ಕನ್ನಡದ ಚಿನ್ನದ ಹುಡುಗಿ ದಾಮೀನಿ ಕೆ.ಗೌಡ

0
837

ರಾಜ್ಯದ ಭರವಸೆಯ ಈಜು ಪಟು ದಾಮೀನಿ ಕೆ.ಗೌಡ ಅವರು ರಾಂಚಿಯಲ್ಲಿ ನಡೆದಿರುವ ೭೦ನೇ ಗ್ಲೇನ್‌ಮಾರ್ಕ್ ಸೀನಿಯರ್ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಬಂಗಾರದ ಸಾಧನೆಯನ್ನು ಮಾಡಿದ್ದಾರೆ.
ವನಿತೆಯರ ೨೦೦ ಮೀಟರ್ ಬಟರ್‌ಫ್ಲೈ ವಿಭಾಗದಲ್ಲಿ ದಾಮೀನಿ ೨ ನಿಮಿಷ ೨೧.೯೯ ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಈ ವಿಭಾಗದ ದ್ವಿತೀಯ ಸ್ಥಾನ ಮಾಹಾರಾಷ್ಟ್ರದ ತ್ರೀಷಾ ಹಾಗೂ ಮೂರನೇ ಸ್ಥಾನ ಚತ್ತೀಸಗಡ್‌ದ ಸೃಷ್ಟಿ ನಾಗ್ ಪಾಲಾಯಿತು.
ಉಳಿದಂತೆ ಪುರುಷರ ೨೦೦ ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಅವಿನಾಶ್ ಮಾನಿ (೧:೫೬.೧೩ ಸೆ.) ಕಂಚು ಪಡೆದರು. ೫೦ ಮೀಟರ್ ಬ್ರೇಕ್‌ಸ್ಟ್ರೋಕ್ ವಿಭಾದಲ್ಲಿ ವೈಷ್ನವ ಹೆಗಡೆ (೨೯.೧೭ ಸೆ.) ಬೆಳ್ಳಿಗೆ ಕೊರಳೊಡ್ಡಿದ್ದಾರೆ.
ಪುರುಷರ ೪*೧೦೦ ಮೀಟರ್ ಮೆಡ್ಲಿ ರಿಲೇಯಲ್ಲಿ ಕರ್ನಾಟಕ ತಂಡ (೩:೫೨.೫೨ ಸೆ.) ಬೆಳ್ಳಿ ಪಡೆದುಕೊಂಡಿದೆ. ಈ ವಿಭಾಗದ ಸ್ವರ್ಣ ಮಹಾರಾಷ್ಟ್ರ (೪:೩೬೦.೩೧ ಸೆ.) ಪಾಲಾದರೆ, ಕಂಚು ಗುಜರಾತ್ (೪:೪೧.೦೧ ಸೆ.) ಬಾಚಿಕೊಂಡಿದೆ.
ವನಿತೆಯರ ೪*೪೦೦ ಮೀಟರ್ ಮೆಡ್ಲಿ ರಿಲೇಯಲ್ಲಿ ಕರ್ನಾಟಕ ರಜತ (೪:೩೮.೩೬ ಸೆ.) ಪಡೆದು ಬೀಗಿತು.