ದಿನ ಭವಿಷ್ಯ: 25 ನವೆಂಬರ್, 2020!!

0
1123

Astrology in kannada | kannada news ದಿನ ಭವಿಷ್ಯ: 25 ನವೆಂಬರ್, 2020!!

ದಿನ ಭವಿಷ್ಯ: 25 ನವೆಂಬರ್, 2020!!

ಮೇಷ:

ದಿನ ಭವಿಷ್ಯ

ಮೇಷ:- ಕೆಲಸ ಕಾರ್ಯಗಳಲ್ಲಿ ಮಂದಪ್ರಗತಿ ಉಂಟಾಗುವುದು. ಆದರೆ ಹೆಚ್ಚಿನ ತೊಂದರೆಯಿಲ್ಲ ಮತ್ತು ವ್ಯವಹಾರದಲ್ಲಿ ಹಾಕಿದ ಬಂಡವಾಳಕ್ಕೆ ಮೋಸವಿಲ್ಲ. ವಿವಾಹಿತ ಮಗಳಿಂದ ಶುಭ ಸಮಾಚಾರ ಕೇಳುವಿರಿ. ಆರ್ಥಿಕ ದೃಢತೆ ನಿಮ್ಮಲ್ಲಿ ಧೈರ್ಯ ತುಂಬುವುದು. ವಾಹನ ಖರೀದಿ ಸದ್ಯಕ್ಕೆ ಬೇಡ. ಅತ್ಯವಸರದಲ್ಲಿ ಯಾವುದೇ ಕಾರ್ಯಗಳನ್ನು ಮಾಡಬೇಡಿ. ಮಿತ್ರರು ಸಕಾಲದಲ್ಲಿ ಕೊಡುವ ಸಲಹೆಗಳನ್ನು ಅಲಕ್ಷಿಸಬೇಡಿ.

ವೃಷಭ:

ದಿನ ಭವಿಷ್ಯ

ವೃಷಭ:- ನಿಮ್ಮ ಕೆಲವು ನಿರ್ಧಾರಗಳು ಬೇರೆಯವರಿಗಿಂತ ಭಿನ್ನವಾಗಿರುತ್ತವೆ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನ ಹರಿಸಿ. ನೀವು ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ಅಲ್ಪ ಹಿನ್ನಡೆ ಕಾಣುವಿರಿ. ಸಾಮಾಜಿಕ ಮತ್ತು ರಾಜಕೀಯ ಸ್ಥಾನಮಾನ ಉಳಿಸಿಕೊಳ್ಳಲು ಶ್ರಮಪಡಬೇಕಾಗುವುದು. ಸಾಧು ಸಂತರ, ಗುರುಗಳ ದರ್ಶನ ಪಡೆದು ಅವರ ಆಶೀರ್ವಾದ ಪಡೆಯಿರಿ. ಆರೋಗ್ಯದ ವಿಷಯದಲ್ಲಿ ಅಲಕ್ಷೆ ಬೇಡ.

ಮಿಥುನ:

