Astrology in kannada | kannada news ದಿನ ಭವಿಷ್ಯ: 30 ನವೆಂಬರ್, 2020!!
ದಿನ ಭವಿಷ್ಯ: 30 ನವೆಂಬರ್, 2020!!
ಮೇಷ:
ಮೇಷ:- ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಪ್ರಗತಿಯತ್ತ ಸಾಗುವವು. ಕೆಲವರಿಗೆ ಬಡ್ತಿ ಸಿಗುವುದು. ದೂರದ ಊರುಗಳಿಗೆ ವರ್ಗಾವಣೆಗೆ ಹೋಗುವುದಕ್ಕಿಂತ ಇದ್ದಲ್ಲೇ ಇದ್ದರೆ ಬಡ್ತಿ ದೊರೆಯುವುದು.
ವೃಷಭ:
ವೃಷಭ:- ಹಣಕಾಸಿನ ಹರಿವಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಿ ಹಣ ಬರುವ ಮಾರ್ಗ ನಿಚ್ಚಳವಾಗುವುದು. ವಾಕ್ ಚಾತುರ್ಯದಿಂದ ನಿಮ್ಮ ಸಹಪಾಠಿಗಳನ್ನು ಗೆಲ್ಲುವಿರಿ. ದುಷ್ಟ ಫಲ ನಿವಾರಣೆಗಾಗಿ ಗಣಪತಿಯನ್ನು ಆರಾಧಿಸಿರಿ.
ಮಿಥುನ:
ಮಿಥುನ:- ನಿಮ್ಮ ಬುದ್ಧಿ ಚಾತುರ್ಯಕ್ಕೆ ಎಂತಹವರೂ ತಲೆ ಬಾಗುವರು. ಜೀವನದಲ್ಲಿನ ಕಷ್ಟಗಳ ಮೇಲೆ ಜಯ ಸಾಧಿಸುವಿರಿ. ಉತ್ತಮ ಸ್ನೇಹಿತರ ಬೆಂಬಲ ನಿಮಗೆ ದೊರೆಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
Also read: ನೀವು ಯಾವ ಬಣ್ಣದ ಬಟ್ಟೆ ಹಾಕಿದ್ರೆ ಒಳ್ಳೇದಾಗುತ್ತೆ ಇಲ್ಲಿದೆ ನೋಡಿ ಬಟ್ಟೆ ಮಾಹೆ…!
ಕಟಕ:
ಕಟಕ:- ನಂಬಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಕ್ರಮೇಣ ತೊಂದರೆಗೆ ದಾರಿ ಆಗುವುದು. ಕೆಲವು ಅಡೆತಡೆಗಳು ಉಂಟಾಗುವ ಸಾಧ್ಯತೆ ಇದೆ. ಕುಲದೇವತಾ ಸ್ಮರಣೆ ಮಾಡಿರಿ. ಗುರು, ಹಿರಿಯರ ಆಶೀರ್ವಾದ ಪಡೆಯಿರಿ.
ಸಿಂಹ:
ಸಿಂಹ:- ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ಸಂಗಾತಿಯಿಂದ ದೂರ ಇರುವುದು ಒಳ್ಳೆಯದಲ್ಲ. ನೀವು ಆಡುವ ಮಾತುಗಳನ್ನು ಇನ್ನೊಬ್ಬರೂ ಅಷ್ಟೇ ಗಹನವಾಗಿ ಚಿಂತಿಸುತ್ತಾರೆ ಎಂಬುದನ್ನು ತಿಳಿಯಿರಿ.
ಕನ್ಯಾ:
ಕನ್ಯಾ:-ತಾಯಿಯ ಸುಖ ಮತ್ತು ವಾಹನ ಸುಖ ದೊರೆಯುವುದಾದರೂ ಸಂಗಾತಿಯ ಅಸಹಕಾರ ನಿಮ್ಮ ಮನೋಚಿಂತನೆಯನ್ನು ಹೆಚ್ಚಿಸುವುದು. ಮನೋನಿಯಾಮಕ ರುದ್ರ ದೇವರನ್ನು ಭಜಿಸಿ, ಒಳಿತಾಗುವುದು.
Also read: ಜಾತಕದಲ್ಲಿ ಸಂತಾನ ಯೋಗದ ಫಲ ಯೋಗಗಳು ಇಲ್ಲಿವೆ ನೋಡಿ…
ತುಲಾ:
ತುಲಾ:-ಹಣಕಾಸಿನ ತೊಂದರೆ ಇರುವುದಿಲ್ಲ. ಬಾಳಸಂಗಾತಿಯೊಡನೆ ಚರ್ಚಿಸಿ ಸಲಹೆ ಪಡೆಯಲು ಸಕಾಲವಾಗಿದೆ. ನೀವಾಡುವ ಮಾತು ಇತರರಿಗೆ ರುಚಿಸುವುದಿಲ್ಲ. ಆರೋಗ್ಯದ ಸಲುವಾಗಿ ಗಣಪತಿಯನ್ನು ಪ್ರಾರ್ಥಿಸಿ.
