ಅಪಘಾತದಲ್ಲಿ ದರ್ಶನ್ ಅಭಿಮಾನಿ ಸಾವು; ಸಹೋದರಿಯರ ಮದುವೆ ಖರ್ಚು ಕೊಡಲು ಒಪ್ಪಿಕೊಂಡ ಒಡೆಯ ದರ್ಶನ್.!

0
367

ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ಬಿರುದು ಪಡೆದಿರುವ ದರ್ಶನ್ ಅಂದರೆ ಅಭಿಮಾನಿಗಳಿಗೆ ಅದೇನೋ ವಿಶೇಷ ಅಭಿಮಾನ ಏಕೆಂದರೆ ಸದಾ ಬಡವರ ಬಗ್ಗೆ, ಕೂಲಿ ಕಾರ್ಮಿಕರ ಬಗ್ಗೆ ಕಾಳಜಿವಹಿಸುವ ದರ್ಶನ್ ಅಪಾರ ಅಭಿಮಾನಿಗಳನ್ನು ಹೊಂದಿ ಪ್ರತಿಯೊಂದು ಸಿನಿಮಾದಲ್ಲಿವೂ ಯಶಸ್ವಿಯಾಗುತ್ತಿದ್ದಾರೆ. ಸಿನಿಮಾದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಕಷ್ಟ ಎಂದು ಬಂದವರ ಪಾಲಿನ ಕರುಣಾಮಯಿ. ಯಾಕಂದ್ರೆ ಕಷ್ಟ ಅಂತ ಬರೋರಿಗೆ ಸಹಾಯ ಮಾಡುವ ದೊಡ್ಡ ಗುಣವಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಪಘಾತದಲ್ಲಿ ಮೃತಪಟ್ಟ ಅಭಿಮಾನಿ ಒಬ್ಬರ ಸಹೋದರಿಯರ ಮದುವೆ ಖರ್ಚು ಕೊಡಲು ಒಪ್ಪಿಕೊಂಡು ಮಾದರಿಯಾಗಿ ಅಭಿಮಾನಿಗಳ ಹೃದಯದಲ್ಲಿ ಮತ್ತಷ್ಟು ಪ್ರಿಂಟ್ ಆಗಿದ್ದಾರೆ.

ಮದ್ವೆ ಖರ್ಚು ವಹಿಸಿಕೊಂಡ ಡಿ-ಬಾಸ್?

ಹೌದು ಇತೀಚೆಗಷ್ಟೇ ದರ್ಶನ್ ಅವರ ಪುತ್ರ ವಿನೀಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವೇಳೆ ದರ್ಶನ್ ಕಳೆದ ವರ್ಷ ಅಪಘಾತದಲ್ಲಿ ಮೃತಪಟ್ಟಿದ್ದ ಅಭಿಮಾನಿ ರಾಕೇಶ್ ಕುಟುಂಬಕ್ಕೆ ಸಹಾಯ ಮಾಡಲು ನಿರ್ಧರಿಸಿದ್ದರು. ಕಳೆದ ವರ್ಷ ವಿನೀಶ್ ಹುಟ್ಟುಹಬ್ಬ ಆಚರಿಸಲು ರಾಕೇಶ್ ರಾಜರಾಜೇಶ್ವರಿ ನಗರಕ್ಕೆ ಬರುತ್ತಿದ್ದರು. ಆ ವೇಳೆ ಅಪಘಾತವಾಗಿ ರಾಕೇಶ್ ಮೃತಪಟ್ಟಿದ್ದರು. ಹೀಗಾಗಿ ಮಗನ ಹುಟ್ಟುಹಬ್ಬದ ದಿನ ಈ ರೀತಿಯ ಘಟನೆ ನಡೆದಿರುವುದರಿಂದ ದರ್ಶನ್ ತುಂಬಾ ಬೇಸರ ಮಾಡಿಕೊಂಡಿದ್ದರು.