ದಿನ ಭವಿಷ್ಯ

ಮಿಥುನ:- ಉನ್ನತ ಅಧ್ಯಯನ ಮುಂದುವರೆಯಲಿದೆ. ಬರಹಗಾರರಿಗೆ ಉತ್ತಮ ಪ್ರೋತ್ಸಾಹ ಸಿಗಲಿದೆ. ಕೈಗೊಂಡ ನಿರ್ಧಾರಗಳು ಅಂತಿಮಘಟ್ಟ ತಲುಪಲಿವೆ. ಆರ್ಥಿಕ ಭದ್ರತೆ ಕಂಡುಕೊಳ್ಳಲು ತುಂಬಾ ಹೆಣಗಾಡುವಿರಿ. ಈ ವಿಷಯದಲ್ಲಿ ಯಶಸ್ಸು ನಿಧಾನವಾಗಿ ಸಿಗಲಿದೆ. ಸೋದರರಲ್ಲಿ ವಿಶ್ವಾಸ ವೃದ್ಧಿಸಲಿದೆ. ವ್ಯವಹಾರದ ಮಾತುಕತೆಯಲ್ಲಿ ಪಾರದರ್ಶಕವಾಗಿರಿ. ಸರ್ಕಾರಿ ನೌಕರರಿಗೆ ಕೊಂಚ ವಿಶ್ರಾಂತಿ ದೊರೆಯಲಿದೆ. ಆಪ್ತ ಸಮಾಲೋಚನೆ ಮಾಡಿದ ನಂತರ ಮನೆ ಕಟ್ಟುವ ವಿಚಾರ ಮಾಡಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಮಿತಿಯಿಲ್ಲದ ಶ್ರಮದಿಂದ ದೇಹಾಲಸ್ಯ ಉಂಟಾಗುವುದು. ರಾಜಕಾರಣಿಗಳು ಸಾರ್ವಜನಿಕ ಸಭೆಗಳಲ್ಲಿ ಮುಜುಗರ ಅನುಭವಿಸಬೇಕಾಗುವುದು. ಮನೆಯ ಶುಭ ಕಾರ್ಯಗಳಿಗೆ ನೀವೇ ಪ್ರಧಾನ ವ್ಯಕ್ತಿಯಾಗುವಿರಿ. ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಆಗÜಲಿದೆ. ನಿಮ್ಮ ಒಳ್ಳೆಯತನ ಅಥವಾ ಹೆಸರು ದುರುಪಯೋಗವಾಗದಂತೆ ನೋಡಿಕೊಳ್ಳಿ. ಅನವಶ್ಯಕ ಖರ್ಚುಗಳ ಮೇಲೆ ಹಿಡಿತ ಸಾಧಿಸಲು ಯತ್ನಿಸಿ.

ಸಿಂಹ:

ದಿನ ಭವಿಷ್ಯ

ಸಿಂಹ:- ಇದುವರೆಗೂ ನೀವು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಮಾನಸಿಕ ಒತ್ತಡದಿಂದ ದೂರವಾಗುವಿರಿ. ಸರ್ಕಾರಿ ನೌಕರರಿಗೆ ಮುಂಬಡ್ತಿ ದೊರೆಯಲಿದೆ. ನೀವು ಮರೆತೇ ಹೋಗಿದ್ದ ಹಣ ಅಥವಾ ಆಸ್ತಿ ನಿಮ್ಮ ಕೈ ಸೇರುತ್ತದೆ. ವ್ಯವಹಾರದಲ್ಲಿ ಹೊಸ ಪಾಲುದಾರರನ್ನು ಸೇರ್ಪಡೆ ಮಾಡಿಕೊಳ್ಳುವ ಮುನ್ನ ಆತನ ಪೂರ್ವಾಪರ ತಿಳಿಯಿರಿ. ಸಮಯಕ್ಕೆ ಸರಿಯಾಗಿ ಸ್ನೇಹಿತರ ಸಹಾಯ ದೊರೆಯಲಿದೆ. ಸಮಾಜ ಸೇವೆ ಮಾಡಲು ಬಯಸುವಿರಿ. ಕೈಗೊಂಡ ಕೆಲಸಗಳು ಪೂರ್ಣಗೊಳ್ಳಲು ಶಿವನನ್ನು ಧ್ಯಾನಿಸಿ.

