ದಸರಾ ಕ್ರೀಡಾ ಕೂಟದಲ್ಲಿ ಅಥ್ಲೆಟಿಕ್ಸ್ನವಿಭಾಗದಲ್ಲಿ ಒಟ್ಟು ಮೂರು ನೂತನ ದಾಖಲೆ

0
783

ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ದಸರಾ ಕ್ರೀಡಾ ಕೂಟದಲ್ಲಿ ಅಥ್ಲೆಟಿಕ್ಸ್‌ನ ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ಒಟ್ಟು ಮೂರು ನೂತನ ದಾಖಲೆ ನಿರ್ಮಾಣವಾಗಿವೆ.

ಮೈಸೂರು: ಪುರುಷರ ವಿಭಾಗದಲ್ಲಿ ೧೫೦೦ ಮೀ. ಓಟವನ್ನು ಬೆಂಗಳೂರು ನಗರದ ಕೆ.ಎ. ಭರತ್ ೩:೫೮:೦ ನಿಮಿಷದಲ್ಲಿ ಪೂರ್ಣಗೊಳಿಸಿ ದಾಖಲೆ ನಿರ್ಮಿಸಿದರು. ಈ ಮೂಲಕ ೪:೦೧ ಸೆ. ಹಿಂದಿನ ದಾಖಲೆಯನ್ನು ಮುರಿದರು. ಮೈಸೂರಿನ ವಿನಾಯಕ ಘಾಡಿ ದ್ವಿತೀಯ ಮತ್ತು ಬೆಂಗಳೂರು ಗ್ರಾಮಾಂತರದ ಟಿ.ಎಸ್. ಸಂದೀಪ್- ತೃತೀಯ ಸ್ಥಾನ ಪಡೆದರು.

03-bkm5

ಡಿಸ್ಕಸ್ ಎಸೆತದಲ್ಲಿ ಬೆಳಗಾವಿಯ ಕೀರ್ತಿ ಕುಮಾರ್ ನೂತನ ಕೂಟ ದಾಖಲೆಯನ್ನು ನಿರ್ಮಿಸಿದರು. ೪೯.೭೭ ಮೀ ಎಸೆದು ಸಾಧನೆ ಮಾಡಿದರು. ಈ ವಿಭಾದ ದ್ವಿತೀಯ ಸ್ಥಾನ ಮೈಸೂರಿನ ವಿ.ಎಸ್. ವಿಖ್ಯಾತ್ ಪಾಲಾದರೆ, ಮೂರನೇ ಸ್ಥಾನ ಎಂ.ಆರ್. ನಂದೀಶ್ ಪಾಲಾಯಿತು.

೪೦೦ ಮೀ. ಓಟದಲ್ಲಿ, ಬೆಂಗಳೂರು ನಗರದ ತರುಣ್ ಶೇಖರ್- ಪ್ರಥಮ, ವಿ. ಗುರು ಶಂಕರ್- ದ್ವಿತೀಯ ಮತ್ತು ಮೈಸೂರು ನಗರದ ಟಿ. ಆನಂದ ಭೈರವ- ತೃತೀಯ ಸ್ಥಾನ ಪಡೆದರು.

ಎತ್ತರ ಜಿಗಿತದಲ್ಲಿ, ಮೈಸೂರಿನ ಅಭಿಜಿತ್ ಸಿಂಗ- ಪ್ರಥಮ, ಬೆಳಗಾವಿಯ ನಾಗರಾಜ ಗೌಡ- ದ್ವಿತೀಯ ಮತ್ತು ರಾಜೇನಾಯಕ್ ಮತ್ತು ಎ. ರವಿ ಒಟ್ಟಿಗೆ ಮೂರನೇ ಸಾನ ಗಳಿಸಿದರು. ೧೦೦ ಮೀ ಹರ್ಡಲ್ಸ್‌ನಲ್ಲಿ ಬೆಳಗಾವಿಯ ಅಕ್ಷಯ್ ಶಲಾವಾಡಿ- ಪ್ರಥಮ, ಬೆಳಗಾವಿಯ ಎಂ.ಡಿ. ದಯಾನೇಶ್ವರ್- ದ್ವಿತೀಯ ಮತ್ತು ಬೆಂಗಳೂರು ಗ್ರಾಮಾಂತರದ ಎಂ. ಅಮೋಘ್- ತೃತೀಯ ಸ್ಥಾನ ಪಡೆದರು.

