ದೆಹಲಿ ಮೆಟ್ರೋ ನಿಲ್ದಾಣಕ್ಕೆ ಶ್ರೇಷ್ಠ ಕನ್ನಡಿಗನ ಹೆಸರಿಟ್ಟ ಮೋದಿ ಸರ್ಕಾರ!!

0
915

ಜನಸಂಖ್ಯೆ ಹೆಚ್ಚಾಗಿರುವುದರಿಂದ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಾನೆ ಇದೆ, ಎಂಬುದು ಎಲ್ಲ ಜನಸಾಮಾನ್ಯರಿಗೂ ತಿಳಿದಿರುವ ವಿಷಯವಾಗಿದೆ. ನಗರ ಪ್ರದೇಶಗಳಲ್ಲಿ ಹೆಚ್ಚಾಗಿರುವ ಟ್ರಾಫಿಕ್ ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ ಮತ್ತು ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ಜನಸಾಮಾನ್ಯರು ಅವರ ಕೆಲಸ ಕಾರ್ಯಗಳಿಗೆ ತಲುಪಬೇಕಾದ ಸಮಯಕ್ಕೆ ಸರಿಯಾಗಿ ಹೋಗಲು ಸಾಧ್ಯವಾಗುತ್ತಿಲ್ಲದ ಕಾರಣ ಮೆಟ್ರೋ ರೈಲು ನಗರವಾಸಿಗಳಿಗೆ ದೊಡ್ಡ ವರದಾನವಾಗಿದೆ. ದೆಹಲಿಯಿಂದ ಆರಂಭವಾಗಿ ದೇಶದ ಅನೇಕ ನಗರಗಳಲ್ಲಿ ಆರಂಭವಾಗಿರುವ ಮೆಟ್ರೋ ಸಂಚಾರ ಸದಾ ಒಂದಿಲ್ಲೊಂದು ಕಾರಣದಿಂದ ಸುದ್ದಿಯಲ್ಲಿದ್ದೆ ಇರುತ್ತೆ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಎರಡು ತೆಗೆದುಕೊಂಡ ಮಹತ್ತರವಾದ ನಿರ್ಣಯದಿಂದ ನಗರವಾದಿಗಳ ಮೆಚ್ಚುಗೆಗೆ ಈ ನಿರ್ಣಯವು ಪಾತ್ರವಾಗಿರುವುದರಿಂದ ಹಲವಾರು ವರ್ಷಗಳ ಕನಸ್ಸು ಇಂದು ನನಸ್ಸಾಗಿದೆ.

ದೆಹಲಿ ಮೆಟ್ರೋಗೆ. ಸಾರ್.ಎಂ. ವಿಶ್ವೇಶ್ವರಯ್ಯನವರ ಹೆಸರನ್ನು ಇಟ್ಟಿದ್ದಾರೆ:-

ಹಲವಾರು ವರ್ಷಗಳಿಂದ ಕನ್ನಡ ಮತ್ತು ಕನ್ನಡಿಗರ ಸ್ಥಾನಮಾನಗಳಿಗೆ ಮನ್ನಣೆ ಸಿಗುತ್ತಿಲ್ಲವೆಂದು ಮತ್ತು ಕೇಂದ್ರ ಸರ್ಕಾರವು ಕನ್ನಡಿಗರ ಪರವಾಗಿ ಮಲತಾಯಿದೋರಣೆ ತೋರುತ್ತಿದೆಯೆಂದು ಹಲವಾರು ಕನ್ನಡಪರ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಾ ಬಂದಿರುವುದು ಈಗ ಹಳೆ ವಿಚಾರ. ರಾಷ್ಟ ರಾಜಧಾನಿ ದೆಹಲಿಯಲ್ಲಿನ ಕನ್ನಡಿಗರ ಕೂಗಿಗೆ ಕೊನೆಗೂ ಮನ್ನಣೆ ಸಿಕ್ಕಿದೆ. ಇಲ್ಲಿನ ಕರ್ನಾಟಕ ಸಂಘದ ಮುಂದಿರುವ ಮೆಟೋ ನಿಲ್ದಾಣಕ್ಕೆ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯರವರ ಹೆಸರನ್ನು ನಾಮಕರಣ ಮಾಡಿರುವುದು ಕನ್ನಡಿಗರ ಸಂತೋಷಕ್ಕೆ ಕಾರಣವಾಗಿದೆ.

ವಿಶ್ವೇಶ್ವರಯ್ಯನವರ ಹೆಸರಿಡಲು ಮೋದಿ ಸರ್ಕಾರ ಒಪ್ಪಿಗೆ ನೀಡಿದೆ, ಆ ಮೂಲಕ ಕರ್ನಾಟಕ ಭಾರತಕ್ಕೆ ನೀಡಿದ ಮಹಾಪುರುಷನ ಹೆಸರಿಗೆ ಗೌರವ ಸಮರ್ಪಿಸಿದೆ. ಆ ಮೂಲಕ ದೆಹಲಿ ಮೂಲದ ಕನ್ನಡಿಗರ ಹಲವು ದಿನಗಳ ಬೇಡಿಕೆ ಈಡೇರಿಸಿದಂತಾಗಿದೆ.

ಈಗಾಗಲೇ ದೆಹಲಿ ಮೆಟ್ರೋ ನಿಲ್ದಾಣಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್, ಜವಾಹರಲಾಲ್ ನೆಹರು ಹಾಗು ಅನೇಕ ಗಣ್ಯರ ಹೆಸರನ್ನು ಇಡಲಾಗಿದೆ. ಈ ಗಣ್ಯರ ಸಾಲಿಗೆ ನಮ್ಮ ಹೆಮ್ಮೆಯ ಕನ್ನಡಿಗರಾದ ಸರ್. ಎಂ. ವಿಶ್ವೇಶ್ವರಯ್ಯನವರ ಹೆಸರು ಸೇರ್ಪಡೆಯಾಗುತ್ತಿರುವುದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆ ಪಡುವ ವಿಚಾರ.

ಈ ಮೆಟ್ರೋ ನಿಲ್ದಾಣವು ದೆಹಲಿ ಕನ್ನಡ ಸಂಘದ ಎದುರಿದ್ದ ವಿಶ್ವೇಶ್ವರಯ್ಯನವರ ಹೆಸರನ್ನು ನಾಮಕರಣ ಮಾಡುವಂತೆ ದೆಹಲಿ ಕರ್ನಾಟಕ ಸಂಘವು ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ಗೆ ಮನವಿ ಸಲ್ಲಿಸಿದ್ದರು. ಶನಿವಾರ ದೆಹಲಿ ಕರ್ನಾಟಕ ಸಂಘದ ಮುಂದಿರುವ ಮೋತಿಬಾಗ್ ಮೆಟ್ರೋ ನಿಲ್ದಾಣಕ್ಕೆ ವಿಶ್ವೇಶ್ವರಯ್ಯನವರ ಹೆಸರನ್ನು ನಾಮಕರಣ ಮಾಡಲಾಗಿದೆ. ಅಂದಿನ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಅವರು ಈ ವಿಷಯ ಪ್ರಸ್ತಾಪಿಸಿದ್ದರು, ಆ ವಿಷಯಕ್ಕೆ ದೆಹಲಿಯಲ್ಲಿ ಇಂದು ಮನ್ನಣೆ ಸಿಕ್ಕಿದಂತಾಗಿದೆ.