ದಿನ ಭವಿಷ್ಯ

ಕನ್ಯಾ:- ನೀವು ತೆಗೆದುಕೊಳ್ಳುವ ಗಟ್ಟಿ ನಿರ್ಧಾರ ಮುಂದೆ ಅನುಕೂಲವಾಗುವುದು. ಕಲ್ಪನಾ ಲೋಕದಲ್ಲಿ ವಿಹರಿಸುವುದಕ್ಕಿಂತ ವಾಸ್ತವದ ಅರಿವಿರಲಿ. ಆರ್ಥಿಕ ಸ್ಥಿತಿಯಲ್ಲಿ ಯಾವುದೇ ವ್ಯತ್ಯಯವಿಲ್ಲ. ನೀವೆಷ್ಟು ತಾಳ್ಮೆಯಿಂದ ಇರುವಿರೋ ಅಷ್ಟು ನಿಮಗೆ ಒಳ್ಳೆಯದಾಗುವುದು. ಆದಾಯದ ಮೂಲ ಹೆಚ್ಚಲಿದೆ. ಮನೆ ಕೊಳ್ಳುವ ವಿಚಾರ ಮುಂದುವರೆಸಬಹುದು. ರಿಯಲ್‌ ಎಸ್ಟೇಟ್‌ ವ್ಯವಹಾರ ಲಾಭದಾಯಕವಾಗಲಿದೆ. ಮಕ್ಕಳಿಗೆ ಸಣ್ಣಪುಟ್ಟ ಅನಾರೋಗ್ಯ ಕಾಡಲಿದೆ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಮನೆಯ ಶುಭ ಕಾರ್ಯಗಳ ವೆಚ್ಚ ನೀವು ಭರಿಸಬೇಕಾಗುವುದು. ವ್ಯಾಪಾರಿಗಳ ಆದಾಯ ಹೆಚ್ಚಾಗಲಿದೆ. ವ್ಯವಹಾರ ಸುಸೂತ್ರವಾಗಿ ನಡೆಯಲು ಬೇರೆ ಮಾರ್ಗ ಕಂಡುಕೊಳ್ಳುವಿರಿ. ಮಠ ಮಂದಿರಗಳಿಗೆ ವಿಶೇಷ ವಂತಿಗೆ ನೀಡುವಿರಿ. ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. ಗುರು ಅನುಗ್ರಹ ಪಡೆದು ಗುರುವಿನ ಗುಲಾಮನಾಗುವುದು ಒಳ್ಳೆಯದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ನೆಂಟರ ಆಗಮನದಿಂದ ಮನೆಯಲ್ಲಿ ಸಂತಸ ನೆಲೆಸುವುದು. ಆದರೆ ಅವರ ಆಶೋತ್ತರಗಳನ್ನು ಈಡೇರಿಸುವಲ್ಲಿ ಗೊಂದಲ ಮೂಡುವುದು. ಜೀವನದಲ್ಲಿ ಅನಿರೀಕ್ಷಿತ ತಿರುವು ಬರಲಿದ್ದು, ಅದು ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ. ನಿಮ್ಮ ಕೆಲಸದ ಮಾದರಿಯನ್ನು ಎಲ್ಲರೂ ಕೊಂಡಾಡುವರು. ಹಣಕಾಸಿನ ವಿಚಾರದಲ್ಲಿ ಮೋಸ ಹೋಗುವ ಸಂಭವವಿದೆ. ಲೇವಾದೇವಿ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವವು. ಇದರಿಂದ ಮನೆಯಲ್ಲಿ ಶಾಂತಿ ನೆಲೆಸುವುದು. ಮನೆತನಕ್ಕೆ ಸಂಬಂಧಿಸಿದ ಗಂಭೀರ ಪ್ರಸಂಗ ನಿಮ್ಮ ಜಾಣತನಕ್ಕೆ ಸವಾಲಾಗುವುದು. ಆದರೆ ಕುಲದೇವತಾ ಸ್ಮರಣೆಯಿಂದ ಆತ್ಮವಿಶ್ವಾಸ ಮೂಡುವುದು. ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು. ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ಹೊಸ ಗೆಳೆಯರ ಪರಿಚಯ ನಿಮ್ಮ ಉತ್ಸಾಹ ಹೆಚ್ಚಿಸಲಿದೆ. ಮಗನ ಉದ್ಯೋಗದಲ್ಲಿ ಸಾಧಾರಣ ಪ್ರಗತಿ ಕಂಡುಬರುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ನಿಮ್ಮ ಬೇಡಿಕೆಗಳಿಗೆ ಸರ್ಕಾರದಿಂದ ತೀವ್ರ ಪ್ರತಿಕ್ರಿಯೆ ಕಂಡುಬರಲಿದೆ. ಸಾಮಾಜಿಕ ಖ್ಯಾತಿ ಪಡೆಯುವಿರಿ. ಕ್ರೀಡಾಪಟುಗಳು ತಮ್ಮ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುವರು. ಆರ್ಥಿಕ ಸ್ಥಿತಿ ಸ್ವಲ್ಪ ಏರುಪೇರಾಗುವುದು. ಮಕ್ಕಳೊಂದಿಗೆ ವ್ಯವಹರಿಸುವಾಗ ಸನ್ನಿವೇಶದ ಸೂಕ್ಷ ್ಮತೆ ಅರಿತು ಮಾತನಾಡಿ. ಕೆಲವು ವಿಷಯಗಳಲ್ಲಿ ನೀವು ನಿರ್ಲಿಪ್ತರಾಗಿದ್ದಲ್ಲಿ ಇನ್ನೂ ಉತ್ತಮ. ಮಿತ್ರರೊಡನೆ ಸತ್ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ನೀವು ಸಂಶೋಧಕರಾಗಿದ್ದರೆ ನಿಮ್ಮ ಕಾರ್ಯದಲ್ಲಿ ಅಚ್ಚರಿ ಕಾದಿದೆ.

