ದಿನ ಭವಿಷ್ಯ: 8 ಡಿಸೆಂಬರ್, 2018!!

0
529
ದಿನ ಭವಿಷ್ಯ

Astrology in kannada | kannada news ದಿನ-ಭವಿಷ್ಯ: 8 ಡಿಸೆಂಬರ್, 2018!!

ದಿನ-ಭವಿಷ್ಯ: 8 ಡಿಸೆಂಬರ್, 2018!!

ಮೇಷ:

ದಿನ ಭವಿಷ್ಯ

ಮೇಷ:- ಮಾನಸಿಕ ಶಾಂತಿಗೆ ಒದ್ದಾಡುವ ಸನ್ನಿವೇಶ ಎದುರಾಗುವುದು. ಈಗ ತಾನೇ ಪರೀಕ್ಷೆ ಮುಗಿದಿದೆ. ಫಲಿತಾಂಶಕ್ಕೆ ಕಾಯುವುದು ಅನಿವಾರ್ಯ. ದೈವಬಲ ನಿಮ್ಮ ಮೇಲಿರುವುದರಿಂದ ನಿರಾಶರಾಗುವುದು ಬೇಡ.

ವೃಷಭ:

ದಿನ ಭವಿಷ್ಯ

ವೃಷಭ:- ಹೊಸ ಕಾರ್ಯ ಯೋಜನೆಗೆ ಏಕಾಏಕಿ ಹಣ ಸುರಿಯುವಿರಿ. ತಜ್ಞರ ಜೊತೆಯಲ್ಲಿ ಮುಕ್ತವಾಗಿ ಚರ್ಚಿಸಿ ಹಣ ವಿನಿಯೋಗದ ಬಗ್ಗೆ ತೀರ್ಮಾನ ಕೈಗೊಳ್ಳಿ. ಮನೆಯ ಸದಸ್ಯರು ನಿಮಗೆ ಸಂತಸ ಉಂಟು ಮಾಡುವರು.

ಮಿಥುನ:

ದಿನ ಭವಿಷ್ಯ

ಮಿಥುನ:- ಬೆಂಕಿಯೊಡನೆ ಸರಸ ಬೇಡ. ಅನ್ಯಲಿಂಗಿಗಳು ಅಕ್ಷ ರಶಃ ನಿಮ್ಮ ನಿದ್ದೆಗೆಡಿಸುವಂತಹ ಸನ್ನಿವೇಶಗಳು ಹೇರಳವಾಗಿವೆ. ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಧಾರ್ಮಿಕ ಕಾರ್ಯಗಳಲ್ಲಿ ಏಕಾಗ್ರತೆಯಿಂದ ಭಾಗವಹಿಸಿ.

ಕಟಕ:

ದಿನ ಭವಿಷ್ಯ

ಕಟಕ:- ಜೀವನಾನುಭವಗಳೇ ಇರದ ಮಕ್ಕಳನ್ನು ಹತೋಟಿಗೆ ತರುವುದು ಕಷ್ಟÜ. ಅವರನ್ನು ಕಣ್ಣಲ್ಲಿ ಕಣ್ಣಿರಿಸಿ ಕಾವಲು ಕಾಯುವುದು ಅಗತ್ಯ. ಇಲ್ಲದಿದ್ದಲ್ಲಿ ಬೆಳೆದ ಮಕ್ಕಳಿಂದ ಮನಸ್ಸಿಗೆ ನೋವಾಗುವ ಘಟನೆಗಳು ಜರುಗುವವು.

ಸಿಂಹ:

ದಿನ ಭವಿಷ್ಯ

ಸಿಂಹ:- ತಮಾಷೆಗಾಗಿ ಕುಹಕ ನುಡಿಗಳನ್ನು ಮತ್ತು ತಲೆಹರಟೆಯ ಹೇಳಿಕೆಗಳನ್ನು ನೀಡಿ ವಿವಾದಕ್ಕೆ ಸಿಲುಕುವ ವಾತಾವರಣ ಸೃಷ್ಟಿಯಾಗಲಿದೆ. ಇದರಿಂದ ನಿಮ್ಮ ಘನತೆ, ಗೌರವಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರ ಅಗತ್ಯ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಈ ಹಿಂದೆ ಹುಸಿ ಕೋಪ ತೋರಿಸಿ ವರ್ತಮಾನ ಗೆದ್ದಿದ್ದೀರಿ. ಆದರೆ ಇದು ಎಲ್ಲಾ ಕಾಲಕ್ಕೂ ಅನ್ವಯವಾಗುವುದಿಲ್ಲ. ಯಾವುದೋ ಸಬೂಬು ಹೇಳಿ ನಿಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಾರಿರಿ. ನೀವು ನಿರ್ವಂಚನೆಯಿಂದ ಕಾರ್ಯ ಪ್ರವೃತ್ತರಾಗಿ.

