ದಿನ ಭವಿಷ್ಯ: 25 ಜೂನ್, 2019!!

0
472

Astrology in kannada | kannada news ದಿನ ಭವಿಷ್ಯ: 25 ಜೂನ್, 2019!!

ದಿನ ಭವಿಷ್ಯ: 25 ಜೂನ್, 2019!!

ಮೇಷ:

ಬಂಧುಗಳ ಆಗಮನ, ಆಸ್ತಿ ವಿವಾದ ಬಗೆಹರಿಯುವುದು. ಸಹೋದರರಿಂದ ಅನುಕೂಲವಾಗುವುದು. ಕೌಟುಂಬಿಕವಾಗಿ ನೆಮ್ಮದಿಯ ದಿನ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಪ್ರಯಾಣದಲ್ಲಿ ಎಚ್ಚರ ಅಗತ್ಯ.

ವೃಷಭ:

ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುವುದು ಒಳ್ಳೆಯದು. ಮಾತೃ ಸಂಬಂಧದವರಿಂದ ದುಃಖ ಮನೋವ್ಯಾಕುಲತೆಯು, ಚಿಂತೆ, ಜಿಗುಪ್ಸೆ ಕಾಡುವುದು. ವೃಥಾ ಅಲೆದಾಟದಿಂದ ಹಣ ಖರ್ಚಾಗುವುದು. ಕುಲದೇವರ ಪ್ರಾರ್ಥನೆ ಮಾಡಿರಿ. ಆದಷ್ಟುಸಾಲ ಮಾಡದೆ ಈದಿನ ಕಳೆಯಿರಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಮಿಥುನ:

ಮೃಷ್ಠಾನ್ನ ಭೋಜನವನ್ನು ಸವಿಯುವಿರಿ. ಧನಕನಕ ವಸ್ತು ಲಾಭವಾಗುವುದು. ಮನೋಲ್ಲಾಸ ಮನಸ್ಸಿಗೆ ಸಂತೋಷವನ್ನುಂಟು ಮಾಡುವ ಘಟನೆಗಳು ನಡೆಯುವವು. ಕೈಕೊಂಡ ಕೆಲಸ ಕಾರ್ಯಗಳಲ್ಲಿ ಪ್ರಗತಿಯುಂಟಾಗುವುದು. ಹಿರಿಯರ ಆಶೀರ್ವಾದ ಪಡೆಯಿರಿ.

ಕಟಕ:

ಬಾಳಸಂಗಾತಿ ಮತ್ತು ಮಕ್ಕಳು ನಿಮಗೆ ಸಂತಸವನ್ನುಂಟು ಮಾಡುವರು. ಮಾತುಗಾರಿಕೆಯ ಪ್ರಭಾವದಿಂದ ಸಮಾಜದಲ್ಲಿ ಮಾನಸನ್ಮಾನಗಳು ಉಂಟಾಗುವುದು. ಕೌಟುಂಬಿಕವಾಗಿ ನೆಮ್ಮದಿ ತರುವ ದಿನ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಸಿಂಹ:

ಸಮಾಜ ಸೇವೆಯಲ್ಲಿ ಮನೆಯವರ ಸಹಕಾರ. ಮಗನು ಪೂರ್ಣಪ್ರಮಾಣದಲ್ಲಿ ನಿಮಗೆ ಸಹಾಯ ಮಾಡುವುದರಿಂದ ನಿಮಗೆ ಅಲ್ಪ ವಿಶ್ರಾಂತಿಯು ದೊರೆಯುವುದು. ಹಿತಚಿಂತಕರ ಆಗಮನದಿಂದ ಮನಸ್ಸು ಪ್ರಫುಲ್ಲವಾಗುವುದು.

ಕನ್ಯಾ:

ಉದಾಸೀನವೇ ಅಧೋಗತಿಗೆ ಮೂಲ ಎಂದರು ಹಿರಿಯರು. ಈದಿನ ನೀವು ಕೆಲಸ ಕಾರ್ಯದಲ್ಲಿ ಉದಾಸೀನ ತೋರಬಾರದು. ಇಂದಿನ ಸಮಯವನ್ನು ಪೂರ್ಣವಾಗಿ ಧನಾತ್ಮಕವಾಗಿ ಚಿಂತಿಸಿ ಕಾರ್ಯಗಳಿಗೆ ಚಾಲನೆ ನೀಡಿರಿ. ಒಳಿತಾಗುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ದುಡ್ಡಿನ ಮುಂದೆ ಯಾರೂ ಓಡಲು ಸಾಧ್ಯವಿಲ್ಲ. ಹಾಗಾಗಿ ಆದಷ್ಟುಖರ್ಚು-ವೆಚ್ಚಗಳ ಬಗ್ಗೆ ಗಮನವಿರಲಿ. ನಿಮ್ಮ ಶಕ್ತಿ ಮೀರಿ ಹೊರಗಿನ ಕೆಲಸಗಳನ್ನು ತೆಗೆದುಕೊಳ್ಳಬೇಡಿರಿ. ಎಲ್ಲಾ ಕಾಲಕ್ಕೂ ಹಣವು ನಿಮ್ಮನ್ನು ಕೈಹಿಡಿಯುತ್ತದೆ ಎಂದು ನಂಬದಿರಿ.