ವೃಶ್ಚಿಕ:
ವೃಶ್ಚಿಕ:- ನಿಮ್ಮ ಸಮೀಪದ ಜನ ಅಥವಾ ಬಂಧುಗಳೇ ನಿಮ್ಮ ಕಾರ್ಯ ವೈಖರಿಯನ್ನು ಟೀಕಿಸುವರು. ನೀವು ಸಮಾಜದಲ್ಲಿ ಗಳಿಸುತ್ತಿರುವ ಗೌರವ, ಆದರಗಳನ್ನು ಕಂಡು ಇತರರು ಹೊಟ್ಟೆಕಿಚ್ಚು ಪಡುವರು. ನಿಮ್ಮ ಬಗ್ಗೆ ದೂರು ಹೇಳಿದರೆ ನಕ್ಕು ಸುಮ್ಮನಾಗಿ.
ಧನಸ್ಸು:
Also read: ಯಾವ ನಕ್ಷತ್ರದಂದು ಯಾವ ಕಾರ್ಯ ಮಾಡಿದರೆ ಶ್ರೇಷ್ಠ ಇಲ್ಲಿದೆ ನೋಡಿ..
ಧನಸ್ಸು:- ನೀವು ನಿಮ್ಮ ಮಕ್ಕಳ ಮೇಲೆ ಇಟ್ಟಿರುವ ಭರವಸೆ ಕಾರ್ಯರೂಪಕ್ಕೆ ಬರುವುದು. ಸಾಲದ ತೀರುವಳಿ ಮಾಡಿದಲ್ಲಿ ಅನುಕೂಲವಾಗುವುದು. ಭಗವಂತನ ಕೃಪೆ ಇದ್ದಲ್ಲಿ ನಿಮ್ಮನ್ನು ಜನರು ಹಾಡಿ ಕೊಂಡಾಡುವರು.
ಮಕರ:
ಮಕರ:- ವ್ಯಾಪಾರ, ವ್ಯವಹಾರ ಎಂದರೆ ಲಾಭ ನಷ್ಟ ಇದ್ದದ್ದೇ. ಎಲ್ಲಾ ಕಾಲದಲ್ಲೂ ಲಾಭವೇ ಆಗುತ್ತದೆ ಎಂದು ತಿಳಿಯಬಾರದು. ಮುಷ್ಟಿ ಕಾಳು ಚೆಲ್ಲಿ ಮೂಟೆ ಕಾಳನ್ನು ಪಡೆಯುವಂತೆ ನಿಮ್ಮ ಹಣ ಖರ್ಚಾಗುವುದು. ಆದರೂ ಮುಂದೆ ಒಳಿತಾಗುವುದು.
ಕುಂಭ:
ಕುಂಭ:- ಮಾತು ಬಲ್ಲವನಿಗೆ ಜಗಳವಿಲ್ಲ ಎಂದರು ಹಿರಿಯರು. ನೀವಾಡುವ ಮಾತುಗಳು ಮತ್ತೊಬ್ಬರಿಗೆ ನೋವನ್ನುಂಟು ಮಾಡುವುದು. ಈ ಬಗ್ಗೆ ಜಾಗ್ರತೆ ಇರಲಿ. ಆರೋಗ್ಯದ ಕಡೆ ಗಮನ ಇರಲಿ.
ಮೀನ:
Also read: ನಿಮ್ಮ ಜಾತಕದಲ್ಲಿ ಉದ್ಯೋಗ ವಿಚಾರಗಳ ಬಗ್ಗೆ ತಿಳಿದುಕೊಳ್ಳಿ!!
ಮೀನ:- ನಿಮ್ಮ ಬುದ್ಧಿ ಬಲದಿಂದ ಪದೋನ್ನತಿ ಸಿಗುವುದು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಓದು ಮುಂದುವರಿಕೆಯ ಬಗ್ಗೆ ಚಿಂತನೆ ನಡೆಸುವಿರಿ. ಸಹಜವಾಗಿಯೇ ಕೆಲವರು ವಿರೋಧಿಸುವ ಜನ ಇರುತ್ತಾರೆ. ಅವರ ಟೀಕೆಗಳಿಗೆ ಕಿವಿಗೊಡದಿರಿ.
Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ
ದಿನ ಭವಿಷ್ಯ: 30 ನವೆಂಬರ್, 2020!!