ಅಂದು ದರ್ಶನ್ ಅಭಿಮಾನಿ ರಾಕೇಶ್ ಕುಟುಂಬಕ್ಕೆ ಎರಡು ಲಕ್ಷ ರೂ. ಸಹಾಯ ಕೂಡ ಮಾಡಿದ್ದರು. ಈಗ ಅದೇ ಕುಟುಂಬಕ್ಕೆ ದರ್ಶನ್ ಆಸರೆ ಆಗಿ ನಿಂತಿದ್ದಾರೆ. ಅಕ್ಟೋಬರ್ 31 ರಂದು ನಡೆದ ವಿನೀಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ರಾಕೇಶ್ ಕುಟುಂಬದವರನ್ನು ದರ್ಶನ್ ಕರೆಯಿಸಿಕೊಂಡಿದ್ದರು. ಆಗ ರಾಕೇಶ್ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ಹಣ ಸಹಾಯ ಮಾಡುವುದಾಗಿ ದರ್ಶನ್ ಭರವಸೆ ನೀಡಿದ್ದಾರೆ. ರಾಕೇಶ್ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈತನಿಗೆ ಕೀರ್ತನಾ ಮತ್ತು ನಾಗವೇಣಿ ಎಂಬ ಸಹೋದರಿಯರು ಇದ್ದಾರೆ. ಹೀಗಾಗಿ ಇಂದು ರಾಕೇಶ್ ಅಗಲಿರುವ ಕಾರಣ ದರ್ಶನ್ ಇಬ್ಬರು ಸಹೋದರಿಯರ ಮದುವೆ ಖರ್ಚನ್ನು ವಹಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ದರ್ಶನ್ ಮಾನವೀಯತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ

ಮದುವೆಗೆ ಕರ್ಚು ನೀಡಿದ ದರ್ಶನ್

ಮೊನ್ನೆ ಅಕ್ಟೋಬರ್ 31 ರಂದು ನಡೆದ ವಿನೀಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ರಾಕೇಶ್ ಕುಟುಂಬದವರನ್ನು ದರ್ಶನ್ ಕರೆಯಿಸಿಕೊಂಡಿದ್ದರು. ಇದೇ ಸಂದರ್ಭದಲ್ಲಿ ರಾಕೇಶ್ ಕುಟುಂಬದ ಹೆಣ್ಣುಮಕ್ಕಳ ಮದುವೆಗೆ ಹಣ ಸಹಾಯ ಮಾಡುವುದಾಗಿ ದರ್ಶನ್ ಭರವಸೆ ನೀಡಿದ್ದಾರೆ. ಖಾಸಗಿ ಕಾರ್ಖಾನೆಯೊಂದರಲ್ಲಿ ರಾಕೇಶ್ ಕೆಲಸ ಮಾಡುತ್ತಿದ್ದರು. ರಾಕೇಶ್ ಗೆ ಕೀರ್ತನಾ ಮತ್ತು ನಾಗವೇಣಿ ಎಂಬ ಸಹೋದರಿಯರು ಇದ್ದಾರೆ. ರಾಕೇಶ್ ಸಹೋದರಿಯರ ಮದುವೆ ಖರ್ಚನ್ನ ವಹಿಸಿಕೊಳ್ಳಲು ದರ್ಶನ್ ನಿರ್ಧಾರ ಮಾಡಿದ್ದಾರೆ.

ಅಪಾರ ಅಭಿಮಾನಗಳನ್ನು ಹೊಂದಿದ್ದು ಯಾಕೇ?

ಕಷ್ಟದಲ್ಲಿ ಇದ್ದವರಿಗೆ, ನೊಂದವರಿಗೆ ದರ್ಶನ್ ಹೀಗೆ ಒಂದಲ್ಲಾ ಒಂದು ರೀತಿ ಸಹಾಯ ಮಾಡುತ್ತಾ ಬರುತ್ತಿದ್ದಾರೆ. ದರ್ಶನ್ ಮೇಲಿನ ಅಭಿಮಾನ ಹೆಚ್ಚಾಗುವುದು ಇಂತಹ ಕಾರಣಗಳಿಗೆ. ರಾಕೇಶ್ ಸಾವಿನ ಕುರಿತು ನೊಂದಿರುವ ದರ್ಶನ್ ‘ಸೇಫ್ ಡ್ರೈವ್’ ಬಗ್ಗೆ ಅಭಿಮಾನಿಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ. ದೂರದ ಊರುಗಳಿಗೆ ಹೋಗುವಾಗ ದ್ವಿಚಕ್ರ ವಾಹನ ಬಳಸದಂತೆ ಮನವಿ ಮಾಡುತ್ತಿದ್ದಾರೆ.