ಕುಂಭ:

ದಿನ ಭವಿಷ್ಯ

ಕುಂಭ:- ಕಾಲ ಪಕ್ವವಾಗಿದೆ. ನೀವು ಅಂದುಕೊಂಡ ಕಾರ್ಯಗಳು ತ್ವರಿತಗತಿಯಲ್ಲಿ ಸಾಗುವವು. ನಿಮ್ಮ ಕನಸು ನನಸಾಗುವುದು. ಕಟ್ಟಡ ಕಾಮಗಾರಿ ಕೆಲಸಗಾರರಿಗೆ, ಎಂಜಿನಿಯರ್‌ಗಳಿಗೆ ಉತ್ತಮ ವಾರ. ಅನಿರೀಕ್ಷಿತವಾಗಿ ಅಧಿಕಾರ ಹಾಗೂ ಉನ್ನತ ಹುದ್ದೆಗಳು ನಿಮ್ಮನ್ನು ಹುಡುಕಿ ಬರುವವು. ಗೃಹ ಅಥವಾ ನಿವೇಶನ ಖರೀದಿಗೆ ಮನಸ್ಸು ಮಾಡುವಿರಿ. ವ್ಯಾಪಾರ ವ್ಯವಹಾರದಲ್ಲಿ ವಿಶೇಷ ಲಾಭ ಸಿಗುವುದು. ಸಾಲ ಮರುಪಾವತಿ ಆಗುವುದು.

ಮೀನ:

ದಿನ ಭವಿಷ್ಯ

ಮೀನ:- ಬಹಳ ದಿನಗಳ ನಂತರ ಹಳೆ ಮಿತ್ರರನ್ನು ಭೇಟಿಯಾಗುವ ಸಂಭವ ಇದೆ. ಯಾವುದೇ ಜವಾಬ್ದಾರಿ ಹೊರುವ ಮೊದಲು ನಿಮ್ಮ ಸಾಮರ್ಥ್ಯ‌ದ ಅರಿವಿರಲಿ. ಅತ್ಯುತ್ಸಾಹ ಅಪಹಾಸ್ಯಕ್ಕೆ ಈಡಾದೀತು. ಹಿರಿಯರಿಂದ, ಸ್ನೇಹಿತರಿಂದ ಬರಲಿರುವ ಯಾವುದೇ ಸಹಾಯಗಳನ್ನು ತಿರಸ್ಕರಿಸಬೇಡಿ. ಅನಿರೀಕ್ಷಿತ ಆರ್ಥಿಕ ಮುಗ್ಗಟ್ಟು ನಿಮ್ಮನ್ನು ಅಧೈರ್ಯಗೊಳಿಸೀತು. ಜೀವನ ವಿಧಾನವನ್ನು ಸ್ವಲ್ಪ ಬದಲಿಸಿಕೊಳ್ಳಬೇಕಾಗುವುದು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ದಿನ ಭವಿಷ್ಯ: 25 ನವೆಂಬರ್, 2020!!