ವೃಶ್ಚಿಕ:

ಮಾತೇ ಮುತ್ತು ಮಾತೇ ಶತ್ರು ಎನ್ನುವಂತೆ ನೀವು ಮೈಮರೆತು ಆಡಿದ ಮಾತಿಗೆ ಪಶ್ವಾತ್ತಾಪ ಪಡಬೇಕಾಗುವುದು. ಸ್ನೇಹಿತರು ನಿಮ್ಮಿಂದ ದೂರ ಸರಿಯುವರು. ಆರ್ಥಿಕ ಮುಗ್ಗಟ್ಟು ಎದುರಾಗುವುದು. ಪ್ರಯಾಣದಲ್ಲಿ ಸಣ್ಣಪುಟ್ಟಪೆಟ್ಟು ಬೀಳುವ ಸಂದರ್ಭ ಜಾಗ್ರತೆಯಾಗಿರಿ.

ಧನಸ್ಸು:

ಆತ್ಮೀಯರೊಂದಿಗೆ ಸಂತೋಷಕೂಟದಲ್ಲಿ ಭಾಗವಹಿಸುವಿರಿ. ಎಲ್ಲರೂ ನಿಮ್ಮನ್ನು ಮುಖಂಡರನ್ನಾಗಿಸಿ ತಮ್ಮ ಕಾರ್ಯಗಳನ್ನು ಮಾಡಿಕೊಳ್ಳುವರು. ಹೊಸ ಯೋಜನೆಗಳಲ್ಲಿ ಸ್ವಲ್ಪ ಏರುಪೇರಾಗುವ ಸಾಧ್ಯತೆ. ಶನಿಯ ಸ್ತೋತ್ರ ಪಠಿಸಿರಿ.

ಮಕರ:

ದೂರ ಪ್ರಯಾಣದಲ್ಲಿ ಎಚ್ಚರದಿಂದಿರಿ. ಕಲಾ ಕ್ಷೇತ್ರದವರಿಗೆ ವಿಶೇಷ ಅವಕಾಶಗಳು ಕೂಡಿ ಬರುವುದು. ಗುರು-ಹಿರಿಯರ ಆಶೀರ್ವಾದ ಪಡೆಯಿರಿ. ನಿಮ್ಮ ಕಷ್ಟದ ಸಮಯಕ್ಕೆ ಯಾರೂ ಸಹಾಯ ಮಾಡುತ್ತಿಲ್ಲ ಎಂದು ಬೇಸರ ಮೂಡುವುದು.

ಕುಂಭ:

ಹಮ್ಮಿಕೊಂಡ ಕಾರ್ಯಯೋಜನೆಗಳಲ್ಲಿ ಯಶಸ್ಸು ಕಾಣುವಿರಿ. ಮೇಲಾಧಿಕಾರಿಗಳಿಂದ ಪ್ರಶಂಸೆ ಕೇಳಿಬರುವುದು. ಲೇವಾದೇವಿ ವ್ಯವಹಾರದಲ್ಲಿ ತುಸು ಎಚ್ಚರಿಕೆ ವಹಿಸಿದಲ್ಲಿ ಹೆಚ್ಚಿನ ಹಾನಿ ಸಂಭವಿಸುವುದಿಲ್ಲ. ಆಪ್ತ ಸ್ನೇಹಿತರಿಗೆ ಸಹಾಯ ಮಾಡುವಿರಿ.

ಮೀನ:

Meena1

ಖರ್ಚು ವೆಚ್ಚಗಳಲ್ಲಿ ಬದಲಾವಣೆ ಕಂಡುಬರುವುದು. ಆರೋಗ್ಯ ತಪಾಸಣೆಯಲ್ಲಿ ಧನಾತ್ಮಕ ಫಲಿತಾಂಶ ಕಂಡುಬರುವುದು. ಹಣಕಾಸಿನ ವಿಷಯ ಅಷ್ಠೇನೂ ಉತ್ತಮವಿರುವುದಿಲ್ಲ. ಹಾಗಾಗಿ ನೂತನವಾಗಿ ಖರೀದಿ ಮಾಡಬೇಕೆಂದಿರುವ ವಸ್ತುಗಳನ್ನು ಸದ್ಯಕ್ಕೆ ಖರೀದಿ ಮಾಡದಿರುವುದೇ ಉತ್ತಮ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 25 ಜೂನ್, 2019!!