೪*೧೦೦ ಮೀ. ರಿಲೇನಲ್ಲಿ ಮೈಸೂರಿನ ಟಿ.ಆರ್. ಅನುಶ್, ಎಸ್. ಸಂದೀಪ್ ಕುಮಾರ್, ಎ. ಹಸನ್, ಮನೀಶ್- ಪ್ರಥಮ, ಬೆಂಗಳೂರು ನಗರದ ನಿಶಾಲ್ ಜೈನ್ ಎಂ.ಜೆ. ಅಶ್ವಿನ್, ಅರ್ಜುನ್ ಅಜಯ್, ಕೆ.ಎಂ.ಅಯ್ಯಪ್ಪ- ದ್ವಿತೀಯ ಮತ್ತು ಬೆಳಗಾವಿಯ ಅಕ್ಷಯ್ ತರಾಳೆ, ಪೈಗಂಬರ್, ಮುತ್ತುರಾಜ್ ಪಡ್‌ಗರ್ ಮತ್ತು ಶುಭಂ- ತೃತೀಯ ಸ್ಥಾನ ಪಡೆದರು.

ವನಿತೆಯರ ವಿಭಾಗ:

ವನಿತೆಯರ ೪*೧೦೦ ಮೀ. ರಿಲೇಯಲ್ಲಿ ಬೆಂಗಳೂರು ನಗರದ ಅಫ್ಸನಾ ಬೇಗಂ, ಪ್ರಜ್ಞಾ ಎಸ್. ಪ್ರಕಾಶ್, ನಿತ್ಯಶ್ರೀ ಮತ್ತು ರೀನಾ ಜಾರ್ಜ್ ತಂಡ ೪೭:೦೦ ಸೆಕೆಂಡ್‌ನಲ್ಲಿ ಪೂರ್ಣಗೊಳಿಸಿ ನೂತನ ದಾಖಲೆ ಸೃಷ್ಟಿಸಿತು. ಮೈಸೂರಿನ ಪಿ. ಹರ್ಷಿತಾ, ಎನ್.ಎಸ್. ಇಂಚರಾ, ಎಂ. ಲಿಖಿತಾ ಮತ್ತು ಎಚ.ಆರ್. ನವಮಿ- ದ್ವಿತೀಯ ಮತ್ತು ಬೆಳಗಾವಿಯ ಲಕ್ಷ್ಮಿ ಜಿ. ಚವಾನ್, ನಯನ ಪಿ. ಜಾಧವ್, ಸ್ನೇಹಾ ಚವಾನ್ ಮತ್ತು ಪದ್ಮಾ ಖವಾಡೆ- ತೃತೀಯ ಸ್ಥಾನ ಪಡೆದರು.

ಮಹಿಳೆಯರ ೧೫೦೦ ಮೀ. ವಿಭಾಗದಲ್ಲಿ ಮೈಸೂರಿನ ತಿಪ್ಪವ್ವ ಸಣ್ಣಕ್ಕಿ (೧) ಶ್ರದ್ಧಾಶೆಟ್ಟಿ (೨) ಮತ್ತು ಬೆಂಗಳೂರು ನಗರದ ಆರ್. ಉಷಾ(೩) ಪ್ರಶಸ್ತಿ ಪಡೆದರು.

೪೦೦ ಮೀ. ಓಟದಲ್ಲಿ ಬೆಂಗಳೂರು ನಗರದ ನಿತ್ಯಶ್ರೀ (೧), ಆರ್.ಎ. ಚೈತ್ರಾ (೨) ಮತ್ತು ಸುಪ್ರೀತ (೩). ೧೦೦ ಮೀ. ಹರ್ಡಲ್ಸ್‌ನಲ್ಲಿ, ಬೆಂಗಳೂರು ನಗರದ ಪ್ರಜ್ಞಾ ಎಸ್. ಪ್ರಕಾಶ್(೧), ಪಿ. ಹರ್ಷಿತಾ- (೨) ಮತ್ತು ಎಸ್.ಜಿ. ಪ್ರಿಯಾಂಕ (೩). ಎತ್ತರ ಜಿಗಿತದಲ್ಲಿ ಮೈಸೂರಿನ ಅಭಿನಯ ಎಸ್. ಶೆಟ್ಟಿ (೧), ಚೈತ್ರ ವರ್‌ಣೇಕರ್(೨). ಡಿಸ್ಕಸ್ ಎಸೆತದಲ್ಲಿ ಮೈಸೂರಿನ ನವ್ಯ ಶೆಟ್ಟಿ (೧), ಬೆಂಗಳೂರು ನಗರದ ಪಿ.ಎಸ್. ಉಮಾ(೨) ಮತ್ತು ಬೆಂಗಳೂರು ಗ್ರಾಮಾಂತರದ ವಿ.ಎಂ. ಜಯಶೀಲಾ (೩).