಯಗಳಿಗೆ ಅನುಕೂಲ.
ವೃಶ್ಚಿಕ:
ಹಿರಿಯ ಆರೋಗ್ಯ ಭಾಗ್ಯಕ್ಕಾಗಿ ವೈದ್ಯರ ದರ್ಶನ. ಸಣ್ಣ ಪುಟ್ಟ ವ್ಯಾಪಾರಿಗಳಿಗೆ ತುಸು ಚೇತರಿಕೆ. ಆಗಾಗ ವ್ಯರ್ಥ ಕಾಲಹರಣ.
ಧನಸ್ಸು:
ಗೃಹ ಕಲಹ, ಮಡದಿಯ ಮುನಿಸು ಉಪಶಮನ. ಬಂಧು ಮಿತ್ರರ ಸಹಕಾರದಿಂದ ಕಾರ್ಯ ಜಯ. ಕೂಡಿಟ್ಟ ಧಾನ್ಯದಿಂದ ಕೃಷಿಕರಿಗೆ ಲಾಭ.
ಮಕರ:
ರಾಜಕೀಯ ವಲಯದಲ್ಲಿ ರಾಜಕಾರಣಿಗಳಿಗೆ ಸಮಾಧಾನ. ಆಪ್ತೇಷ್ಟರ ವಿಯೋಗದಿಂದ ಮಾನಸಿಕ ಬೇಸರ. ವ್ಯಾಸಂಗಕ್ಕೆ ದೂರ ಸಂಚಾರ.
ಕುಂಭ:
ನಿರೀಕ್ಷಿತ ಮುಂಬಡ್ತಿ ಮುಂದಿನ ಭವಿಷ್ಯಕ್ಕೆ ಸಹಕಾರಿ. ಸರಕಾರಿ ಕಾರ್ಯಗಳಲ್ಲಿ ವಿಳಂಬ. ವ್ಯಾಪಾರಿಗಳಿಗೆ ಸ್ವಲ್ಪ ಪ್ರಗತಿ. ಸಂತಸ.
ಮೀನ:
ಆಕಸ್ಮಿಕ ದೂರ ಸಂಚಾರ ಯೋಗದಿಂದ ಪ್ರಯಾಸಕರ ಪ್ರಯಾಣ. ಅನವಶ್ಯಕ ಖರ್ಚುಗಳಿಂದ ಕೊಂಚ ಮನಸ್ಸಿಗೆ ಬೆಸರ.
Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!