Astrology in kannada | kannada news
ದಿನ ಭವಿಷ್ಯ: 26 ಜುಲೈ, 2018!!
ಮೇಷ:
ಆರೋಗ್ಯದಲ್ಲಿ ಚೇತರಿಕೆ ಕಂಡುಬಂದು ಮನಸ್ಸು ಉಲ್ಲಸಿತವಾಗಿರುವುದು. ಸಜ್ಜನರೊಡನೆ ಸಹವಾಸವು, ಸರ್ವರಿಂದ ಮಾನ ಮನ್ನಣೆಗಳು ಉಂಟಾಗುವುದು. ನಾನಾ ಮೂಲಗಳಿಂದ ಹಣಕಾಸು ಹರಿದು ಬರುವುದು. ಸ್ನೇಹಿತರ ಸಹಕಾರ ದೊರೆಯುವುದು..
ವೃಷಭ:
ಭರವಸೆಯ ವ್ಯವಹಾರದ ಅವಕಾಶವೊಂದರಿಂದ ಉತ್ತೇಜಿತರಾಗುವಿರಿ. ಇಂದಿನ ದಿನವನ್ನು ಸಂತೋಷದಿಂದ ಕಳೆಯುವಿರಿ. ಈ ದಿನ ಸರಿಯಾದ ಸಮಯಕ್ಕೆ ಭೋಜನ ಸ್ವೀಕರಿಸಲು ಕೆಲಸದ ಒತ್ತಡವಿರುತ್ತದೆ. ಊಟದಲ್ಲಿ ರುಚಿ ಕಾಣದೆ ಇರುವುದು.
ಮಿಥುನ:
ಇಂದಿನ ಸಮಯವು ನಿಮಗೆ ಸಾಧನೆ ಮಾಡಲು ಪ್ರೇರೇಪಿಸುವುದು. ಹೊಲ, ಮನೆ, ಸ್ಥಿರಾಸ್ತಿ ಕೊಂಡುಕೊಳ್ಳಲು ಯೋಜನೆಯನ್ನು ರೂಪಿಸುವಿರಿ. ಮಿತ್ರರ ಸಹಕಾರ ಹಿರಿಯರ ಆಶೀರ್ವಾದದಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುದು.
Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!
ಕಟಕ:
ವ್ಯಾಪಾರ-ವ್ಯವಹಾರದಲ್ಲಿ ನಿಮ್ಮ ಎಣಿಕೆಯಂತೆ ಲಾಭಾಂಶ ಕಂಡುಬರುವುದು. ಇಷ್ಟ ಕಾರ್ಯ ಸಿದ್ಧಿಯು. ದೇಹದಲ್ಲಿ ಆರೋಗ್ಯವು. ಬಂಧು-ಮಿತ್ರರೊಡನೆ ಭೋಜನ ಕೂಟದಲ್ಲಿ ಭಾಗವಹಿಸುವಿರಿ. ಅವಿವಾಹಿತರಿಗೆ ಶುಭ ಯೋಗ.
ಸಿಂಹ:
ಖರ್ಚು ವೆಚ್ಚಗಳು ಹೆಚ್ಚಾಗಲಿವೆ. ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ. ಷೇರು ವಹಿವಾಟುದಾರರಿಗೆ ಶುಭ ಯೋಗ. ಉದ್ಯೋಗದಲ್ಲಿ ಕಿರಿಕಿರಿಯು. ಬಂಧು ಮಿತ್ರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಒಳ್ಳೆಯದು. ಆರೋಗ್ಯದಲ್ಲಿ ಉತ್ತಮ.
ಕನ್ಯಾ:
ಜವಾಬ್ದಾರಿ ಕೆಲಸಗಳು ನಿಮ್ಮನ್ನು ಹೈರಾಣ ಮಾಡುವುದು. ಕೆಲಸದ ಕರ್ತವ್ಯಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕು. ಸಹೋದ್ಯೋಗಿಗಳು ನಿಮ್ಮ ನೆರವಿಗೆ ಬರುವರು. ಹಣವು ನೀರಿನಂತೆ ಖರ್ಚಾಗುವುದು. ತಾಳ್ಮೆಯಿಂದಿರಿ.
Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!
ತುಲಾ:
ಮನೋಕಾಮನೆಗಳು ಪೂರ್ಣಗೊಳ್ಳುವವು. ನೀವು ಆರಂಭಿಸಿದ ಕಾರ್ಯಗಳು ಮುಗಿಯುವ ಹಂತದಲ್ಲಿದ್ದು ನೂತನ ಪ್ರಾಜೆಕ್ಟ್ಗಳು ನಿಮ್ಮನ್ನು ಕೈ ಬೀಸಿ ಕರೆಯುವುದು. ಸಂಗಾತಿಯ ಸಲಹೆಯಂತೆ ಮುಂದುವರಿಯುವುದು ಕ್ಷೇಮಕರ.
ವೃಶ್ಚಿಕ:
ದೇಹದಲ್ಲಿ ಉತ್ತಮ ಚೈತನ್ಯವಿದ್ದರೂ ದೇಹ ಮನಸ್ಸು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದರಿಂದ ಇಂದಿನ ಕಾರ್ಯದಲ್ಲಿ ಅಪಯಶಸ್ಸು ಕಾಣುವಿರಿ. ಆಂಜನೇಯ ಸ್ತೋತ್ರ ಪಠಿಸಿರಿ. ಇದರಿಂದ ಕಾರ್ಯದಲ್ಲಿ ಯಶಸ್ಸು ದೊರೆಯುವುದು.
ಧನಸ್ಸು:
ಚಿತ್ತ ಚಾಂಚಲ್ಯದಿಂದಾಗಿ ಕೆಲಸ ಕಾರ್ಯಗಳಲ್ಲಿ ತಪ್ಪುಗಳು ನುಸುಳುವುದು, ಮಕ್ಕಳೊಡನೆ ಕೆಲಕಾಲ ಕಳೆಯಿರಿ. ಮಧ್ಯಾಹ್ನದ ವೇಳೆಗೆ ಗೊಂದಲದ ಮನಸ್ಥಿತಿ ಅಂತ್ಯಗೊಳ್ಳುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.
ಮಕರ:
ಮನೆಯ ಅಭಿವೃದ್ಧಿಯ ಕೆಲಸಗಳತ್ತ ಗಮನ ಕೊಡುವುದು ಒಳ್ಳೆಯದು. ಕೋರ್ಟು ಕಚೇರಿಯ ಕೆಲಸಗಳಲ್ಲಿ ಯಶಸ್ಸು ದೊರೆಯುವುದು. ಅವಿವಾಹಿತರಿಗೆ ವಿವಾಹಯೋಗ ಸಾಧ್ಯತೆ. ಬಂಧುಗಳು ಸಹಕಾರ ನೀಡುವರು.
ಕುಂಭ:
ನಿಮ್ಮ ಸ್ನೇಹಿತರಿಂದ ಸಹಾಯ ಪಡೆಯುವಿರಿ. ಅದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ನೂತನ ಪರಿಸರದಲ್ಲಿ ಕೆಲಸ ಮಾಡಬೇಕಾಗುವುದು ಮತ್ತು ನೂತನ ಅನುಭವ ಪಡೆಯುವಿರಿ. ಆರ್ಥಿಕ ಸ್ಥಿತಿ ಉತ್ತಮ.
ಮೀನ:
ನೀವು ಇಂದು ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೊದಲು ಎರಡೆರಡು ಬಾರಿ ಯೋಚಿಸಿ ಕಾರ್ಯ ಪ್ರವೃತ್ತರಾಗಿರಿ. ತಪ್ಪು ಕಲ್ಪನೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಿರಿ. ಆರೋಗ್ಯ ಸದೃಢವಾಗಿರುವುದು.
Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ
ದಿನ ಭವಿಷ್ಯ: 26 ಜುಲೈ, 2018!!