ತುಲಾ:

ತುಲಾ:- ನಿಮ್ಮನ್ನು ಗೌರವ, ಆದರಗಳಿಂದ ನೋಡುವ ವ್ಯಕ್ತಿಗಳೂ ಒತ್ತಡ ಸೃಷ್ಟಿಸುವ ಸಾಧ್ಯತೆ ಇದೆ. ಹಾಗಾಗಿ ನಿಮ್ಮ ಆಚಾರ ವಿಚಾರಗಳಲ್ಲಿ ಬದ್ಧತೆ ಇರಲಿ. ಯಾರೂ ಗಮನಿಸುತ್ತಿಲ್ಲ ಎಂದು ಅನ್ಯ ಹಾದಿ ತುಳಿಯದಿರಿ. ಮುಂದೆ ಇದರಿಂದ ತೊಂದರೆ ಆಗುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ನಿಮ್ಮ ಎದುರಾಳಿಗಳೇ ನಿಮ್ಮ ಬಳಿ ಬಂದು ಶರಣಾಗಿ ಸಹಾಯ ಕೇಳಬಹುದು. ಏಕೆಂದರೆ ಅವರೆಲ್ಲರೂ ಗೆದ್ದೆತ್ತಿನ ಬಾಲ ಹಿಡಿಯುವವರೇ ಆಗಿದ್ದಾರೆ. ನೀವು ಈಗಾಗಲೇ ಪರೀಕ್ಷೆಯಲ್ಲಿ ಗೆದ್ದಿರುವಿರಿ. ಫಲಿತಾಂಶ ಬರಬೇಕಷ್ಟೆ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ನಿಮ್ಮನ್ನು ನಂಬಿದ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಯೂ ನಿಮ್ಮ ಬಗ್ಗೆ ತಪ್ಪು ಕಲ್ಪನೆಯಿಂದ ಕೂಗಾಡುವ ಸಾಧ್ಯತೆ ಇದೆ. ಎಲ್ಲವನ್ನು ಮುಗುಳು ನಗೆಯಿಂದ ಸ್ವಾಗತಿಸಿ ಒಳಿತಾಗುವುದು. ಗುರು ಹಿರಿಯರ ಆಶೀರ್ವಾದ ನಿಮ್ಮ ಮೇಲಿದೆ.

ಮಕರ:

ದಿನ ಭವಿಷ್ಯ

ಮಕರ:- ಜೀವನದ ಎಲ್ಲಾ ಕಾಲವು ಚೈತ್ರಮಾಸವೇ ಆಗಿರುವುದಿಲ್ಲ. ದಿಢೀರನೆ ಕೆಲವು ಸವಾಲುಗಳು ಎದುರಾಗುವ ಸಾಧ್ಯತೆ ಇದೆ. ನಿಮ್ಮ ಸಹೋದ್ಯೋಗಿಗಳು ಶರತ್ತು ರಹಿತವಾಗಿ ಸಹಕಾರ ನೀಡುವರು.

ಕುಂಭ:

ದಿನ ಭವಿಷ್ಯ

ಕುಂಭ:- ಮುಖ್ಯವಾದ ಸಂಘಟನಾ ಶಕ್ತಿಯನ್ನು ನೀವು ಪ್ರದರ್ಶಿಸಿ. ಇತರರಿಂದ ಪ್ರಶಂಸೆಗೆ ಒಳಗಾಗುವಿರಿ. ನಿಮ್ಮ ಮೇಲಧಿಕಾರಿಗಳ ಮನೆಯಲ್ಲಿ ಔತಣಕೂಟಕ್ಕೆ ನಿಮಗೆ ಆಮಂತ್ರಣ ಬರುವ ಸಾಧ್ಯತೆ ಇದೆ.

ಮೀನ:

ದಿನ ಭವಿಷ್ಯ

ಮೀನ:- ನಿಮ್ಮಲ್ಲಿ ಪ್ರತಿಭೆಯಿದ್ದರೂ ಕನ್ನಡಿಯಲ್ಲಿನ ಐಶ್ವರ್ಯ ದಂತೆ ನಿತ್ಯ ಜೀವನದಲ್ಲಿ ಉಪಯೋಗಕ್ಕೆ ಬರುತ್ತಿಲ್ಲ. ಗುರು ಒಲಿದರೆ ಕೊರಡು ಕೊನರುವುದಯ್ಯಾ ಎನ್ನುವಂತೆ ಸೂಕ್ತ ಗುರುಗಳ ಸಲಹೆ ಪಡೆಯಿರಿ.

ದಿನ-ಭವಿಷ್ಯ: 8 ಡಿಸೆಂಬರ್, 2018!!